ಜಗತ್ತಿನಲ್ಲಿ ಅತಿಹೆಚ್ಚು ಚಿನ್ನವನ್ನು ಕಾಯ್ದಿಟ್ಟುಕೊಂಡ ದೇಶ ಯಾವುದು
ಫೋರ್ಬ್ಸ್ ಬಿಡುಗಡೆ ಮಾಡಿರುವ 20 ದೇಶಗಳಲ್ಲಿ ನಂಬರ್ 1 ಯಾರು
ಫೋರ್ಬ್ಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?
ನವದೆಹಲಿ: ಜಗತ್ತಿನ ಎಲ್ಲಾ ದೇಶಗಳು ತಮ್ಮ ಶಕ್ತ್ಯಾನುಸಾರ ಚಿನ್ನವನ್ನು ತಮ್ಮಲ್ಲಿ ಕಾಯ್ದಿಟ್ಟುಕೊಳ್ಳುತ್ತವೆ ಅಂದ್ರೆ ರಿಸರ್ವ್ ಇಟ್ಟುಕೊಂಡಿರುತ್ತದೆ. ಯಾಕೆ ಎಲ್ಲಾ ದೇಶಗಳು ಚಿನ್ನವನ್ನು ಕಾಯ್ದಿಟ್ಟುಕೊಳ್ಳುತ್ತವೆ ಅಂದ್ರೆ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಹಾಗೂ ಅಗತ್ಯತೆಯ ಮೇರೆಗೆ ಪ್ರತಿ ದೇಶವು ಚಿನ್ನವನ್ನು ರಿಸರ್ವ್ವಾಗಿಟ್ಟುಕೊಂಡಿರುತ್ತವೆ. ಈ ಒಂದು ಪದ್ಧತಿ ಆರಂಭವಾಗಿದ್ದು 1800ನೇ ಇಸ್ವಿಯಿಂದ 19ನೇ ಶತಮಾನದಲ್ಲಿ ಅದು ಎಲ್ಲಾ ದೇಶಗಳ ಆರ್ಥಿಕತೆಯ ಒಂದು ಭಾಗವಾಗಿಯೇ ಉಳಿದುಕೊಂಡು ಬಿಟ್ಟಿದೆ.
ಇದನ್ನೂ ಓದಿ: VIDEO: ಗಂಡನಿಂದ ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಮಹಿಳೆಗೆ ಕೋರ್ಟ್ ಛೀಮಾರಿ; ಆಮೇಲೇನಾಯ್ತು?
ಈಗಿನ ಕಾಲದಲ್ಲಿ ಪ್ರತಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹಾಗೂ ಕರೆನ್ಸಿಯನ್ನು ಆಯಾ ದೇಶ ಹೊಂದಿರುವ ಬಂಗಾರದ ಕಾಯ್ದಿಟ್ಟ ಪ್ರಮಾಣಕ್ಕೆ ಹೋಲಿಸಿ ನೋಡಲಾಗುತ್ತದೆ. ಪ್ರತಿಯೊಂದು ಕರೆನ್ಸಿಯೂ ಆಯಾ ದೇಶದ ಒಟ್ಟು ಗೋಲ್ಡ್ ರಿಸರ್ವ್ ಮೇಲೆ ಅವಲಂಬಿತವಾಗಿರುತ್ತದೆ.
ಇದನ್ನೂ ಓದಿ: ಅಮಿತ್ ಶಾ ಮಗನಿಗೆ ಬಿಗ್ ಆಫರ್.. ಜಯ್ ಶಾಗಾಗಿ ಈ 16 ರಾಷ್ಟ್ರಗಳು ಬ್ಯಾಟಿಂಗ್ ಮಾಡಿದ್ರೆ ಅತಿ ದೊಡ್ಡ ಪೋಸ್ಟ್ ಫಿಕ್ಸ್!
1970ರಲ್ಲಿ ಹಲವು ದೇಶಗಳು ತಮ್ಮ ಬಂಗಾರದ ಕಾಯ್ದಿರಿಸುವಿಕೆಯನ್ನು ಜೋರಾಗಿ ಮಾಡಿಕೊಳ್ಳತೊಡಗಿದವು. ಆರ್ಥಿಕ ಪರಿಸ್ಥಿತಿಯ ಅನಿಶ್ಚಿತತೆಯೂ ಬೆಳೆಯುವುದಕ್ಕೆ ಶುರುವಾದ ಮೇಲೆ ಗೋಲ್ಡ್ ರಿಸರ್ವ್ನ್ನು ಹೆಚ್ಚು ಸಂಗ್ರಹಿಸುವ ಅನಿವಾರ್ಯತೆ ಶುರುವಾಯ್ತು. ಹೀಗಾಗಿ ಪ್ರತಿ ದೇಶದ ರಿಸರ್ವ್ ಬ್ಯಾಂಕ್ಗಳು ಬಂಗಾರದ ಶೇಖರಣೆಗೆ ಮುಂದಾದವು. ಬಂಗಾರದ ಕಾಯ್ದಿರಿಸುವಿಕೆಯ ಪ್ರಮಾಣ ಆಯಾ ದೇಶದ ಸಾಲದ ಅರ್ಹತೆಯನ್ನು ಚಿತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಇತ್ತೀಚೆಗೆ ಫೋರ್ಬ್ಸ್,ಅತಿಹೆಚ್ಚು ಚಿನ್ನ ಕಾಯ್ದಿರಿಸಿಕೊಂಡ ದೇಶದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಅಮೆರಿಕಾ ಮೊದಲನೇ ಸ್ಥಾನದಲ್ಲಿದೆ. ಭಾರತಕ್ಕೆ 9ನೇ ಸ್ಥಾನ ದಕ್ಕಿದೆ .ಯಾವ ಯಾವ ದೇಶ ಎಷ್ಟು ಟನ್ ಬಂಗಾರವನ್ನು ತನ್ನ ದೇಶದ ರಿಸರ್ವ್ ಬ್ಯಾಂಕ್ನಲ್ಲಿ ಕಾಯ್ದಿರಿಸಿದೆ ಅಂತ ನೋಡುವುದಾದ್ರೆ
1 ಅಮೆರಿಕಾ : 8133.46 ಟನ್
2 ಜರ್ಮನಿ: 3351.53 ಟನ್
3 ಇಟಲಿ: 2451.84 ಟನ್
4 ಫ್ರಾನ್ಸ್: 2436.97 ಟನ್
5 ರಷ್ಯಾ: 2335.85 ಟನ್
6 ಚೀನಾ: 2264.32 ಟನ್
7 ಜಪಾನ್: 845.97 ಟನ್
8 ಭಾರತ:840.76 ಟನ್
9 ನೆದರಲ್ಯಾಂಡ್: 612.45 ಟನ್
10 ಟರ್ಕಿ: 584.93ಟನ್
11 ಪೋರ್ಚುಗಲ್ : 382.66ಟನ್
12 ಪೋಲಂಡ್:377.37 ಟನ್
13 ಉಜ್ಬೇಕಿಸ್ತಾನ್: 365.15 ಟನ್
14 ಯುಕೆ: 310.29 ಟನ್
15 ಕಝಕಿಸ್ತಾನ್: 298.8ಟನ್
16 ಸ್ಪೇನ್: 281.58
17 ಆಸ್ಟ್ರೀಯಾ: 279.99 ಟನ್
18 ಸಿಂಗಾಪೂರ್: 228.86
20 ಬೆಲ್ಜಿಯಂ: 227.4
ಇನ್ನು ಅತಿಹೆಚ್ಚು ಬಂಗಾರವನ್ನು ಖರೀದಿ ಮಾಡುವ ದೇಶಗಳನ್ನು ನೋಡಿದ್ರೆ ಭಾರತ ಎರಡನೇ ಸ್ಥಾನದಲ್ಲಿದೆ. ಜಗತ್ತಿನಲ್ಲಿ ಅತಿಹೆಚ್ಚು ಚಿನ್ನದ ಆಭರಣ ಖರೀದಿ ಮಾಡುವ ದೇಶಗಳ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ರೆ, ಭಾರತ ಎರಡನೇ ಸ್ಥಾನದಲ್ಲಿದೆ. ಚೀನಾ ವರ್ಷಕ್ಕೆ 984 ಮೆಟ್ರಿಕ್ ಟನ್ ಚಿನ್ನದ ಆಭರಣಗಳನ್ನು ಖರೀದಿಸಿದರೆ, ಭಾರತದ ಗ್ರಾಹಕರು ವರ್ಷಕ್ಕೆ ಸುಮಾರು 849 ಟನ್ನಷ್ಟು ಬಂಗಾರದ ಆಭರಣಗಳನ್ನು ಖರೀದಿ ಮಾಡುತ್ತಾರೆ. ಚೀನಾ, ಭಾರತ ಬಿಟ್ಟರೆ ಅತಿ ಹೆಚ್ಚು ಚಿನ್ನಾಭರಣ ಖರೀದಿ ಮಾಡುವ ದೇಶ ಅರಬ್, ಅಮೆರಿಕಾ ಹಾಗೂ ಥೈಲ್ಯಾಂಡ್ ದೇಶಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ