newsfirstkannada.com

ವರುಣನ ನರ್ತನಕ್ಕೆ ಪತರುಗುಟ್ಟಿದ ಉತ್ತರ.. ಹಿಮಾಚಲ ಪ್ರದೇಶ, ದೆಹಲಿ, ಪಂಜಾಬ್​ನಲ್ಲಿ ಭಾರೀ ಅನಾಹುತ

Share :

Published July 10, 2023 at 8:04am

Update July 10, 2023 at 8:10am

    ನೋಡು ನೋಡ್ತಿದ್ದಂತೆ ಮಳೆ ನೀರಲ್ಲಿ ಮುಳುಗುತ್ತಿರುವ ಮನೆಗಳು

    ವರುಣಾರ್ಭಟಕ್ಕೆ ನದಿಗಳು ಉಗ್ರ ಸ್ವರೂಪ ತಾಳಿ ಧುಮುಕ್ಕುತ್ತಿವೆ

    ಚಂಡೀಗಢದ ದೇರಾಬಾಸಿಯಲ್ಲಿ ಮುಳುಗಿದ ಅಪಾರ್ಟ್​ಮೆಂಟ್..!

ಉತ್ತರ ಭಾರತದಲ್ಲಿ ವರುಣ ಅಲ್ಲೋಲ, ಕಲ್ಲೋಲ ಸೃಷ್ಟಿಸಿದ್ದಾನೆ. ವರುಣನ ಆರ್ಭಟಕ್ಕೆ ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ್‌ ಸೇರಿ ಹಲವು ರಾಜ್ಯಗಳು ತತ್ತರಿಸಿ ಹೋಗಿವೆ. ಎಲ್ಲೆಲ್ಲೂ ನೀರೋ ನೀರು. ನದಿಗಳ ಭೋರ್ಗರೆತ. ಸೇತುವೆಗಳ ಕುಸಿತವಾಗುತ್ತಿವೆ. ಹಲವು ಘಟನೆಗಳನ್ನು ಸೃಷ್ಟಿ ಮಾಡುತ್ತಿರುವ ವರುಣರಾಯ ಸಿಕ್ಕಿ ಸಿಕ್ಕದ್ದನ್ನು ನೀರಿನಲ್ಲಿ ಮುಳುಗಿಸುತ್ತಿದ್ದಾನೆ. ಕೆಲವರ ಜೀವಕ್ಕೂ ಕುತ್ತು ತಂದಿದ್ದಾನೆ.

ಈ ಬಾರಿಯ ವರ್ಷಧಾರೆ ಉತ್ತರ ಭಾರತವನ್ನ ಹಿಂಡಿ ಹಿಪ್ಪೆ ಮಾಡಿದೆ. ಇಳೆಗೆ ಜೀವಕಳೆ ನೀಡಬೇಕಿದ್ದ ವರುಣ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾನೆ. ಮಹಾಮೇಘ ಸ್ಫೋಟದಿಂದ ನದಿಗಳು ಉಗ್ರಸ್ವರೂಪ ತಾಳಿ ಧುಮ್ಮಿಕ್ಕಿ ಹರಿಯುತ್ತಿವೆ. ಭೂಕುಸಿತ, ಪ್ರವಾಹ ಜನರ ನಿದ್ದೆಗೆಡಿಸಿದೆ. ವರುಣಾರ್ಭಟಕ್ಕೆ ಉತ್ತರ ಭಾರತದ ಜನ ಹೈರಾಣಾಗಿದ್ದು, ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಮಳೆರಾಯನ ಮುನಿಸಿನ ಒಂದೊಂದು ದೃಶ್ಯಗಳು ಎದೆ ಝಲ್ ಎನ್ನಿಸುವಂತಿವೆ.

ಉತ್ತರದ ರಾಜ್ಯಗಳಲ್ಲಿ ಭಾರೀ ಮಳೆ.. ಪ್ರವಾಹದಿಂದ ತತ್ತರ

ಉತ್ತರದ ರಾಜ್ಯಗಳು ಭಾರೀ ಮಳೆ ಮತ್ತು ಪ್ರವಾಹದಿಂದ ತತ್ತರಿಸುತ್ತಿವೆ. ಭಾರೀ ಮಳೆಗೆ ಭೂಕುಸಿತದಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಸಂಚಾರ ಸ್ಥಗಿತಗೊಂಡಿದೆ. ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ. ಭೂಕುಸಿತ ಮತ್ತು ಇತರ ಮಳೆ ಸಂಬಂಧಿತ ಘಟನೆಗಳಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ದೆಹಲಿಯ ಯಮುನಾ ಸೇರಿದಂತೆ ಅನೇಕ ನದಿಗಳು ಉಕ್ಕಿ ಹರಿಯುತ್ತಿವೆ. ನಗರ ಮತ್ತು ಪಟ್ಟಣ ಪ್ರದೇಶಾದ್ಯಂತ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಅನೇಕ ರಸ್ತೆಗಳು ಮತ್ತು ವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ತೀವ್ರ ತೊಂದರೆ ಎದುರಿಸುವಂತಾಗಿದೆ.

ಹಿಮಾಚಲ ಪ್ರದೇಶದ ಕುಲು ಪ್ರದೇಶದಲ್ಲಿ ಅತಿವೃಷ್ಟಿ

ಹಿಮಾಚಲ ಪ್ರದೇಶದ ಕುಲು ಪ್ರದೇಶದಲ್ಲಿ ಅತಿವೃಷ್ಟಿಯಿಂದಾಗಿ ಮಣಿಕರಣ್‌ನ ಪಾರ್ವತಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ಇನ್ನು ಪ್ರವಾಹ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಸನ್ವಾರ ಭಾಗದ ಕಲ್ಕಾ- ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಗುಡ್ಡ ಕುಸಿದಿದೆ. ಗುಡ್ಡ ಕುಸಿತದ ವೇಳೆ ವೇಗವಾಗಿ ಬಂದ ಕಾರು ಚಾಲಕ ಮತ್ತು ಪ್ರಯಾಣಿಕರಿಗೆ ಕ್ಷಣ ಮಾತ್ರದಲ್ಲೆ ಪಾರಾಗಿದ್ದಾರೆ.

ಚಂಡೀಗಢದ ದೇರಾಬಾಸಿಯಲ್ಲಿ ಮುಳುಗಿದ ಅಪಾರ್ಟ್​ಮೆಂಟ್

ಚಂಡೀಗಢದ ದೇರಾಬಾಸಿ ಪ್ರದೇಶದ ಅಪಾರ್ಟ್​ಮೆಂಟ್ ಒಂದರಲ್ಲಿ ಮೊದಲ ಮಹಡಿಯುದ್ದಕ್ಕೆ ಮಳೆ ನೀರು ನಿಂತ್ತಿದ್ದು, ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಕಾರಗಳು ಸಂಪೈಣ್ ಮುಳುಗಿದೆ. ಇನ್ನು ಅಪಾರ್ಟ್​ಮೆಂಟ್​ನಲ್ಲಿ ಸಿಲುಕಿದ್ದವರನ್ನು ರಕ್ಷಣಾ ತಂಡಗಳು ಬೋಟ್ ಹಾಗೂ ಟ್ರ್ಯಾಕ್ಟರ್ ಮೂಲಕ ರಕ್ಷಣೆ ಕಾರ್ಯ ಮಾಡಿದ್ದಾರೆ.

ಹಿಮಾಚಲ ಪ್ರದೇಶದ ಬಡ್ಡಿಯಲ್ಲಿನ ಬಲದ್ ಖಾದ್​ನಲ್ಲಿ ಪ್ರವಾಹ

ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಬಡ್ಡಿಯಲ್ಲಿನ ಬಲದ್ ಖಾದ್‌ ಎಂಬಲ್ಲಿ ರಭಸದಿಂದ ಹರಿಯುತ್ತಿರುವ ಮಳೆ ನೀರಿನ ದೃಶ್ಯ ನೋಡಲು ಭಯಾನಕವಾಗಿದ್ದು, ಈ ಪ್ರವಾಹದ ದೃಶ್ಯಗಳು ನೋಡುಗರಿಗೆ ನಡುಕ ಹುಟ್ಟಿಸುವಂತಿದೆ.

ಗುರುದ್ವಾರ ಸಾಹಿಬ್‌ನ ಮುಖ್ಯ ದ್ವಾರದ ಮಾರ್ಗ ಮುಳುಗಡೆ

ಮನಾಲಿಯಲ್ಲಿರುವ ಗುರುದ್ವಾರ ಮಣಿಕರಣ್ ಸಾಹಿಬ್ ಆವರಣಕ್ಕೆ ನೀರು ನುಗ್ಗಿದ್ದು, ಗುರುದ್ವಾರ ಸಾಹಿಬ್‌ನ ಮುಖ್ಯ ದ್ವಾರದ ಮಾರ್ಗವೂ ಭಾರೀ ನೀರಿನ ಹರಿವಿನಿಂದ ಮುಳುಗಿರುವ ದೃಶ್ಯ ಇದು.

ನಿನ್ನೆಯ ಮಳೆಗೆ ದೆಹಲಿಯ ರೋಹಿಣಿ ರಸ್ತೆಯಲ್ಲಿ ಗುಂಡಿ

ದೆಹಲಿಯ ನಗರಗಳಲ್ಲಿ ಕಳೆದ 40 ವರ್ಷಗಳಲ್ಲೇ ಅತಿ ಹೆಚ್ಚು ಮಳೆಯಾಗಿದೆ. ಇನ್ನು ನಿನ್ನೆಯ ಮಳೆಗೆ ದೆಹಲಿಯ ರೋಹಿಣಿ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಸಮಾಧಾನಕರ ವಿಷಯ ಎಂದರೆ ಯಾರಿಗೂ ಗಾಯಗಳಾಗಿಲ್ಲ ಮತ್ತು ಯಾವುದೇ ವಾಹನ ಅದರಲ್ಲಿ ಬಿದ್ದಿಲ್ಲ.

ಪಂಜಾಬ್​ನಲ್ಲಿ ಭಾರೀ ಮಳೆಗೆ ಕುಸಿದು ಬಿದ್ದ ಮನೆ

ಪಂಜಾಬ್ ರಾಜ್ಯದ ಮೊಹಾಲಿ ಜಿಲ್ಲೆಯಲ್ಲಿ ಭಾರೀ ಮಳೆಗೆ ಸಮೀಪದ ಪಂಚವಟಿ ಎನ್‌ಕ್ಲೇವ್ ಖರಾರ್‌ನಲ್ಲಿ ಮನೆ ಕುಸಿದು ಬಿದ್ದಿದೆ. ಇನ್ನು ಇತ್ತ ದೆಹಲಿಯಲ್ಲಿ ಪಬ್ಲಿಕ್ ವರ್ಕ್ಸ್ ಡಿಪಾರ್ಟ್​ಮೆಂಟ್​ನ ಸಚಿವೆ ಅತಿಶಿ ಜಲಾವೃತಗೊಂಡ ಪ್ರದೇಶಗಳಿಗೆ ನಿಂತ ಮಳೆ ನೀರಲ್ಲೇ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಬಿಯಾಸ್​ ಪ್ರವಾಹದಲ್ಲಿ ಮುಳುಗಿದ ದೇವಾಲಯ

ಹಿಮಾಚಲ ಪ್ರದೇಶದ ಬಿಯಾಸ್ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಮಂಡಿಯ ಪಂಚವಕ್ತ್ರ ದೇವಾಲಯವು ನೀರಿನಲ್ಲಿ ಮುಳುಗಿದ ದೃಶ್ಯ ಇದು. ಮಳೆಯಿಂದ ಭೂಕುಸಿತ ಉಂಟಾಗಿದ್ದು, ಮನಾಲಿ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಎಲ್ಲ ನದಿಗಳು ತುಂಬಿ ಬೋರ್ಗರೆಯುತ್ತಿದ್ದು, ನಿಂತು ನೋಡುಗರ ಜೀವ ನಡುಗಿಸುವಂತಿದೆ. ಮಂಡಿ ಜಿಲ್ಲೆಯಲ್ಲಿ ಮುಂಗಾರು ಮಳೆ ಭಾರೀ ಅವಾಂತರವನ್ನ ಸೃಷ್ಟಿಸಿದೆ. ಮಂಡಿಯ ಹಲವಾರು ಸೇತುವೆಗಳು ಬಿಯಾಸ್ ಮುಂದೆ ಶರಾಣಾಗಿದೆ. 1877 ರಲ್ಲಿ ನಿರ್ಮಿಸಲಾದ ಬಿಯಾಸ್ ನದಿಯ ವಿಕ್ಟೋರಿಯಾ ಸೇತುವೆಯನ್ನು ತುಂಬಿ ಹರಿಯುತ್ತಿರುವ ನೀರು ಸ್ಪರ್ಶಿಸುವ ಮೂಲಕ ಭಾರೀ ಆತಂಕ ಸೃಷ್ಟಿಸಿದೆ. ದಯವಿಟ್ಟು ನದಿ ದಂಡೆಗಳಿಂದ ದೂರವಿರಿ. ಗಂಭೀರ ಹಾನಿಯನ್ನ ಉಂಟುಮಾಡಬಹುದು. ಸುರಕ್ಷಿತ ಸ್ಥಳಗಳಲ್ಲಿ ಉಳಿಯಿರಿ ಎಂದು ಸರ್ಕಾರ ಸಲಹೆ ಸೂಚನೆಗಳನ್ನ ನೀಡ್ತಿದ್ರೂ ಸಾರ್ವನಿಕರು ಮಾತ್ರ ಕ್ಯಾರೇ ಎನ್ನದೇ ಅಡ್ಡಾದಿಡ್ಡಿ ತಿರುಗಾಡುತ್ತಿದ್ದಾರೆ.

ಪ್ರವಾಹದ ಹೊಡೆತದಿಂದ ಗುಡ್ಡಗಾಡು ಪ್ರದೇಶಗಳಲ್ಲಿನ ರಸ್ತೆಗಳನ್ನು ಕೊಚ್ಚಿಕೊಂಡು ಹೋಗಿದ್ದು, ಜನರು ದಿಗ್ಭ್ರಮೆಗೊಂಡಿದ್ದಾರೆ. ಮಳೆಯಿಂದಾಗಿ ರೈಲು ಸೇವೆಗೂ ಅಡ್ಡಿಯಾಗಿದ್ದು, ಸುಮಾರು 17 ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಸುಮಾರು 12 ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಜಲಾವೃತದಿಂದಾಗಿ 4 ಸ್ಥಳಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಉತ್ತರ ರೈಲ್ವೆ ಹೇಳಿದೆ. ಅದೇನೆ ಇರಲಿ, ಉತ್ತರ ಭಾರತದಲ್ಲಿ ವರುಣನ ಮುನಿಸು ಭಾರೀ ಅವಾಂತರಕ್ಕೆ ಕಾರಣವಾಗಿದೆ. ಹೀಗೆ ಮೇಘಸ್ಫೋಟವಾಗ್ತಿದ್ರೆ ಉತ್ತರ ಭಾರತವೇ ಮುಳುಗಿ ಹೋಗುವ ಸನ್ನಿವೇಶ ನಿರ್ಮಾಣವಾಗೋದಂತೂ ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರುಣನ ನರ್ತನಕ್ಕೆ ಪತರುಗುಟ್ಟಿದ ಉತ್ತರ.. ಹಿಮಾಚಲ ಪ್ರದೇಶ, ದೆಹಲಿ, ಪಂಜಾಬ್​ನಲ್ಲಿ ಭಾರೀ ಅನಾಹುತ

https://newsfirstlive.com/wp-content/uploads/2023/07/HIMACHALA_PRADESH_3.jpg

Load More