newsfirstkannada.com

WATCH: ಚಂದ್ರಬಾಬು ನಾಯ್ಡು ಜೈಲು ಪಾಲಾಗಿದ್ದಕ್ಕೆ ಸಂತಸ; ಪಟಾಕಿ ಸಿಡಿಸಿ ಸಂಭ್ರಮಿಸಿದ ನಟಿ ರೋಜಾ ಹೇಳಿದ್ದೇನು?

Share :

11-09-2023

    ಸೆ.​ 9 ತೆಲುಗು ದೇಶಂ ಪಕ್ಷದ ಅಧ್ಯಕ್ಷರನ್ನು ಅರೆಸ್ಟ್ ಮಾಡಿದ್ದ ಪೊಲೀಸರು

    ಆಂಧ್ರ ಪ್ರದೇಶದ ಪ್ರವಾಸೋದ್ಯಮ ಸಚಿವೆ ರೋಜಾ ಸಂಭ್ರಮಾಚರಣೆ

    371 ಕೋಟಿ ರೂ. ಶೆಲ್​ ಕಂಪನಿಗಳಿಗೆ ಅಕ್ರಮ ವರ್ಗಾವಣೆ ಆರೋಪ

ಹೈದರಾಬಾದ್: ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮಾಜಿ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರು ಸೆರೆವಾಸದಲ್ಲಿದ್ದಾರೆ. ಚಂದ್ರಬಾಬು ನಾಯ್ಡು ಅವರನ್ನು  ಬಂಧಿಸಿದ ಹಿನ್ನೆಲೆಯಲ್ಲಿ ಆಂಧ್ರದ ಪ್ರವಾಸೋದ್ಯಮ ಸಚಿವೆ ಹಾಗೂ ನಟಿ ರೋಜಾ ಅವರು ತಮ್ಮ ನಿವಾಸದಲ್ಲಿ ಬೆಂಬಲಿಗರೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಮೂರು ಬಾರಿ ಸಿಎಂ ಆಗಿದ್ದ ಎನ್​ ಚಂದ್ರಬಾಬು ನಾಯ್ಡುರನ್ನು ಸೆ.​ 9 ರಂದು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದರು. ನಿನ್ನೆ ಕೋರ್ಟ್​ ನಾಯ್ಡುರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದನ್ನು ಸೆಲಬ್ರೇಟ್ ಮಾಡಿರುವ ಸಚಿವೆ ಹಾಗೂ ನಟಿ ರೋಜಾ ಅವರು ತಮ್ಮ ಪಕ್ಷದ ಬೆಂಬಲಿಗರೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಬೆಂಬಲಿಗರೊಂದಿಗೆ ನಾಯ್ಡು ವಿರುದ್ಧ ಘೋಷಣೆ ಕೂಗಿ ಸಿಹಿ ಹಂಚಿದ್ದಾರೆ. ಜೈ ಜಗನ್.. ಜೈ ಜಗನ್ ಎನ್ನುತ್ತಾ ಪಟಾಕಿ ಸಿಡಿಸಿ ಹಬ್ಬವನ್ನೇ ಆಚರಿಸಲಾಗಿದೆ.

ಇದನ್ನು ಓದಿ: ಚಂದ್ರಬಾಬು ನಾಯ್ಡುಗೆ ನ್ಯಾಯಾಂಗ ಬಂಧನ.. ವಿಜಯವಾಡದಿಂದ 200 KM ದೂರದ ಇನ್ನೊಂದು ಜೈಲಿಗೆ ಶಿಫ್ಟ್.!

ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್​ನಲ್ಲಿ ಪೋಸ್ಟ್ ಮಾಡಿರುವ ನಟಿ ರೋಜಾ ಅವರು, ಕೋರ್ಟ್​ ಸರಿಯಾದ ಪಾಠ ಮಾಡಿದೆ ಎಂದು ನಾಯ್ಡು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ 2014 ರಿಂದ 2019ರವರೆಗೆ ಒಟ್ಟು 371 ಕೋಟಿ ರೂಪಾಯಿಗಳನ್ನು ಶೆಲ್​ ಕಂಪನಿಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರನ್ನು A1 ಆರೋಪಿ ಎಂದು ಪರಿಗಣಿಸಿ ಸೆ.09 ರಂದು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದರು. ಇನ್ನು ಚಂದ್ರಬಾಬು ನಾಯ್ಡುರನ್ನು ವಿಜಯವಾಡದ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್​ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಸದ್ಯ ಅವರನ್ನು ರಾಜಮಂಡ್ರಿ ಜೈಲಿನಲ್ಲಿಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಚಂದ್ರಬಾಬು ನಾಯ್ಡು ಜೈಲು ಪಾಲಾಗಿದ್ದಕ್ಕೆ ಸಂತಸ; ಪಟಾಕಿ ಸಿಡಿಸಿ ಸಂಭ್ರಮಿಸಿದ ನಟಿ ರೋಜಾ ಹೇಳಿದ್ದೇನು?

https://newsfirstlive.com/wp-content/uploads/2023/09/ROJA.jpg

Load More