newsfirstkannada.com

×

ವಿಂಡೀಸ್​ ಟೆಸ್ಟ್​​ ಸೀರೀಸ್​​ನಿಂದ ಕೈ ಬಿಟ್ಟ ಬಿಸಿಸಿಐ; ಶತಕ ಸಿಡಿಸಿ ಖಡಕ್​​ ಉತ್ತರ ಕೊಟ್ಟ ಚೇತೇಶ್ವರ ಪೂಜಾರ

Share :

Published July 7, 2023 at 7:35pm

Update July 7, 2023 at 7:37pm

    ವೆಸ್ಟ್​ ಇಂಡೀಸ್​ ಸೀರೀಸ್​ನಿಂದ ಕೈ ಬಿಟ್ಟಿದ್ದ ಬಿಸಿಸಿಐಗೆ ಕೌಂಟರ್​​

    ಬಿಸಿಸಿಐಗೆ ಕೌಂಟರ್​​ ಕೊಟ್ಟ ಭಾರತ ತಂಡದ ಚೇತೇಶ್ವರ್​ ಪೂಜಾರ

    ಅಬ್ಬರದ ಶತಕ ಸಿಡಿಸಿ ಚೇತೇಶ್ವರ್​ ಪೂಜಾರ ಕೊಟ್ಟ ಸಂದೇಶವೇನು?

ವೆಸ್ಟ್​​ ಇಂಡೀಸ್ ಟೆಸ್ಟ್​ ಸೀರೀಸ್​​ನಿಂದ ಕೈ ಬಿಟ್ಟ ನಂತರ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯ ತಂಡದ ಪರ ಭರ್ಜರಿ ಶತಕ ಬಾರಿಸಿದರು. ಈ ಮೂಲಕ ತನ್ನನ್ನು ವೆಸ್ಟ್​ ಇಂಡೀಸ್​​ ಟೂರ್ನಿಗೆ ಕೈ ಬಿಟ್ಟ ಬಿಸಿಸಿಐ ವಿರುದ್ಧ ಪೂಜಾರ ಖಡಕ್​​ ಉತ್ತರ ನೀಡಿದರು.

ಸದ್ಯ ಬೆಂಗಳೂರಿನ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರೋ 2023ರ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಪಶ್ಚಿಮ ವಲಯ ತಂಡ ಕೇಂದ್ರ ವಲಯ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ.

3ನೇ ದಿನದಂದು ಕೇಂದ್ರ ವಲಯದ ವಿರುದ್ಧ ಬ್ಯಾಟಿಂಗ್​​ ಮಾಡಿದ 35 ವರ್ಷದ ಚೇತೇಶ್ವರ ಪೂಜಾರ 278 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 133 ರನ್ ಗಳಿಸಿದ್ದಾರೆ. ಬಳಿಕ ವಿಕೆಟ್​​ ಒಪ್ಪಿಸಿ ಪೆವಿಲಿಯನ್​ಗೆ ಹಿಂತಿರುಗಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ 102 ಎಸೆತಗಳನ್ನು ಆಡಿದ್ದ ಚೇತೇಶ್ವರ ಪೂಜಾರ ಕೇವಲ 28 ರನ್​​ ಗಳಿಸಿ ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸಿದ್ದರು. ಈಗ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಬಿಸಿಸಿಐ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಂಡೀಸ್​ ಟೆಸ್ಟ್​​ ಸೀರೀಸ್​​ನಿಂದ ಕೈ ಬಿಟ್ಟ ಬಿಸಿಸಿಐ; ಶತಕ ಸಿಡಿಸಿ ಖಡಕ್​​ ಉತ್ತರ ಕೊಟ್ಟ ಚೇತೇಶ್ವರ ಪೂಜಾರ

https://newsfirstlive.com/wp-content/uploads/2023/07/Cheteshwar-Pujara.jpg

Load More