ಹಾಲ್ನೊರೆಯಂತೆ ಹರಿಯುವ ಜಲಪಾತ, ಪ್ರಕೃತಿ ಸೊಬಗಿನ ಪ್ರಪಾತ
ಕಣ್ಮನ ಸೆಳೆಯುವ ದೂದ್‌ಸಾಗರ್ ಫಾಲ್ಸ್‌ಗೆ ದೂದ್‌ಸಾಗರನೇ ಸಾಟಿ
ದೂದ್‌ಸಾಗರ್ ನೋಡಲು ಬೆಟ್ಟ, ಗುಡ್ಡ ಹತ್ತಿ ಬಂದವರಿಗೆ ಯಾಕೆ ಶಿಕ್ಷೆ?
ದೂದ್‌ಸಾಗರ್: ಹಾಲ್ನೊರೆಯಂತೆ ಹರಿಯುವ ಜಲಪಾತ, ಪ್ರಕೃತಿ ಸೊಬಗಿನ ಪ್ರಪಾತ, ನೋಡುಗರ ಕಣ್ಮನ ಸೆಳೆಯುವ ಸುಂದರತಾಣ.. ಆಹಾ.. ದೂದ್‌ಸಾಗರ್‌ಕ್ಕೆ ದೂದ್‌ಸಾಗರನೇ ಸಾಟಿ. ಸಾಕಷ್ಟು ಸಿನಿಮಾಗಳಲ್ಲಿ ಈ ಸೌಂದರ್ಯವನ್ನ ತೋರಿಸಿದ ಮೇಲಂತೂ ದೂದ್‌ಸಾಗರ್ ಅನ್ನು ಕಣ್ತುಂಬಿಕೊಳ್ಳುವ ಕ್ರೇಜ್ ಹೆಚ್ಚಾಗಿದೆ. ಧುಮ್ಮಿಕ್ಕಿ ಹರಿಯುವ ಜಲಪಾತದ ಮಧ್ಯೆ ಓಡಾಡಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಆದ್ರೆ ಇವತ್ತು ಈ ಪ್ರವಾಸಿಗರ ಹಣೆ ಬರಹ ಕೆಟ್ಟಿತ್ತು ಅಂಥಾ ಕಾಣುತ್ತೆ. ದೂದ್‌ಸಾಗರ್ ನೋಡಲು ಬೆಟ್ಟ, ಗುಡ್ಡ ಹತ್ತಿ ಬಂದವರಿಗೆ ಗೋವಾ ಪೊಲೀಸರು ಬಸ್ಕಿ ಹೊಡೆಸಿದ್ದಾರೆ. ಅಯ್ಯೋ ಹೀಗ್ಯಾಕೆ ಆಯ್ತು ಅಂತೀರಾ ಇಲ್ನೋಡಿ.
ಗೋವಾದಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆಯು ಜಲಪಾತಗಳಿಗೆ ಸಾರ್ವಜನಿಕರು ಬರುವುದನ್ನು ನಿಷೇಧಿಸಿತ್ತು. ಇದರ ಬೆನ್ನಲ್ಲೇ ಇಂದು ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಗೋವಾದ ಜನಪ್ರಿಯ ದೂಧಸಾಗರ್ ಜಲಪಾತಕ್ಕೆ ಭೇಟಿ ನೀಡಿದ್ದಾರೆ. ಬಂದ ತಪ್ಪಿಗೆ ಪೊಲೀಸ್ ಅಧಿಕಾರಿಗಳು ಪ್ರವಾಸಿಗರಿಗೆ ಬಸ್ಕಿ… pic.twitter.com/Qp4VGfttjX
— NewsFirst Kannada (@NewsFirstKan) July 16, 2023
ಮುಂಗಾರು ಮಳೆಯ ಆರ್ಭಟದಿಂದ ಗೋವಾದ ಹಲವೆಡೆ ಧಾರಾಕಾರ ವರ್ಷಧಾರೆ ಆಗಿದೆ. ಭಾರೀ ಮಳೆಯಿಂದ ದೂದ್‌ಸಾಗರ್ ಫಾಲ್ಸ್ ಕೂಡ ಮೈದುಂಬಿ ಹರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಜಲಪಾತ ನೋಡೋಕೆ ಚೆಂದ. ಆದರೆ ಇಲ್ಲಿಗೆ ಪ್ರಯಾಣ ಬೆಳೆಸುವುದು ಅಪಾಯವಾಗಿದೆ. ಇತ್ತೀಚಿಗೆ ಮೈನಪಿ ಫಾಲ್ಸ್‌ಗೆ ಭೇಟಿ ಕೊಟ್ಟ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಾಯದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳು ದೂದ್‌ಸಾಗರ್ ಪ್ರಯಾಣವನ್ನೇ ನಿರ್ಬಂಧಿಸಿದೆ. ರೈಲ್ವೆ ಇಲಾಖೆಯ ಈ ಎಚ್ಚರಿಕೆ ಇದ್ರೂ ಪ್ರಯಾಣಿಕರು ದೂದ್‌ಸಾಗರ್‌ಗೆ ಬರೋದನ್ನು ಬಿಟ್ಟಿಲ್ಲ. ಇವತ್ತು ಬೆಳ್ಳಂಬೆಳಗ್ಗೆ ದೂದ್‌ಸಾಗರ್‌ಗೆ ಬಂದ ಪ್ರವಾಸಿಗರಿಗೆ ಗೋವಾ ಪೊಲೀಸರು ಬಸ್ಕಿ ಹೊಡೆಸಿದ್ದಾರೆ. ಕಷ್ಟಪಟ್ಟು ಬೆಟ್ಟ, ಗುಡ್ಡ ಹತ್ತಿ ದೂದ್‌ಫಾಲ್ಸ್ ನೋಡಲು ಬಂದವರು ಬಸ್ಕಿ ಹೊಡೆದು, ಹೊಡೆದು ಸುಸ್ತಾಗಿದ್ದಾರೆ.
ಸಿಕ್ಕಿಬಿದ್ದ ಕೆಲವರು ಬಸ್ಕಿ ಹೊಡೆಯೋ ದೃಶ್ಯ ಒಂದು ಕಡೆಯಾದ್ರೆ ಮತ್ತೊಂದು ಕಡೆ ಪ್ರವಾಸಿಗರು ಗೋವಾ ಪೊಲೀಸರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಮೂಲದ ನೂರಾರು ಪ್ರವಾಸಿಗರು ಇಲ್ಲಿ ಪ್ರವೇಶ ನಿಷೇಧಿಸಿರೋ ವಿಷಯ ಗೊತ್ತಿಲ್ಲದೇ ದೂದ್‌ಸಾಗರ್ ನೋಡಲು ಬಂದಿದ್ದಾರೆ. ಪೊಲೀಸರು ದೂದ್‌ಸಾಗರ್ ವಿಕ್ಷಣೆೆಗೆ ಅವಕಾಶ ನಿರಾಕರಿಸಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗೋವಾ ಪೊಲೀಸರ ಬಸ್ಕಿ ಹೊಡೆಸಿದ್ದು, ಪ್ರವಾಸಿಗರು ಪೊಲೀಸರನ್ನೇ ತರಾಟೆ ತೆಗೆದುಕೊಂಡಿರೋ ದೃಶ್ಯಗಳು ಸಾಕಷ್ಟು ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗೋವಾದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಅರಣ್ಯ ಇಲಾಖೆಯು ಸಾರ್ವಜನಿಕರು ಬರುವುದನ್ನು ನಿಷೇಧಿಸಿತ್ತು. ಇಂದು ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ದೂಧಸಾಗರ್ ಜಲಪಾತಕ್ಕೆ ಭೇಟಿ ನೀಡಿದ್ದಾರೆ. ಜಲಪಾತದ ಒಳಗೆ ಬಿಡುವಂತೆ ಕೆಲ ಕಾಲ ಪೊಲೀಸ್ ಹಾಗೂ ಪ್ರವಾಸಿಗರ ನಡುವೆ ವಾಗ್ವಾದ ಉಂಟಾಗಿದೆ.#Dudhsagar #newsfirstlive… pic.twitter.com/s5VH65Jqnd