newsfirstkannada.com

ಹೊಸ ದಾಖಲೆ ಬರೆದ ಕಾವಾಲಯ್ಯ ಸಾಂಗ್​​; ಇಲ್ಲಿದೆ ಟಾಪ್​​ 5 ಸಿನಿಮಾ ಸುದ್ದಿ!

Share :

05-08-2023

  ಬಾಲಿವುಡ್​ ಬಾದ್​ಶಾ ಜೊತೆ ನ್ಯಾಷನಲ್ ಕ್ರಶ್ ಸ್ಕ್ರೀನ್​ ಶೇರ್!

  'ಆಪರೇಷನ್ ಲಂಡನ್ ಕೆಫೆ' ಮುಗಿಸಿದ ಜೊತೆ ಜೊತೆಯಲಿ ನಟಿ

  ರಾಜ್ ಬಿ ಶೆಟ್ಟಿಯ 'ಟೋಬಿ' ಕಥೆ ಕೇಳಿ ಮಾಡಲ್ಲ ಎಂದಿದ್ದೇಕೆ ಅಪ್ಪು?

ಸೆಂಚುರಿ ಬಾರಿಸಿದ ‘ಕಾವಾಲಯ್ಯ’

ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗಿರುವ ಕಾವಾಲಯ್ಯ ಸಾಂಗ್​ ಈಗ ಯೂಟ್ಯೂಬ್​ನಲ್ಲಿ 100 ಮಿಲಿಯನ್ ವೀಕ್ಷಣೆ ಕಾಣುವ ಮೂಲಕ ದಾಖಲೆ ಬರೆದಿದೆ. ಜುಲೈ 6ರಂದು ರಿಲೀಸ್ ಆಗಿದ್ದ ಕಾವಾಲಯ್ಯ ಸಾಂಗ್ ನಾಲ್ಕನೇ ವಾರವೂ ಟ್ರೆಂಡಿಂಗ್​ನಲ್ಲಿದ್ದು, ತಮಿಳು ವರ್ಷನ್​ 100 ಮಿಲಿಯನ್ ವೀವ್ಸ್​ ಪಡೆದಿದೆ. ರಜಿನಿಕಾಂತ್, ತಮನ್ನಾ ಹೆಜ್ಜೆ ಹಾಕಿದ್ದ ಈ ಹಾಡನ್ನ ಅನಿರುದ್ಧ್ ರವಿಚಂದ್ರನ್ ಕಂಪೋಸ್ ಮಾಡಿದ್ದರು.

25 ಕೋಟಿ ಸಾಲಕ್ಕೆ ಸಮಂತಾ ಸ್ಪಷ್ಟನೆ

ಮಯೋಸೈಟಿಸ್​ ಕಾಯಿಲೆಯ ಚಿಕಿತ್ಸೆಗಾಗಿ 25 ಕೋಟಿ ಸಾಲ ಪಡೆದಿದ್ದಾರೆ ಎಂಬ ಸುದ್ದಿಗೆ ನಟಿ ಸಮಂತಾ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಸಮಂತಾ, ”ನನ್ನ ಆರೈಕೆ ನಾನು ಮಾಡಬಲ್ಲೆ, ಈ ಟ್ರೀಟ್​ಮೆಂಟ್​ಗೆ 25 ಕೋಟಿ ಖರ್ಚಾಗುತ್ತೆ ಅನ್ನೋದು ಸುಳ್ಳು.. ಈ ರೋಗದಿಂದ ಬಹಳಷ್ಟು ಜನ ಬಳಲುತ್ತಿದ್ದಾರೆ, ಇಂಥ ಸುದ್ದಿ ಹಬ್ಬಿಸಿ ಅವರಿಗೆ ಕೆಟ್ಟ ಮಾಹಿತಿ ಕೊಡಬೇಡಿ. ಚಿಕಿತ್ಸೆಗಾಗಿ ಬಹಳ ಸಣ್ಣ ಖರ್ಚು ಮಾಡ್ತಿದ್ದೇನೆ” ಅಷ್ಟೇ ಎಂದಿದ್ದಾರೆ.

ಶಾರುಖ್ ಖಾನ್ ಜೊತೆ ರಶ್ಮಿಕಾ ಮಂದಣ್ಣ!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಾಲಿವುಡ್​ ಬಾದ್​ಶಾ ಶಾರುಖ್ ಖಾನ್ ಜೊತೆ ಸ್ಕ್ರೀನ್​ ಶೇರ್ ಮಾಡಲಿದ್ದಾರೆ. ಆದರೆ ಇದು ಸಿನಿಮಾ ಅಲ್ಲ, ಜಾಹೀರಾತು ಅನ್ನೋದು ವಿಶೇಷ. ಯಶ್ ರಾಜ್ ಫಿಲ್ಮ್ಸ್ ನಿರ್ಮಿಸುತ್ತಿರುವ ಜಾಹೀರಾತಿನಲ್ಲಿ ರಶ್ಮಿಕಾ-ಶಾರುಖ್ ಒಟ್ಟಿಗೆ ನಟಿಸ್ತಿದ್ದು, ಈ ಜೋಡಿ ಒಟ್ಟಿಗೆ ಸಿನಿಮಾ ಮಾಡಲಿ ಎನ್ನುವ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್​ನಲ್ಲಿ ಸದ್ಯ ರಣಬೀರ್ ಕಪೂರ್ ನಟನೆಯ ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಅಭಿನಯಿಸಿದ್ದಾರೆ.

‘ಟೋಬಿ’ ಕಥೆ ಕೇಳಿ ಮಾಡಲ್ಲ ಎಂದಿದ್ದೇಕೆ ಅಪ್ಪು?

ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಜೋರಾಗಿದೆ. ಆದರೆ ಈ ಚಿತ್ರದ ಕಥೆ ಇದಕ್ಕೂ ಮೊದಲು ಪುನೀತ್ ರಾಜಕುಮಾರ್ ಬಳಿ ಹೋಗಿತ್ತು ಎನ್ನುವುದು ಬಹಿರಂಗವಾಗಿದೆ. ‘ಟೋಬಿ’ ಚಿತ್ರಕ್ಕೆ ಟಿಕೆ ದಯಾನಂದ್ ಕಥೆ ಮಾಡಿದ್ದು, ಮೊದಲು ಅಪ್ಪುಗೆ ಕಥೆ ಹೇಳಿದ್ರಂತೆ. ಕಥೆ ಕೇಳಿದ ಅಪ್ಪು ತುಂಬಾನೇ ಇಷ್ಟಪಟ್ಟರಂತೆ. ಆದ್ರೆ ಯೂತ್​ ಸಬ್ಜೆಕ್ಟ್​ ಕಡೆ ಹೆಚ್ಚು ಫೋಕಸ್ ಮಾಡಿದ್ದ ಅಪ್ಪು ಈ ಕಥೆಯಲ್ಲಿ ಎಮೋಷನ್ ಜಾಸ್ತಿಯಿದ್ದ ಕಾರಣ ಇನ್ನೊಂದು ಆ್ಯಪ್ಷನ್ ನೋಡಿ ಎಂದು ಸೂಚಿಸಿದ್ದರು ಎಂದು ಸ್ವತಃ ಟಿಕೆ ದಯಾನಂದ್ ಹೇಳಿಕೊಂಡಿದ್ದಾರೆ.

‘ಆಪರೇಷನ್ ಲಂಡನ್ ಕೆಫೆ’ ಮುಗಿಸಿದ ಮೇಘಾ ಶೆಟ್ಟಿ!

ನಟಿ ಮೇಘಾ ಶೆಟ್ಟಿ ಅಭಿನಯದ ‘ಆಪರೇಷನ್ ಲಂಡನ್ ಕೆಫೆ’ ಬಹುತೇಕ ಚಿತ್ರೀಕರಣ ಮುಗಿದಿದ್ದು, ಚಿತ್ರದ ಡಬ್ಬಿಂಗ್ ಹಂತದ ಚಟುವಟಿಕೆಗಳು ಭರದಿಂದ ಸಾಗುತ್ತಿದೆ. ಕವೀಶ್ ಶೆಟ್ಟಿ ನಾಯಕನಾಗಿರುವ ಈ ಚಿತ್ರವನ್ನ ಸಡಗರ ರಾಘವೇಂದ್ರ ನಿರ್ದೇಶಿಸಿದ್ದು, ಕನ್ನಡದ ಜೊತೆಗೆ ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಹೊಸ ದಾಖಲೆ ಬರೆದ ಕಾವಾಲಯ್ಯ ಸಾಂಗ್​​; ಇಲ್ಲಿದೆ ಟಾಪ್​​ 5 ಸಿನಿಮಾ ಸುದ್ದಿ!

https://newsfirstlive.com/wp-content/uploads/2023/07/jailer-movie-2.jpg

Load More