ದಿನದಿಂದ ದಿನಕ್ಕೆ ಹೆಚ್ಚಾಗ್ತಿವೆ ಆ್ಯಕ್ಸಿಡೆಂಟ್ ಕೇಸ್!
ಮಾರಾಣಾಂತಿಕ ಅಪಘಾತಗಳ ಸಂಖ್ಯೆ 520ಕ್ಕೂ ಹೆಚ್ಚು!
821 ಪ್ರಕರಣಗಳಲ್ಲಿ ಡಿಎಲ್ ಅಮಾನತಿಗೆ ಸಿದ್ಧತೆ
ಬೆಂಗಳೂರು: ವ್ಹೀಲಿಂಗ್.. ಕೆಲವು ಪುಡಾರಿಗಳಿಗೆ ಇದು ಕ್ರೇಜ್. ಅವರು ಮಾಡೋ ಅನಾಚಾರದಿಂದ ಬೇರೆಯವರಿಗೂ ತೊಂದರೆಯಾಗ್ತಿದೆ. ಕೊನೆಗೂ ನಮ್ಮ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಇಂತಹ ವ್ಹೀಲಿಂಗ್ಗೆ ಕಡಿವಾಣ ಹಾಕೋದಕ್ಕೆ ಸೂತ್ರವೊಂದನ್ನ ಕಂಡುಕೊಂಡಿದ್ದಾರೆ.
ಎಸ್.. ವ್ಹೀಲಿಂಗ್ ಮಾಡೋರೆ ಹುಷಾರ್, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರೆ ಬೀ ಅಲರ್ಟ್, ಡ್ರಿಂಕ್ಸ್ ಮಾಡಿ ಡ್ರೈವಿಂಗ್ ಮಾಡೋರೆ ಇನ್ಮುಂದೆ ಎಚ್ಚರ..ಎಚ್ಚರ.. ಯಾಕಂದ್ರೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರ ವಿರುದ್ಧ ಕಠಿಣ ಕಾನೂನಿನ ಅಸ್ತ್ರ ಝಳಪಿಸಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ… ಜೊತೆಗೆ ಸಂಚಾರಿ ನಿಮಯ ಗಾಳಿಗೆ ತೂರಿ, ಮತ್ತೊಬ್ಬರ ಜೀವಕ್ಕೆ ಕುತ್ತು ತರುವ ಚಾಲಕರ ಡ್ರೈವಿಂಗ್ ಲೈಸೆನ್ಸ್ ಇನ್ಮುಂದೆ ಅಮಾನತ್ತಾಗಲಿದೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಳ
ಸಂಚಾರ ನಿಮಯ ಉಲ್ಲಂಘನೆಯಿಂದಲೇ ಆಗ್ತಿವೆ ಆ್ಯಕ್ಸಿಡೆಂಟ್
ಸಿಲಿಕಾನ್ ಸಿಟಿಯಲ್ಲಿ ಸಂಚಾರ ನಿಮಯ ಉಲ್ಲಂಘನೆಯಿಂದಲೇ ಆ್ಯಕ್ಸಿಡೆಂಟ್ ಪ್ರಕರಣಗಳ ಸಂಖ್ಯೆ ಏರಿಕೆಯಾಗ್ತಿವೆ. ಇದ್ರಿಂದ ಮತ್ತಷ್ಟು ಕಾರ್ಯ ಪ್ರವೃತರಾಗಿರುವ ಸಂಚಾರಿ ಪೊಲೀಸರು, ಪದೇ ಪದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ, ಗಂಭೀರ ಸ್ವರೂಪದ ಅಪಘಾತಕ್ಕೆ ಕಾರಣವಾದವರ ಡಿ.ಎಲ್ ಅಮಾನತಿಗೆ ಮುಂದಾಗಿದೆ. ಈಗಾಗಲೇ 2016 ಮಂದಿಯ ಪರವಾನಗಿ ಅಮಾನತುಗೊಳಿಸಿದೆ.
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರೇ.. ಹುಷಾರ್!
ನಗರದಲ್ಲಿ ದಿನದಿಂದ ದಿನಕ್ಕೆ ನಗರದಲ್ಲಿ ಆ್ಯಕ್ಸಿಡೆಂಟ್ ಕೇಸ್ ಹೆಚ್ಚಾಗ್ತಿವೆ. ಜನವರಿ 1 ರಿಂದ ಸೆಫ್ಟೆಂಬರ್ 8ರ ವರೆಗೆ ನಗರದಲ್ಲಿ 529 ಮಾರಾಣಾಂತಿಕ ಅಪಘಾತಗಳು ನಡೆದಿದ್ರೆ, 2,801 ಮಾರಾಣಾಂತಿಕವಲ್ಲದ ಅಪಫಾತ ಪ್ರಕರಣಗಳು ದಾಖಲಾಗಿವೆ. ಇನ್ನು ಅಪಘಾತದಲ್ಲಿ 544 ಜನರು ಕೊನೆಯುಸಿರೆಳೆದಿದ್ರೆ, 2,871 ಮಂದಿ ಗಾಯಗೊಂಡಿದ್ದಾರೆ.. ಇದೀಗ ಪಾನಮತ್ತ ಚಾಲನೆ, ಅತೀ ವೇಗದ ಚಾಲನೆ ಸೇರಿದಂತೆ 821 ಪ್ರಕರಣಗಳ ಸಂಬಂಧ 305 ಮಂದಿಯ ಡಿಎಲ್ ಅಮಾನತುಗೊಳಿಸಲಾಗಿದೆ.
ಇನ್ನು ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಆ್ಯಕ್ಸಿಡೆಂಟ್ನಿಂದ ಸಾವೀಗೀಡಾಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗೆ ವರ್ಷದಿಂದ ವರ್ಷಕ್ಕೆ ಆ್ಯಕ್ಸಿಡೆಂಟ್ನಿಂದ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ಇಲ್ಲಿ ಯಾರೋ ಮಾಡುವ ತಪ್ಪಿಗೆ ಇನ್ಯಾರೋ ಬಲಿಯಾಗ್ತಿದ್ದಾರೆ. ಯಾರದ್ದೋ ಶೋಕಿಗೆ, ಇನ್ಯಾರು ಉಸಿರು ಚೆಲ್ತಿದ್ದಾರೆ.. ಹೀಗೆ ಬೇರೆಯವರ ಜೀವದ ಜೊತೆ ಚೆಲ್ಲಾಟ ಆಡ್ತಿದ್ದವರ ಡಿ.ಎಲ್ ಅಮಾನತು ಮಾಡಲು ಪೊಲೀಸ್ರು ಮುಂದಾಗಿದ್ದು, ಇನ್ನಾದ್ರೂ ಅಮಾಯಕರ ಪ್ರಾಣದ ಜೊತೆ ಚೆಲ್ಲಾಟ ಆಡೋರಿಗೆ ಬಿಸಿ ಮುಟ್ಟಿಸಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ