newsfirstkannada.com

ಪೂಜಾ ಹೆಗ್ಡೆ ಜೊತೆ ತಮಿಳು ನಟ ವಿಜಯ್ ರೀಲ್ಸ್​​; ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು..

Share :

24-06-2023

    ಸೂಪರ್​ಸ್ಟಾರ್​ ರಜನಿಕಾಂತ್ ನಟನೆಯ ಜೈಲರ್ ಚಿತ್ರದ ಡಬ್ಬಿಂಗ್ ಕೆಲಸ ಮುಕ್ತಾಯ

    ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸಮಾಧಿಗೆ ನಟಿ ರಚಿತಾ ರಾಮ್ ಭೇಟಿ

    ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿ ಮಲಯಾಳಂ ಚಿತ್ರದ ಪೋಸ್ಟರ್​ ರಿಲೀಸ್

ಬೆಂಗಳೂರಿನಲ್ಲಿ ಜೈಲರ್ ಡಬ್ಬಿಂಗ್

ಸೂಪರ್​ಸ್ಟಾರ್​ ರಜನಿಕಾಂತ್ ನಟನೆಯ ಜೈಲರ್ ಚಿತ್ರದ ಡಬ್ಬಿಂಗ್ ಕೆಲಸ ಬೆಂಗಳೂರಿನಲ್ಲಿ ನಡೆಯುತ್ತಿದೆ. ಜೈಲರ್ ಚಿತ್ರದಲ್ಲಿ ರಜಿನಿ ಜೊತೆ ಕನ್ನಡ ನಟ ಶಿವರಾಜ್ ಕುಮಾರ್ ಸಹ ಅಭಿನಯಿಸಿದ್ದು, ಶಿವಣ್ಣ ಅವರ ಭಾಗದ ಡಬ್ಬಿಂಗ್ ಬೆಂಗಳೂರಿನಲ್ಲಿ ಸಾಗ್ತಿದೆ. ತಮಿಳು, ಕನ್ನಡ ಸೇರಿ ಐದು ಭಾಷೆಯಲ್ಲಿ ರಿಲೀಸ್ ಆಗಲಿರುವ ಜೈಲರ್ ಚಿತ್ರಕ್ಕೆ ಖುದ್ದು ಶಿವಣ್ಣನೇ ಡಬ್ ಮಾಡ್ತಿರೋದು ವಿಶೇಷ. ಡಬ್ಬಿಂಗ್ ವೇಳೆ ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಸಹ ಭಾಗಿಯಾಗಿದ್ದು, ಆಗಸ್ಟ್​ 11ಕ್ಕೆ ಸಿನಿಮಾ ಬಿಡುಗಡೆಯಾಗ್ತಿದೆ.

ಜಯಲಲಿತಾ ಸಮಾಧಿಗೆ ನಮಿಸಿದ ರಚಿತಾ ರಾಮ್

ಸ್ಯಾಂಡಲ್​ವುಡ್ ನಟಿ ರಚಿತಾ ರಾಮ್ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಮಾಧಿಗೆ ನಮಿಸಿದ್ದಾರೆ. ಇತ್ತೀಚೆಗಷ್ಟೇ ಚೆನ್ನೈಗೆ ತೆರಳಿದ್ದ ಡಿಂಪಲ್ ಕ್ವೀನ್ ಚೆನ್ನೈನ ಮರೀನಾ ಬೀಚ್​ನಲ್ಲಿರುವ ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಪೂಜಾ ಹೆಗ್ಡೆ-ವಿಜಯ್ ರೀಲ್ಸ್

ಬೀಸ್ಟ್​ ಚಿತ್ರದ ಶೂಟಿಂಗ್ ಸೆಟ್​ನಲ್ಲಿ ನಟಿ ಪೂಜಾ ಹೆಗ್ಡೆ ಮತ್ತು ತಮಿಳು ನಟ ವಿಜಯ್ ರೀಲ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಅಲಾ ವೈಕುಂಠಪುರಂಲೋ ಚಿತ್ರದ ಬುಟ್ಟಬೊಮ್ಮಾ ಹಾಡಿಗೆ ಮಕ್ಕಳ ಜೊತೆ ಗೂಡಿ ವಿಜಯ್ ಮತ್ತು ಪೂಜಾ ಡ್ಯಾನ್ಸ್​ ಮಾಡಿದ್ದಾರೆ. ಈ ವಿಡಿಯೋವನ್ನ ಸ್ವತಃ ಪೂಜಾ ಹಗ್ಡೆ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಶೇರ್ ಮಾಡಿ ನೆನಪು ಮೆಲುಕು ಹಾಕಿದ್ದಾರೆ. ಅಂದ್ಹಾಗೆ, ಬೀಸ್ಟ್​ ಚಿತ್ರದಲ್ಲಿ ವಿಜಯ್ ಮತ್ತು ಪೂಜಾ ಒಟ್ಟಿಗೆ ನಟಿಸಿದ್ದರು.

View this post on Instagram

A post shared by Pooja Hegde (@hegdepooja)

ಪ್ರಭಾಸ್ ಮುಂದಿನ ಚಿತ್ರದ ಟೈಟಲ್ ಏನು?

ಪ್ರಭಾಸ್ ನಟಿಸುತ್ತಿರುವ ‘ಪ್ರಾಜೆಕ್ಟ್​ಕೆ’ ಚಿತ್ರದ ಟೈಟಲ್ ಏನು ಅನ್ನೋದಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್ ಅಭಿನಯಿಸುತ್ತಿದ್ದು, ಸದ್ಯಕ್ಕೆ ‘ಪ್ರಾಜೆಕ್ಟ್​ಕೆ’ ಎನ್ನುವ ವರ್ಕಿಂಗ್ ಟೈಟಲ್​ನಲ್ಲಿ ಈ ಚಿತ್ರದ ಶೂಟಿಂಗ್ ಸಾಗ್ತಿದೆ. ಆದ್ರೀಗ ಚಿತ್ರದ ಟೈಟಲ್ ಹಾಗೂ ಮೋಷನ್ ಪೋಸ್ಟರ್ ಲಾಂಚ್ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಇದಕ್ಕಾಗಿ ಜುಲೈ ಎರಡನೇ ವಾರ ಅಮೆರಿಕಾದಲ್ಲಿ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಇದೆಯಂತೆ.

ಮಲಯಾಳಂ ಚಿತ್ರದಲ್ಲಿ ರಾಗಿಣಿ

ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿ ಮಲಯಾಳಂ ಚಿತ್ರದಲ್ಲಿ ನಟಿಸ್ತಾ ಇದ್ದಾರೆ. ‘ಶೀಲ’ ಎನ್ನುವ ಚಿತ್ರದಲ್ಲಿ ರಾಗಿಣಿ ಅಭಿನಯಿಸುತ್ತಿದ್ದು, ಈ ಚಿತ್ರ ಮಲಯಾಳಂ ಜೊತೆ ಕನ್ನಡದಲ್ಲೂ ಬಿಡುಗಡೆಯಾಗಲಿದೆಯಂತೆ. ಡಿ.ಎಂ.ಪಿಳ್ಳೆ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಬಾಲು ನಾರಾಯಣನ್ ನಿರ್ದೇಶಿಸಿದ್ದಾರೆ. ಫಸ್ಟ್​ ಲುಕ್ ಪೋಸ್ಟರ್​ ರಿಲೀಸ್ ಆಗಿದ್ದು ಶೀಘ್ರದಲ್ಲೇ ಟ್ರೇಲರ್ ಲಾಂಚ್ ಆಗಲಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಪೂಜಾ ಹೆಗ್ಡೆ ಜೊತೆ ತಮಿಳು ನಟ ವಿಜಯ್ ರೀಲ್ಸ್​​; ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು..

https://newsfirstlive.com/wp-content/uploads/2023/06/rachitha-3.jpg

Load More