ಪೊಲೀಸರನ್ನು ಯಾಮಾರಿಸೋಕೆ ಮಾಡುತ್ತಿದ್ದಾರೆ ಖತರ್ನಾಕ್ ಐಡಿಯಾ!
ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಲು ಸಜ್ಜಾದ ದ್ವಿಚಕ್ರ ವಾಹನ ಸವಾರರು
ನಂಬರ್ ಪ್ಲೇಟ್ಗೆ ಪ್ಲಾಸ್ಟರ್, ಹೆಲ್ಮೆಟ್ ಹಾಕಲ್ಲ, ಸಿಗ್ನಲ್ ಜಂಪ್, ದೃಶ್ಯ ಸೆರೆ
ಬೆಂಗಳೂರು: ಟ್ರಾಫಿಕ್ ಕ್ಲಿಯರ್ ಮಾಡೋಕೆ ಪೊಲೀಸರು ಹರಸಾಹಸ ಪಡುತ್ತಾರೆ. ಸಂಚಾರ ಸುಗಮವಾಗಿ ಸಾಗಲಿ ಅಂತ ಹಗಲಿರುಳು ಶ್ರಮ ಪಡುತ್ತಾರೆ. ಆದ್ರೆ ಟ್ರಾಫಿಕ್ ಪೊಲೀಸರಿಗೂ ಚಳ್ಳೆಹಣ್ಣ ತಿನ್ನಿಸೋ ಪ್ರಕರಣಗಳು ಬೆಂಗಳೂರಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗಿವೆ. ತ್ರಿಬಲ್ ರೈಡಿಂಗ್, ಹೆಲ್ಮೆಟ್ ಇಲ್ಲದೆ ಸಂಚಾರ ಮಾಡಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಲ್ಲದೆ, ಗಾಡಿ ನಂಬರ್ ಪ್ಲೇಟ್ನ ಕೆಲ ನಂಬರ್ಗಳನ್ನ ಮರೆಮಾಚಿ ಪೊಲೀಸರಿಗೆ ದೋಖಾ ಮಾಡುತ್ತಿದ್ದಾರೆ.
ಇದೀಗ ಬೈಕ್ ಸವಾರರ ಕಳ್ಳಾಟ ನ್ಯೂಸ್ ಫಸ್ಟ್ ಕ್ಯಾಮಾರದಲ್ಲಿ ಸೆರೆಯಾಗಿದೆ. ಬೆಂಗಳೂರಿನಂತ ಸಿಟಿಯಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡಬೇಕು ಅಂದ್ರೆ ಗಟ್ಟಿ ಜೀವವೇ ಆಗಬೇಕು. ಆ ದೂಳು. ವಾಹನಗಳ ಸೌಂಡು ಇದೆಲ್ಲದರ ಮಧ್ಯೆ ನಿಂತು ಪೊಲೀಸರು ಸಂಚಾರ ದಟ್ಟಣೆ ತಪ್ಪಿಸೋದಕ್ಕೆ ಹಗಲಿರುಳು ಕೆಲಸ ಮಾಡ್ತಾರೆ. ಆದ್ರೆ ಕೆಲ ಐನಾತಿಗಳು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಖತರ್ನಾಕ್ ಪ್ಲಾನ್ ಮಾಡಿದ್ದಾರೆ.
ನಂಬರ್ ಪ್ಲೇಟ್ಗಳಿಗೆ ಗಮ್‌ಟೇಪ್ ಸುತ್ತಿ ಸವಾರರಿಂದ ಕಳ್ಳಾಟ!
ಬೈಕ್ ಸವಾರರ ಕಳ್ಳಾಟ ನ್ಯೂಸ್ ಫಸ್ಟ್ ಕ್ಯಾಮಾರದಲ್ಲಿ ಸೆರೆ!
ಟ್ರಾಫಿಕ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸ್ತಿರುವ ಕೆಲವರು ಖತರ್ನಾಕ್ ಕಿಲಾಡಿಗಳ ಬಗ್ಗೆ ನ್ಯೂಸ್ಫಸ್ಟ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಒಂದು ರಿಯಾಲಿಟಿ ಚೆಕ್ ಮಾಡಿದ್ದೇವೆ. ಅದರಂತೆ ಬೆಂಗಳೂರಿನ ಸಿಗ್ನಲ್ವೊಂದರಲ್ಲಿ ಇಟ್ಟುಕೊಂಡಿದ್ದ ನಮ್ಮ ಕ್ಯಾಮೆರಾಗೆ ಕಳ್ಳಾಟ ಆಡ್ತಿರುವ ಬೈಕ್ ಸವಾರರರು ಸೆರೆಯಾಗಿದ್ದಾರೆ. ಬೈಕ್ಗಳ ನಂಬರ್ ಪ್ಲೇಟ್ನಲ್ಲಿ ಒಂದೆರಡು ನಂಬರ್ ಕಾಣ್ತಾನೆ ಇಲ್ಲ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದಾಗ ಟ್ರಾಫಿಕ್ ಪೊಲೀಸರ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳಬಾರದು ಅಂತಾ ಹೀಗೆ ಮಾಡಿದ್ದಾರೆ. ಗಾಡಿ ನಂಬರ್ ಪ್ಲೇಟ್ನ ಕೆಲ ನಂಬರ್ಗಳನ್ನ ಮರೆಮಾಚಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದಾರೆ. ಬರೀ ಒಂದೆರಡು ಬೈಕ್ ಅಲ್ಲ. ಈ ತರಹದ ಹತ್ತಾರು ಬೈಕ್ ಸವಾರರು ತಮ್ಮ ಬೈಕ್ನ ನಂಬರ್ ಮರೆಮಾಚಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ತಿದ್ದಾರೆ.
ಈ ರೀತಿ ನಂಬರ್ ಮರೆ ಮಾಚಿದ್ದರಿಂದ ಬೈಕ್ ಯಾರದೂ ಅನ್ನೋದೆ ಗೊತ್ತಾಗಲ್ಲ. ಇದರಿಂದಾಗಿ ರೂಲ್ಸ್ ಬ್ರೇಕ್ ಮಾಡಿದ್ರೂ ಇಂತವರನ್ನು ಹಿಡಿಯೋಕ್ಕಾಗದೇ ಪೊಲೀಸರು ಕೂಡ ಹೈರಾಣಾಗಿದ್ದಾರೆ. ಇಂಥ ಖತರ್ನಾಕ್ ವ್ಯಕ್ತಿಗಳನ್ನು ಹೇಗೆ ಹಿಡಿಯೋದು ಅಂತ ಚಿಂತಾಗ್ರಾತರಾಗಿದ್ದಾರೆ. ಸಂಚಾರಿ ನಿಯಮಗಳನ್ನ ಪಾಲಿಸದೇ ಇರೋ ಅಪಘಾತದ ಪ್ರಕರಣಗಳು ಹೆಚ್ಚಾಗ್ತಿದ್ದು, ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗ್ತಿದೆ. ಈ ರೀತಿ ನಂಬರ್ ಪ್ಲೇಟ್ ಮರೆ ಮಾಚಿ ರೂಲ್ಸ್ ಬ್ರೇಕ್ ಮಾಡೋರ ವಿರುದ್ಧ ಕ್ರಮ ಕೈಗೊಳ್ಳಲಾಗದೇ ಪೊಲೀಸರಿಗೂ ಟೆನ್ಷನ್ ಶುರುವಾಗಿದೆ.
ಹೆಲ್ಮೆಟ್ ಇಲ್ಲ.. ಟ್ರಾಫಿಕ್ ಪೊಲೀಸರಿಗೆ ಬೈಕ್ ಸವಾರರ ಕಿರಿಕಿರಿ
ಬೈಕ್ವೊಂದರ ಮೇಲೆ ಮೂರು ಜನ ಹೋಗ್ತಿದ್ದಾರೆ. ಒಬ್ಬನ ತಲೆಗೂ ಹೆಲ್ಮೆಟ್ ಇಲ್ಲ. ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ಶಿವನ ಪಾದ ಸೇರೋದು ಗ್ಯಾರಂಟಿ. ಆದ್ರೂ ಇವರ ನಿಯಮಗಳನ್ನು ಗಾಳಿಗೆ ತೂರಿ ಈ ರೀತಿ ಬೇಕಾಬಿಟ್ಟಿಯಾಗಿ ಬೈಕ್ ಓಡಿಸ್ತಿದ್ದಾರೆ. ಈ ದೃಶ್ಯ ನ್ಯೂಸ್ ಫಸ್ಟ್ ಕ್ಯಾಮಾರದಲ್ಲಿ ಸೆರೆಯಾಗಿದೆ. ಒಂದು ಕಡೆ ನಗರದಲ್ಲಿ ವರ್ಷದಿಂದ ವರ್ಷಕ್ಕೆ ಆ್ಯಕ್ಸಿಡೆಂಟ್ ಪ್ರಕರಣ ಹೆಚ್ಚಾಗ್ತಿದೆ. ನಗರದಲ್ಲಿ ಆ್ಯಕ್ಸಿಡೆಂಟ್ ನಿಂದ ಸಾವಿನ ಮನೆ ಸೇರೋರ ಸಂಖ್ಯೆ ಅಧಿಕವಾಗಿದೆ. ಅದಕ್ಕೆ ಕಾರಣ ಸಂಚಾರಿ ನಿಯಮಗಳ ಉಲ್ಲಂಘನೆ.
ಯಾವುದೇ ಹೆಲ್ಮೆಟ್ ಇಲ್ಲದೆ ಸಂಚಾರ ಮಾಡ್ತಿರುವ ಕೆಲ ಸವಾರರು, ಯಾವುದೇ ಕಾರಣಕ್ಕೂ ಸಿಕ್ಕಿ ಹಾಕಿಕೊಳ್ಳಬಾರದು ಅನ್ನೋ ಕಾರಣಕ್ಕೆ ನಂಬರ್ ಪ್ಲೇಟ್ ಕೊನೆಯ ಎರಡು ನಂಬರ್, ಮಧ್ಯದಲ್ಲಿರುವ ನಂಬರ್ಗೆ ಗಮ್ ಟೇಪ್ ಅಂಟಿಸುವ ಮೂಲಕ ನಂಬರ್ ಮರೆಮಾಚ್ತಿದ್ದಾರೆ. ಇದರಿಂದ ಟ್ರಾಫಿಕ್ ಸಿಗ್ನಲ್ನಲ್ಲಿರೋ ಸಿಸಿಟಿವಿಗಳಲ್ಲಿ ರೂಲ್ಸ್ ಬ್ರೇಕ್ ಮಾಡಿರುವ ದೃಶ್ಯ ಸೆರೆಯಾದ್ರೂ, ರೂಲ್ಸ್ ಬ್ರೇಕ್ ಮಾಡಿರುವ ವಾಹನ ದೃಶ್ಯ ಇದ್ರೂ ಕೂಡ, ಯಾವುದೇ ರೀತಿಯಲ್ಲಿ ದಂಡ ಆಗಲಿ, ಕಾನೂನಿನ ಅಸ್ತ್ರ ಝಳಪಿಸಲು ಸಾಧ್ಯವಾಗದೆ ಟ್ರಾಫಿಕ್ ಪೊಲೀಸರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಹೌದು, ಕಳೆದ 2017 ರಿಂದಲೂ ನಗರದಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2017ರಲ್ಲಿ ಆ್ಯಕ್ಸಿಡೆಂಟ್ನಿಂದ 609 ಜನ ಸಾವನಪ್ಪಿದ್ದಾರೆ. 2018ರಲ್ಲಿ 661 ಜನ ಬಲಿಯಾಗಿದ್ರು, ಇನ್ನೂ 2019ರಲ್ಲಿ 766 ಜನ 2020ರಲ್ಲಿ 622 ಜನ 2021ರಲ್ಲಿ 618 ಜನ 2022 ರಲ್ಲಿ 777 2023ರಲ್ಲಿ 684 ಮಂದಿ ಹೀಗೆ ಅಪಘಾತದಿಂದ ಬಲಿಯಾದವರ ಸಂಖ್ಯೆ ಹೆಚ್ಚುತಲ್ಲೇ ಇದೆ. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಅನ್ನೋ ಹಾಗೆ ಬೈಕ್ ಸವಾರರು ದಂಡದಿಂದ ತಪ್ಪಿಸಿಕೊಳ್ಳಲು ನಾನಾ ಕಳ್ಳಾಟಗಳನ್ನ ಆಡಿದ್ದಾರೆ. ಇಂಥಾ ಐನಾತಿಗಳನ್ನು ಹಿಡಿಯಲಾಗದೇ ಸಂಚಾರಿ ಪೊಲೀಸರು ಸಂಕಟ ಅನುಭವಿಸುವಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ