ಸಮುದ್ರದ ಮಧ್ಯೆ ಕಣ್ಮನ ಸೆಳೆದ ಭರ್ಜರಿ ಬ್ಯಾಚುಲರ್ಸ್ ಖ್ಯಾತಿಯ ವಿಜಯಲಕ್ಷ್ಮಿ
ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿದ್ದ ಲಕ್ಷಣ ಸೀರಿಯಲ್ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ? ಇದೇ ಲಕ್ಷಣ ಸೀರಿಯಲ್ನಲ್ಲಿ ಕೇಂದ್ರ ಬಿಂದುವಾಗಿ ಮಿಂಚುತ್ತಿದ್ದರು ನಟಿ ವಿಜಯಲಕ್ಷ್ಮಿ.
ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿದ್ದ ಲಕ್ಷಣ ಸೀರಿಯಲ್ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ? ಇದೇ ಲಕ್ಷಣ ಸೀರಿಯಲ್ನಲ್ಲಿ ಕೇಂದ್ರ ಬಿಂದುವಾಗಿ ಮಿಂಚುತ್ತಿದ್ದರು ನಟಿ ವಿಜಯಲಕ್ಷ್ಮಿ.
ಲಕ್ಷಣ ಪಾತ್ರಕ್ಕೆ ಜೀವ ತುಂಬಿದ್ದ ನಟಿ ವಿಜಯಲಕ್ಷ್ಮಿ ಅವರಿಗೆ ಹೆಸರನ್ನು ಕೂಡ ತಂದುಕೊಟ್ಟಿತ್ತು. ಕಿರುತೆರೆ ನಟ ಜಗನ್ ನಿರ್ಮಾಣದಲ್ಲಿ ಮೂಡಿ ಬಂದಿದ್ದ, ಬಣ್ಣ-ಗುಣದ ನಡುವಿನ ವ್ಯತ್ಯಾಸವನ್ನ ತೋರಿಸುತ್ತಿದ್ದ ಸೀರಿಯಲ್ ಮುಕ್ತಾಯಗೊಂಡರು ವೀಕ್ಷಕರು ಕಲಾವಿದರನ್ನು ಮರೆತ್ತಿಲ್ಲ.
ಅದರಲ್ಲೂ ನಟ ಜಗನ್, ಸುಕೃತಾ ನಾಗ್ ಹಾಗೂ ವಿಜಯಲಕ್ಷ್ಮಿ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿದ್ದ ಧಾರಾವಾಹಿ ಈಗಲೂ ಹಚ್ಚ ಹಸಿರಾಗಿದೆ.
ಇದೇ ಸೀರಿಯಲ್ ಮೂಲಕ ಫೇಮಸ್ ಆಗಿದ್ದ ನಟಿ ವಿಜಯಲಕ್ಷ್ಮಿ ಅವರು ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2ಗೆ ಎಂಟ್ರಿ ಕೊಟ್ಟಿದ್ದರು.
ಭರ್ಜರಿ ಬ್ಯಾಚ್ಯುಲರ್ಸ್ ಮುಕ್ತಾಯದ ಬೆನ್ನಲ್ಲೇ ದೇಶ ವಿದೇಶ ಸುತ್ತುವುದರಲ್ಲಿ ನಟಿ ವಿಜಯಲಕ್ಷ್ಮಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ ನಟಿ ವಿಜಯಲಕ್ಷ್ಮೀ.
ಸಮುದ್ರದ ಮಧ್ಯೆ ಕ್ಯೂಟ್ ಆಗಿ ಕಂಗೊಳಿಸಿದ್ದಾರೆ ನಟಿ ವಿಜಯಲಕ್ಷ್ಮಿ. ಇದೇ ಫೋಟೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್ನೂ ನಟಿಯ ಫೋಟೋಗೆ ಫ್ಯಾನ್ಸ್ ಕ್ಯೂಟ್ ಅಂತ ರಿಯಾಕ್ಟ್ ಮಾಡಿದ್ದಾರೆ. ಸದ್ಯ ದೇಶ ವಿದೇಶದ ಪ್ರವಾಸದಲ್ಲಿ ಬ್ಯುಸಿಯಾಗಿರೋ ನಟಿ ವಿಜಯಲಕ್ಷ್ಮಿ ಹೊಸ ಪ್ರಾಜಕ್ಟ್ ಬಗ್ಗೆ ಫ್ಯಾನ್ಸ್ಗೆ ಮಾಹಿತಿ ಕೊಟ್ಟಿಲ್ಲ.
ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಜೊತೆಗೆ ನಟಿ ತ್ರಿಕೋನ ಪ್ರೇಮ ಕತೆಗಳ ಸಾಲಿನಲ್ಲಿ ನಿಲ್ಲೋ ಮೈನಾ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಅಲ್ಲೂ ಇಲ್ಲೂ ನಟಿಸಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.