newsfirstkannada.com

ದೆಹಲಿ ಜೊತೆ ವಿಶ್ವದ ಟಾಪ್ 10 ಪಟ್ಟಿ ಸೇರಿಕೊಂಡ ಮತ್ತೆರಡು ಮಹಾನಗರ.. ನಿಜಕ್ಕೂ ಇದು ಆಘಾತಕಾರಿ ವಿಷಯ!

Share :

14-11-2023

  ಪಟಾಕಿ ಬ್ಯಾನ್ ಅಂದ್ರೂ ಕೇರ್ ಮಾಡದ ದೆಹಲಿ ನಿವಾಸಿಗಳು

  ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಹೊಡೆದ ಮೇಲೆ AQI 680ಕ್ಕೂ ಹೆಚ್ಚು

  ಟಾಪ್‌ 10 ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಮುಂಬೈ ಮಹಾನಗರ

ನವದೆಹಲಿ: ದೀಪಾವಳಿ ಹಬ್ಬದ ಪಟಾಕಿ ಸಂಭ್ರಮ ಮಹಾನಗರಗಳಿಗೆ ಮಾರಕವಾಗಿದೆ. ಮೊದಲೇ ರಾಷ್ಟ್ರ ರಾಜಧಾನಿ ದೆಹಲಿ ಜನ ಉಸಿರಾಡೋದಕ್ಕೂ ಕಷ್ಟ ಪಡುತ್ತಿದ್ದರು. ವಾಯು ಮಾಲಿನ್ಯದ ಗುಣಮಟ್ಟ ಅಪಾಯದ ಸ್ಥಿತಿಗೆ ಕುಸಿದಿತ್ತು. ದೀಪಾವಳಿಗೂ 2 ದಿನ ಮುಂಚೆಯಷ್ಟೇ ತುಂತುರು ಮಳೆ ಬಂದು ಸ್ವಲ್ಪ ನಿಟ್ಟುಸಿರು ಬಿಡುವ ವಾತಾವರಣ ಸೃಷ್ಟಿಯಾಗಿತ್ತು. ಆದ್ರೀಗ ಪಟಾಕಿಗಳ ಅಬ್ಬರ ಮತ್ತೆ ದೆಹಲಿ ಮಾಲಿನ್ಯ ಕುಸಿಯುವಂತೆ ಮಾಡಿದೆ.

ಪಟಾಕಿ ಬ್ಯಾನ್ ಅಂತ ಹೇಳಿದ್ರು ಸರ್ಕಾರದ ಮಾತು ಕೇಳಿದ ದೆಹಲಿ ಜನ ಪಟಾಕಿ ಹಚ್ಚಿ ದೀಪಾವಳಿ ಆಚರಿಸಿದ್ದಾರೆ. ಈ ಪಟಾಕಿ ಬಾಂಬ್‌ಗಳ ಆರ್ಭಟದಿಂದ ಮತ್ತೆ ದೆಹಲಿ ವಾತಾವರಣ ಸಂಪೂರ್ಣವಾಗಿ ಹಾಳಾಗಿದೆ. ಮಳೆ ಬಂದಾಗ ವಾಯು ಗುಣಮಟ್ಟ ಸೂಚ್ಯಂಕ 200 ಇದ್ದು ಪಟಾಕಿ ಹೊಡೆದ ಮೇಲೆ ಮತ್ತೊಮ್ಮೆ AQI 680ಕ್ಕೆ ತಲುಪಿದೆ. ಇದರಿಂದ ದೆಹಲಿ ಮತ್ತೊಮ್ಮೆ ಗ್ಯಾಸ್ ಚೇಂಬರ್ ಆಗಿ ಬದಲಾಗಿದೆ.

ದೆಹಲಿ ಮಾಲಿನ್ಯದ ಕಂಟಕ ಒಂದು ಕಡೆಯಾದ್ರೆ ದೀಪಾವಳಿಯಿಂದ ದೇಶದ ಮತ್ತೆರಡು ಮಹಾನಗರಗಳು ಅತ್ಯಂತ ಕಲುಷಿತ ನಗರಗಳ ಪಟ್ಟಿಗೆ ಸೇರಿದೆ. ವಿಶ್ವದ ಟಾಪ್ 10 ಕಲುಷಿತ ನಗರಗಳ ಪಟ್ಟಿಯಲ್ಲಿ ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಕೊಲ್ಕತ್ತಾ ಸೇರಿಕೊಂಡಿದೆ. ಮುಂಬೈ ಸದ್ಯ ಟಾಪ್‌ 10 ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಮುಂಬೈ ವಾಯು ಗುಣಮಟ್ಟ ಸೂಚ್ಯಂಕ (AQI) 157ಕ್ಕೆ ತಲುಪಿದೆ. ಇನ್ನು ಕೊಲ್ಕತ್ತಾದಲ್ಲಿ AQI 154 ಇದ್ದು 7ನೇ ಸ್ಥಾನದಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿ ಜೊತೆ ವಿಶ್ವದ ಟಾಪ್ 10 ಪಟ್ಟಿ ಸೇರಿಕೊಂಡ ಮತ್ತೆರಡು ಮಹಾನಗರ.. ನಿಜಕ್ಕೂ ಇದು ಆಘಾತಕಾರಿ ವಿಷಯ!

https://newsfirstlive.com/wp-content/uploads/2023/11/Delhi-Pollution-1-2.jpg

Load More