newsfirstkannada.com

ಬೆಳ್ಳಂ ಬೆಳಗ್ಗೆ ನಂದಿ ಹಿಲ್ಸ್​ಗೆ​ ಪ್ರಯಾಣ ಬೆಳೆಸಿದವರಿಗೆ ಶಾಕ್​! ಇಂದಿನಿಂದ 2 ದಿನಗಳ ಕಾಲ ಪ್ರವೇಶ ನಿರ್ಬಂಧ 

Share :

02-07-2023

  ನಂದಿಗಿರಿಧಾಮದತ್ತ ಹೆಜ್ಜೆ ಹಾಕಿದ ಪ್ರವಾಸಿಗರಿಗೆ ನಿರಾಸೆ

  ರಾಷ್ಟ್ರಪತಿ ಆಗಮನದ ಹಿನ್ನೆಲೆ ನಂದಿ ಹಿಲ್ಸ್​ಗೆ ಪ್ರವೇಶ ನಿರ್ಬಂಧ 

  ಇಂದಿನಿಂದ ಎರಡು ದಿನಗಳ ಕಾಲ ಪ್ರವಾಸಿಗರಿಗೆ ಪ್ರವೇಶವಿಲ್ಲ

ಚಿಕ್ಕಬಳ್ಳಾಪುರ: ಬೆಳ್ಳಂಬೆಳ್ಳಗ್ಗೆ ನಂದಿಗಿರಿಧಾಮದತ್ತ ಹೆಜ್ಜೆ ಹಾಕಿದ ಪ್ರವಾಸಿಗರಿಗೆ ನಿರಾಸೆಯಾಗಿದೆ. ಬಂದ ದಾರಿಗೆ ಸುಂಕ ಇಲ್ಲವೆಂದು ಪ್ರವಾಸಿಗರು ವಾಪಸ್ ತೆರಳುತ್ತಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿರುವ ಹಿನ್ನೆಲೆ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವ ವಿಖ್ಯಾತ ನಂದಿ ಹಿಲ್ಸ್​ಗೆ ನಿರ್ಬಂಧ ಹೇರಲಾಗಿದೆ. ಇಂದಿನಿಂದ ಎರಡು ದಿನಗಳ ಕಾಲ ಭದ್ರತಾ ದೃಷ್ಟಿಯಿಂದ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಈ ವಿಚಾರ ತಿಳಿಯದೇ ಆಗಮಿಸಿದ್ದ ಪ್ರವಾಸಿಗರನ್ನು ಪೊಲೀಸರು ತಡೆದಿದ್ದಾರೆ. ನಂದಿಗಿರಿಧಾಮ ಬುಡದ ಪ್ರವೇಶ ದ್ವಾರದಲ್ಲೇ ವಾಹನಗಳನ್ನು ತಡೆದು ಪ್ರವಾಸಿಗರನ್ನು ಪೊಲೀಸರು ವಾಪಸ್ ಕಳಿಸುತ್ತಿದ್ದಾರೆ.

ಮುದ್ದೇನಹಳ್ಳಿಗೆ ರಾಷ್ಟ್ರಪತಿ 

ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮುದ್ದೇನಹಳ್ಳಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನಲೆ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಜಿಲ್ಲಾಧಿಕಾರಿ ರವೀಂದ್ರ ಅವರು ನಂದಿಗಿರಿಧಾಮಕ್ಕೆ 2 ದಿನಗಳ ಕಾಲ ನಿರ್ಬಂಧ ಹೇರುವಂತೆ ಆದೇಶ ಹೊರಡಿಸಿದ್ದಾರೆ. ಹಾಗಾಗಿ ಪ್ರವಾಸಿಗರಿಗೆ ನಂದಿ ಹಿಲ್ಸ್ ವಿಕ್ಷಣೆಯನ್ನು ನಿರ್ಬಂಧಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳಂ ಬೆಳಗ್ಗೆ ನಂದಿ ಹಿಲ್ಸ್​ಗೆ​ ಪ್ರಯಾಣ ಬೆಳೆಸಿದವರಿಗೆ ಶಾಕ್​! ಇಂದಿನಿಂದ 2 ದಿನಗಳ ಕಾಲ ಪ್ರವೇಶ ನಿರ್ಬಂಧ 

https://newsfirstlive.com/wp-content/uploads/2023/07/nandi-Hills-1.jpg

Load More