newsfirstkannada.com

ಮನೆ ಬಾಗಿಲಿಗೆ ಬಂದ ಮೊಸಳೆ.. ಮುಳುಗಿದ ದ್ವಾರಕಾ ನಗರ; ಗುಜರಾತ್‌ನ ಒಂದೊಂದು ದೃಶ್ಯವೂ ಘನಘೋರ!

Share :

Published August 29, 2024 at 9:38pm

    ನದಿಯಲ್ಲಿದ್ದ ಭಾರೀ ಗಾತ್ರದ ಮೊಸಳೆಗಳು ಮನೆ ಬಾಗಿಲಿಗೆ ಪ್ರವೇಶ

    ಗುಜರಾತ್‌ನಲ್ಲಿ ರಣಭೀಕರ ಮಳೆಗೆ ಸಾವಿನ ಸಂಖ್ಯೆ 28ಕ್ಕೆ ಏರಿಕೆ

    ಮುಳುಗಿದ ದೇವಭೂಮಿ ದ್ವಾರಕ.. ಹೆಲಿಕಾಪ್ಟರ್​​ನಲ್ಲಿ ಜನರ ರಕ್ಷಣೆ

ಗುಜರಾತ್​​ನಲ್ಲಿ ಮಳೆರಾಯನ ಮರಣ ಮೃದಂಗ ಜೋರಾಗಿದೆ. ಕಳೆದ 4 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಗುಜರಾತ್​​ನಲ್ಲಿ ಜಲಪ್ರಳಯ ಸೃಷ್ಟಿಯಾಗಿದ್ದು, ಸಾವಿನ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಪ್ರವಾಹದ ಬಗ್ಗೆ ಮಾಹಿತಿ ಪಡೆದಿರುವ ಪ್ರಧಾನಿ ಮೋದಿ ನೆರೆವು ನೀಡುವ ಭರವಸೆ ನೀಡಿದ್ದಾರೆ.

ಗುಜರಾತ್​​ನ ವಿವಿಧೆಡೆ ಮಹಾ ಮಳೆ ಅಬ್ಬರ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ರಣಭೀಕರ ಮಳೆಗೆ ಗುಜರಾತ್​​​ ಅಕ್ಷರಶಃ ನಲುಗಿ ಹೋಗಿದೆ. ಜಲಾಶಯಗಳು ಭೋರ್ಗರೆಯುತ್ತಿದ್ದು, ವಡೋದರ, ಕಚ್ ಹಾಗೂ ದೇವಭೂಮಿ ದ್ವಾರಕಾ ನಗರ ದ್ವೀಪವಾಗಿ ಮಾರ್ಪಟ್ಟಿದೆ. ಪ್ರವಾಹದ ಹೊಡೆತ್ತಕ್ಕೆ ಇಡೀ ಗುಜರಾತ್​​ ರಾಜ್ಯವೇ ಅಕ್ಷರಶಃ ತತ್ತರಿಸಿ ಹೋಗಿದೆ.

ಇದನ್ನೂ ಓದಿ: SSLC ಪಾಸ್ ಆದ ಅಭ್ಯರ್ಥಿಗಳಿಗೆ ಅದೃಷ್ಟ.. ಕಾನ್​​ಸ್ಟೆಬಲ್​ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಹಿಳೆಯರಿಗೂ ಅವಕಾಶ 

ಗುಜರಾತ್​ನಲ್ಲಿ ರಣಭೀಕರ ಮಳೆ.. ಸಾವಿನ ಸಂಖ್ಯೆ 28ಕ್ಕೆ ಏರಿಕೆ
ಗುಜರಾತ್​​ನಲ್ಲಿ ಮರಣ ಮೃದಂಗ ಬಾರಿಸುತ್ತಿದ್ದಾನೆ.. ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿದ್ದು, ಸಾವಿನ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.. ವಡೋದರ, ಜಾಮ್​​ನಗರ ಗಾಂಧಿನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 17 ಸಾವಿರ ಮಂದಿಯನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಗುಜರಾತ್​ ರಾಜ್ಯ ಸರ್ಕಾರ 5 ಸಾವಿರ ಜನರಿಗೆ ಪುನರ್​ ವಸತಿ ಕಲ್ಪಿಸಿದೆ..

ಮನೆ ಬಾಗಿಲಿಗೆ ಅತಿಥಿಯಾಗಿ ಬಂದ ಮೊಸಳೆ
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಶ್ವಮಿತ್ರ ನದಿ ಇಡೀ ವಡೋದರ ನಗರಕ್ಕೆ ಜಲ ದಿಗ್ಬಂಧನ ವಿಧಿಸಿದ್ದಾನೆ.. ಜೊತೆಗೆ ನದಿಯಲ್ಲಿದ್ದ ಭಾರೀ ಗಾತ್ರದ ಮೊಸಳೆಗಳು ನಗರಕ್ಕೆ ಎಂಟ್ರಿ ಕೊಟ್ಟಿದ್ದು, ಮನೆ ಬಾಗಲಿಗೆ ಮೊಸಳೆಗಳು ಆಗಮಿಸುತ್ತಿವೆ. ಭಾರೀ ಗಾತ್ರದ ಮೊಸಳೆಗಳನ್ನ ಕಂಡು ಜನರು ಬೆಚ್ಚಿ ಬಿದ್ದಿದ್ದು, ಮೊಸಳೆಗಳನ್ನ ಹಿಡಿಯಲು ಸಾರ್ವಜನಿಕರು ರಕ್ಷಣಾ ಪಡೆ ಸಿಬ್ಬಂದಿ ಹರಸಾಹಸ ಪಡ್ತಿದ್ದಾರೆ.

ಇದನ್ನೂ ಓದಿ: ಸ್ವಂತ ತಮ್ಮನಿಗೇ ವಾರ್ನಿಂಗ್ ಕೊಟ್ಟ CM.. ಮನೆ ಖಾಲಿ ಮಾಡದಿದ್ರೆ ಧ್ವಂಸ; ರೇವಂತ್ ರೆಡ್ಡಿ ಎಚ್ಚರಿಕೆ 

ಭಾರೀ ಮಳೆಯಿಂದಾಗಿ ದೇವಭೂಮಿ ದ್ವಾರಕದಲ್ಲಿ ಜಲಪ್ರಳಯ ಸೃಷ್ಟಿಯಾಗಿದೆ.. ಇಡೀ ನಗರವೇ ಜಲಾವೃತವಾಗಿ ನಡುಗಡ್ಡೆ ಪ್ರದೇಶವಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಸೇನಾ ಹೆಲಿಕಾಪ್ಟರ್​ ಮುಖಾಂತರ ರಕ್ಷಣೆ ಮಾಡಲಾಗಿದೆ.

ಗುಜರಾತ್​​ಗೆ ಕೇಂದ್ರದಿಂದ ನೆರವು.. ಪ್ರಧಾನಿ ಮೋದಿ ಭರವಸೆ
ರಣಭೀಕರ ಮಳೆಗೆ ಮೋದಿ ನಾಡು ಗುಜರಾತ್​​ ನಲುಗಿ ಹೋಗಿದ್ದು, ಪ್ರಧಾನಿ ನರೇಂದ್ರ ಮೋದಿ ಗುಜರಾತ್​​​ ಸಿಎಂ ಭೂಪೇಂದ್ರ ಪಟೇಲ್​ಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಕೇಂದ್ರದಿಂದ ನೆರವು ನೀಡುವ ಭರವಸೆ ನೀಡಿದ್ದಾರೆ. ಮುಂದಿನ ಮುರ್ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಗುಜರಾತ್​​ನ ಎಲ್ಲಾ ಜಿಲ್ಲೆಗಳಿಗೂ ರೆಡ್​​ ಅಲರ್ಟ್​ ಘೋಷಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆ ಬಾಗಿಲಿಗೆ ಬಂದ ಮೊಸಳೆ.. ಮುಳುಗಿದ ದ್ವಾರಕಾ ನಗರ; ಗುಜರಾತ್‌ನ ಒಂದೊಂದು ದೃಶ್ಯವೂ ಘನಘೋರ!

https://newsfirstlive.com/wp-content/uploads/2024/08/gujurath-1.jpg

Load More