newsfirstkannada.com

ಮಳೆ.. ಮಳೆ.. ಕೊಡಗಿನಲ್ಲಿ ತ್ರಿವೇಣಿ ಸಂಗಮ ಭರ್ತಿ, ಕರಾವಳಿಯಲ್ಲಿ ಅವಾಂತರ; ನಾಳೆ ಶಾಲೆಗಳಿಗೆ ರಜೆ!

Share :

Published June 26, 2024 at 8:28pm

Update June 26, 2024 at 8:29pm

  ಮಡಿಕೇರಿ, ಭಾಗಮಂಡಲ ನಾಪೋಕ್ಲು ಸೇರಿ ಹಲವೆಡೆ ಮಳೆ

  ಕೊಡಗು, ಉಡುಪಿ, ಮಂಗಳೂರಲ್ಲಿ ಜನಜೀವನಕ್ಕೆ ಅಡ್ಡಿ

  ನಾಳೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರು: ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆಯಂತೆ ರಾಜ್ಯದ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗಿನಲ್ಲಿ ವರುಣದೇವ ಅಬ್ಬರಿಸಿದ್ದು, ಧಾರಾಕಾರ ಮಳೆಯಾಗಿದೆ.

ಕೊಡಗಿನ ಭರ್ಜರಿ ವರ್ಷಧಾರೆ!
ಕೊಡಗು ಜಿಲ್ಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಭರ್ಜರಿ ಮಳೆಯಾಗಿದೆ. ಕೊಂಚ ಬಿಡುವು ಕೊಟ್ಟಿದ್ದ ವರುಣ ಮಧ್ಯಾಹ್ನದ ಬಳಿಕ ಮತ್ತೆ ಧಾರಾಕಾರವಾಗಿ ಸುರಿದಿದೆ. ಭರ್ಜರಿ ಮಳೆಯಿಂದಾಗಿ ಜನರು ಮನೆಯಿಂದ ಹೊರಗೆ ಬರದಂತ ಪರಿಸ್ಥಿತಿ ಎದುರಾಗಿದೆ.

ನಿನ್ನೆ ಸಂಜೆಯಿಂದಲೇ ಮಡಿಕೇರಿ, ಭಾಗಮಂಡಲ ನಾಪೋಕ್ಲು ಸೇರಿದಂತೆ ಹಲವೆಡೆ ವರುಣಾರ್ಭಟ ಜೋರಾಗಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪವಿತ್ರ ಕ್ಷೇತ್ರ ಭಾಗಮಂಡಲದ‌ ತ್ರಿವೇಣಿ ಸಂಗಮ ಭರ್ತಿಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಭರ್ಜರಿ ಮಳೆಯ ಎಚ್ಚರಿಕೆ.. ಬೆಂಗಳೂರಿಗೆ ಹವಾಮಾನ ಇಲಾಖೆ ಕೊಟ್ಟ ಸೂಚನೆ ಏನು? 

ಮಳೆ ಆರ್ಭಟಕ್ಕೆ ಸೂರ್ಲಬ್ಬಿಯಲ್ಲಿ ಭಾರೀ ಗಾತ್ರದ ಮರ ಧರೆಗುರುಳಿದೆ. ಮಾದಾಪುರ ಸೂರ್ಲಬ್ಬಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ಸಂಪೂರ್ಣ ಅಡ್ಡಿಯಾಗಿದೆ. ಸ್ಥಳೀಯರ ಸಹಕಾರದಿಂದ ಮರ ತೆರವುಗೊಳಿಸಲಾಗಿದೆ.

ತ್ರಿವೇಣಿ ಸಂಗಮವು ಕಾವೇರಿ, ಕನ್ನಿಕೆ & ಸುಜೋತಿ ನದಿಗಳು ಸೇರುವ ಸ್ಥಳ. ಸಂಗಮದಲ್ಲಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ಹೀಗಿ ಮಳೆ ಹೆಚ್ಚಾದರೆ ಭಾಗಮಂಡಲ – ನಾಪೋಕ್ಲು ನಡುವಿನ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ.

ಕರಾವಳಿಯಲ್ಲೂ ವರುಣಾರ್ಭಟ!
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಮುಂದುವರಿದಿದೆ. ಮಂಗಳೂರಿನ ಪಡೀಲು ರೈಲ್ವೇ ಬ್ರಿಡ್ಜ್ ಅಂಡರ್ ಪಾಸ್‌ನಲ್ಲಿ ಮಳೆ ನೀರು ತುಂಬಿದ್ದು, ಅರ್ಧ ರಸ್ತೆಯವರೆಗೆ ಹೋಗಿ ರಸ್ತೆ ಮಧ್ಯೆಯಲ್ಲೇ ಕಾರು ನಿಂತಿದೆ. ಅಂಡರ್‌ ಪಾಸ್‌ನಲ್ಲಿ ನೀರು ತುಂಬಿರೋದ್ರಿಂದ ವಾಹನ ಸಂಚಾರ ಸ್ಥಗಿತವಾಗಿದೆ.

ಇದನ್ನೂ ಓದಿ: ಮಳೆ ಮಾಡಿದ ಅನಾಹುತಕ್ಕೆ ನಾಲ್ವರು ಸಾವು.. ಇಂದು ಮುಂಜಾನೆ ನಡೆಯಿತು ಘೋರ ದುರಂತ.. Photos 

ನಾಳೆ ಶಾಲೆಗಳಿಗೆ ರಜೆ ಘೋಷಣೆ
ನಾಳೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ರೆಡ್ ಅಲರ್ಟ್ ಇದೆ. ಹೀಗಾಗಿ ನಾಳೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ನಾಳೆ ಎಲ್ಲ ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮಳೆ.. ಮಳೆ.. ಕೊಡಗಿನಲ್ಲಿ ತ್ರಿವೇಣಿ ಸಂಗಮ ಭರ್ತಿ, ಕರಾವಳಿಯಲ್ಲಿ ಅವಾಂತರ; ನಾಳೆ ಶಾಲೆಗಳಿಗೆ ರಜೆ!

https://newsfirstlive.com/wp-content/uploads/2024/06/Kodagu-Rain.jpg

Load More