newsfirstkannada.com

ಕಾವೇರಿ ನದಿಗೆ ಈಜಲು ಹೋದ ಪ್ರವಾಸಿಗರು; ಸುಳಿಗೆ ಸಿಲುಕಿ ಓರ್ವ ಸಾವು

Share :

06-08-2023

    ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಯುವಕ

    ಪ್ರವಾಸಕ್ಕೆ ಬಂದ ಯುವಕ ಕಾವೇರಿ ನೀರಿಗಿಳಿದು ಸಾವು

    ಈಜಲು ಹೋದವ ನೀರಿನ ಸುಳಿಗೆ ಸಿಲುಕಿ ಕಣ್ಮರೆ

ಮಂಡ್ಯ: ಈಜಲು ಹೋದ ಯುವಕನೋರ್ವ ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿಯಲ್ಲಿ ನಡೆದಿದೆ. ಕೋಲಾರ ಮೂಲದ ಯಶವಂತ್(25) ಸಾವನ್ನಪ್ಪಿದ ಯುವಕ.

ನಾಲ್ಕು ಜನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯಶವಂತ್. ಬಲಮುರಿಯ ಕಾವೇರಿ ನದಿಯಲ್ಲಿ ಈಜಲು ಇಳಿದ್ದಿದ್ದಾನೆ. ಈ ವೇಳೆ ಸಾವನ್ನಪ್ಪಿದ್ದಾನೆ.

ಸದ್ಯ ಡ್ಯಾಂನಿಂದ ನದಿಗೆ 5,356 ಕ್ಯೂಸೆಕ್ ನೀರು ಹೊರಹರಿವು ಬರುತ್ತಿದೆ. ಹೀಗಾಗಿ ಬಲಮುರಿ ಭಾಗದಲ್ಲಿ  ನೀರಿನ ರಭಸ ಹೆಚ್ಚಾಗಿದೆ. ಹೀಗಿದ್ದರೂ ಕಾವೇರಿ ನದಿಯಲ್ಲಿ ಈಜಾಡಲು ಯಶವಂತ್ ಹಾಗೂ ಸ್ನೇಹಿತರು ಇಳಿದಿದ್ದಾರೆ. ಈ ವೇಳೆ ಆತ ನದಿಯ ಸುಳಿಗೆ ಸಿಲುಕಿದ್ದಾನೆ.

ಸುಳಿಗೆ ಸಿಲುಕಿದ ಯಶವಂತ್ ಮೇಲೆ ಬಾರದೆ ಅಲ್ಲೇ ಸಾವನ್ನಪ್ಪಿದ್ದಾನೆ. ಆತನನ್ನು ಕಾಪಾಡಲು ಸಾಧ್ಯವಾಗದ ಸ್ನೇಹಿತರು ಸುಮ್ಮನಾಗಿದ್ದಾರೆ. ಕೆಆರ್‌ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿ ನದಿಗೆ ಈಜಲು ಹೋದ ಪ್ರವಾಸಿಗರು; ಸುಳಿಗೆ ಸಿಲುಕಿ ಓರ್ವ ಸಾವು

https://newsfirstlive.com/wp-content/uploads/2023/08/yashavanth.jpg

Load More