ಬೈಕ್, ಆಟೋ, ಟ್ರ್ಯಾಕ್ಟರ್ ಸಂಚಾರಕ್ಕೆ ಇಂದಿನಿಂದ ಹೈ ಬ್ರೇಕ್!
ಹೆದ್ದಾರಿಯಲ್ಲಿ ಪೊಲೀಸ್ ಅಧಿಕಾರಿಗಳಿಂದ 'ದಂಡ’ಯಾತ್ರೆ ಶುರು
ನಿಯಮ ಮೀರಿ ಹೆದ್ದಾರಿಗಿಳಿದ ಬೈಕ್ ಸವಾರರಿಗೆ ₹500 ದಂಡ
ರಾಮನಗರ: ಮೈಸೂರು-ಬೆಂಗಳೂರು ನಡುವಿನ ದಶಪಥ ಹೆದ್ದಾರಿಯೂ ಅಪಘಾತದ ರಹದಾರಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಹೀಗಾಗಿ ಅಪಘಾತಗಳಿಗೆ ಕಡಿವಾಣ ಹಾಕಲು ಎಕ್ಸ್‌ಪ್ರೆಸ್ ವೇಯಲ್ಲಿ ಇಂದಿನಿಂದ ಆಟೋ, ಬೈಕ್‌ಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಆಗಸ್ಟ್ 1ರಿಂದ ಬೈಕ್, ಟ್ರ್ಯಾಕ್ಟರ್ ಸಂಚಾರಕ್ಕೆ ಬ್ರೇಕ್ ಹಾಕುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿತ್ತು.
ಆದ್ರೆ, ಇಂದು ಬೆಳಗ್ಗೆ ಎಕ್ಸ್‌ಪ್ರೆಸ್ ವೇನಲ್ಲಿ ಎಂದಿನಂತೆ ಬೈಕ್, ಆಟೋಗಳ ಓಡಾಟ ಕಂಡು ಬಂದಿತ್ತು. ಈ ಕುರಿತು ನ್ಯೂಸ್ ಫಸ್ಟ್ ಚಾನೆಲ್ ವರದಿ ಮಾಡಿದ ಬೆನ್ನಲ್ಲೇ ರಾಮನಗರ ಹಾಗೂ ಮಂಡ್ಯದಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜನೆ ಮಾಡಲಾಯಿತು. ನಿಯಮ ಮೀರಿ ಹೆದ್ದಾರಿಗೆ ಇಳಿದಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ದಂಡಯಾತ್ರೆ ಶುರು ಮಾಡಿದ್ದಾರೆ. ಇಂದಿನಿಂದ ಜಾರಿಗೆ ಬಂದಿರುವ ನಿಯಮವನ್ನು ಪಾಲಿಸದೆ ಎಕ್ಸ್‌ಪ್ರೆಸ್ ವೇನಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಹೆದ್ದಾರಿಗೆ ಇಳಿದ ಬೈಕ್ ಸವಾರರನ್ನು ಸಂಗಬಸವನದೊಡ್ಡಿ ಬಳಿ ಅಡ್ಡಗಟ್ಟಿ ಪೊಲೀಸರು 500 ರೂಪಾಯಿ ದಂಡ ಹಾಕುತ್ತಿದ್ದಾರೆ.
ಒಟ್ಟಾರೆ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ರಾಮನಗರ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್, ಆಟೋ ಸೇರಿದಂತೆ ಕೆಲವು ವಾಹನಗಳಿಗೆ ನಿಷೇಧ ಹೇರಿರುವುದು ವಾಹನ ಸವಾರರಿಗೆ ಬೇಸರದ ಸಂಗತಿಯಾಗಿದೆ.
ನಿಯಮ ಮೀರಿ ಹೆದ್ದಾರಿಗೆ ಇಳಿದಿದ್ದ ವಾಹನ ಸವಾರರ ವಿರುದ್ಧ ಪೊಲೀಸ್ ಅಧಿಕಾರಿಗಳು ದಂಡಯಾತ್ರೆ ಶುರು ಮಾಡಿದ್ದಾರೆ. ಸಂಚಾರಿ ಪೊಲೀಸರು ಬೈಕ್ ಸವಾರರನ್ನು ಸಂಗಬಸವನದೊಡ್ಡಿ ಬಳಿ ಅಡ್ಡಗಟ್ಟಿ 500 ರೂಪಾಯಿಗಳಷ್ಟು ದಂಡ ಹಾಕುತ್ತಿದ್ದಾರೆ.#newsfirstkannada #kannadanews #BangaloreMysoreHighway #TrafficPolice #ramanagar… pic.twitter.com/59nnG5ILvb
— NewsFirst Kannada (@NewsFirstKan) August 1, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ