ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಭರಾಟೆ ಬ್ಯೂಟಿ ಶ್ರೀಲೀಲಾ
ದುಡ್ಡು ತಗೊಂಡು ವೋಟ್ ಹಾಕಬೇಡಿ ವಿದ್ಯಾರ್ಥಿಗಳಿಗೆ ಸಲಹೆ ಕೊಟ್ಟ ನಟ ವಿಜಯ್
ಆಲಿಯಾ ಭಟ್ ನಟಿಸಿರುವ ಹಾರ್ಟ್ ಆಫ್ ಸ್ಟೋನ್ ಚಿತ್ರದ ಟ್ರೈಲರ್ ಬಿಡುಗಡೆ
ಅಲ್ಲು ಅರ್ಜುನ್ ಜೊತೆ ಶ್ರೀಲೀಲಾ ಮಿಂಚಿಂಗ್
ಕನ್ನಡದ ಕಿಸ್ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಭರಾಟೆ ಬ್ಯೂಟಿ ಶ್ರೀಲೀಲಾ ಈಗ ತೆಲುಗು ಅಂಗಳದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಮೊನ್ನೆ ಶ್ರೀಲೀಲಾ ಬರ್ತ್ಡೇ ಟಾಲಿವುಡ್ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಶ್ರೀಲೀಲಾ ಫೋಟೊವೊಂದು ಬಿಡುಗಡೆಯಾಗಿತ್ತು. ಈಗ ಆಹಾ ಒಟಿಟಿ ಬಳಗ ಒಂದು ಮಸ್ತ್ ಟೀಸರ್ ಅನ್ನ ಬಿಡುಗಡೆ ಮಾಡಿದೆ. ಈ ಟೀಸರ್ನಲ್ಲಿ ಶ್ರೀಲೀಲಾ ಅವರು ಅಲ್ಲು ಅರ್ಜುನ್ ಜೊತೆ ಸಖತ್ ಆಗಿ ಮಿಂಚಿದ್ದಾರೆ..
ದುಡ್ಡು ತಗೊಂಡು ವೋಟ್ ಹಾಕಬೇಡಿ – ವಿಜಯ್
ತಮಿಳು ನಟ ವಿಜಯ್ ರಾಜಕೀಯಕ್ಕೆ ಬರ್ತಾರೆ ಎಂಬ ಸುದ್ದಿಗಳು ಚಾಲ್ತಿಯಲ್ಲಿರುವಾಗಲೇ ವಿಜಯ್ ಕೊಟ್ಟ ಹೇಳಿಕೆಯೊಂದು ಈಗ ಸದ್ದು ಮಾಡ್ತಿದೆ. 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನ ಸನ್ಮಾಸಿದ ವಿಜಯ್, ಈ ವೇಳೆ ವಿದ್ಯಾರ್ಥಿಗಳಿಗೆ ಒಂದು ಸಲಹೆ ಕೊಟ್ಟರು.. ನೀವು ಮುಂದಿನ ಭವಿಷ್ಯ. ಒಳ್ಳೆಯ ನಾಯಕರನ್ನ ಆಯ್ಕೆ ಮಾಡಿಕೊಳ್ಳುವ ಹಕ್ಕು ಪಡೀತಿರಾ.. ಯಾವುದೇ ಕಾರಣಕ್ಕೂ ದುಡ್ಡು ತಗೊಂಡು ವೋಟ್ ಹಾಕಬೇಡಿ ಎಂದಿದ್ದಾರೆ. ಈ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದ್ದು, ವಿಜಯ್ ರಾಜಕೀಯ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಹೇಳಲಾಗುತ್ತಿದೆ.
‘ಹಾರ್ಟ್ ಆಫ್ ಸ್ಟೋನ್’ ಟ್ರೇಲರ್
ಬಾಲಿವುಡ್ ನಟಿ ಆಲಿಯಾ ಭಟ್ ನಟಿಸಿರುವ ಹಾರ್ಟ್ ಆಫ್ ಸ್ಟೋನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನೆಟ್ಪ್ಲಿಕ್ಸ್ ನಿರ್ಮಾಣದ ಈ ಚಿತ್ರದಲ್ಲಿ ಗಲ್ ಗೆದೋಟ್, ಜೆಮ್ಮಿ ಡೋರ್ನನ್ ಜೊತೆ ಆಲಿಯಾ ಭಟ್ ಸಹ ಕಾಣಿಸಿಕೊಂಡಿದ್ದು, ಟ್ರೇಲರ್ ಸಖತ್ ಸದ್ದು ಮಾಡ್ತಿದೆ. ಇನ್ನು ಟಾಮ್ ಹರ್ಪರ್ ಈ ಚಿತ್ರ ನಿರ್ದೇಶಿಸಿದ್ದು, ಆಗಸ್ಟ್ 11ಕ್ಕೆ ವರ್ಲ್ಡ್ ಪ್ರಿಮಿಯರ್ ಕಾಣ್ತಿದೆ.
ಮಹೇಂದ್ರ ಮುನ್ನತ್ ಅವರ ಮತ್ತೊಂದು ಗೋ ಸೇವೆ..
ಗೋ ಸೇವೆಗಾಗಿ 44 ಲಕ್ಷ ರೂಪಾಯಿ ದೇಣಿಗೆ ನೀಡಿ ಗೋಪ್ರೇಮ ಮೆರೆದಿದ್ದಾರೆ ಗೋಪ್ರೇಮಿ ಮಹೇಂದ್ರ ಮುನ್ನೋತ್. ವಿಜಯನಗರ ಮಾರುತಿ ಮೆಡಿಕಲ್ಸ್‌ನ ಗೋಸೇವಕ ಮಹೇಂದ್ರ ಮುನ್ನೋತ್ ಅವರು ತಮ್ಮ ತಂದೆ ತಾಯಿಯ ಪುಣ್ಯತಿಥಿಯಾ ಅಂಗವಾಗಿ ಪ್ರತಿ ವರ್ಷ ನೂರಾರು ಗಿಡಗಳನ್ನು ನೆಡುವ ʼವೃಕ್ಷಾರೋಹಣʼ ಕಾರ್ಯಕ್ರಮದೊಂದಿಗೆ ನಾಡಿನ ವಿವಿಧ ಗೋಶಾಲೆಗಳಿಗೆ ಅವಶ್ಯಕತೆಗಳಿಗೆ ಅನುಗುಣವಾಗಿ ದೇಣಿಗೆಯನ್ನು ನೀಡುತ್ತಾ ಬಂದಿರುತ್ತಾರೆ. ಅದರಂತೆ ಈ ಬಾರಿ ಹತ್ತಕ್ಕೂ ಹೆಚ್ಚು ಗೋಶಾಲೆಗಳನ್ನು ಒಳಗೊಂಡಂತೆ 44 ಲಕ್ಷ ರೂಪಾಯಿಗಳನ್ನು ಚೆಕ್ ಮುಖಾಂತರ ವಿತರಿಸಿದ್ದಾರೆ.
ತಮಿಳುನಾಡಿನಲ್ಲಿ ಯಶ್ ಕ್ರೇಜ್
ತಮಿಳುನಾಡಿನಲ್ಲಿ ಜೋರಾಗಿದೆ ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಕ್ರೇಜ್. ಕೆಜಿಎಫ್ ಬಳಿಕ ಯಶ್ ಹೊಸ ಸಿನಿಮಾ ಘೋಷಿಸದ ಹಿನ್ನೆಲೆ ತಮಿಳುನಾಡು ಯಶ್ ಫ್ಯಾನ್ಸ್ ಬಹಳ ವಿಶೇಷವಾಗಿ ಬೇಡಿಕೆ ಇಟ್ಟಿದ್ದಾರೆ. ಕಟ್ಟಡವೊಂದರ ಮೇಲೆ ಯಶ್ ಅವರ ಭಾವಚಿತ್ರ ಬಿಡಿಸಿ ಯಶ್19ಗಾಗಿ ಕಾಯ್ತಿದ್ದೇವೆ ಎಂದು ಬರೆಯವುದರ ಮೂಲಕ ಬೇಗ ಸಿನಿಮಾ ಅನೌನ್ಸ್ ಮಾಡಿ ಅಂತ ಮನವಿ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ