newsfirstkannada.com

ರೈಲು ಭೀಕರ ಡಿಕ್ಕಿಯಾಗಿ ವೃದ್ಧ ಸಾವು.. 5 ಕಿಲೋ ಮೀಟರ್​ವರೆಗೆ ಎಳೆದೊಯ್ದ ಟ್ರೈನ್

Share :

Published July 4, 2024 at 6:29am

    ವೇಗವಾಗಿ ಬರ್ತಿದ್ದ ರೈಲು ವೃದ್ಧನಿಗೆ ಡಿಕ್ಕಿಯಾಗಿ ಎಳೆದೊಯ್ದಿತಾ?

    ರೈಲು ಬರುತ್ತಿರುವುದನ್ನ ಗಮನಿಸದೇ ಹಳಿ ದಾಟುತ್ತಿದ್ದ ವೃದ್ಧ

    ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಹೈದರಾಬಾದ್: ಓರ್ವ ವೃದ್ಧನಿಗೆ ರೈಲೊಂದು ಡಿಕ್ಕಿಯಾಗಿ ಸುಮಾರು 5 ಕಿಲೋ ಮೀಟರ್​ವರೆಗೆ ಮೃತದೇಹವನ್ನು ಎಳೆದುಕೊಂಡು ಹೋಗಿರುವ ಘಟನೆ ತೆಲಂಗಾಣದ ಬಿಬಿನಗರ-ಘಟಕೇಸರ್​ನಗರದ ನಡುವೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯುರಿಟಿ ಗಾರ್ಡ್​​ಗೆ ಚಾಕು ಇರಿತ, ಸಾವು

ಬೀಬಿನಗರ-ಘಟಕೇಸರ್ ರೈಲು ನಿಲ್ದಾಣದ ನಡುವೆ ಅಪರಿಚಿತ ವೃದ್ಧನೊಬ್ಬ ರೈಲು ಹಳಿ ದಾಟಲು ಯತ್ನಿಸುತ್ತಿದ್ದನು. ಆದರೆ ಇದೇ ವೇಳೆ ವರಂಗಲ್- ಸಿಂಕಿದರಾಬಾದ್​​ನ ಎಂಎಂಟಿಎಸ್ ರೈಲು ವೇಗವಾಗಿ ಬಂದು ವೃದ್ಧನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವೃದ್ಧ ಸಾವನ್ನಪ್ಪಿದ್ದು ಮೃತದೇಹ ರೈಲಿನ ಮುಂಭಾಗ ಸಿಕ್ಕಿ ಹಾಕಿಕೊಂಡಿದೆ. ಹೀಗಾಗಿ ಸುಮಾರು 5 ಕಿಲೋ ಮೀಟರ್​ವರೆಗೆ ಹಾಗೇ ಮೃತದೇಹವನ್ನ ರೈಲು ಎಳೆದುಕೊಂಡು ಹೋಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ವಿಶ್ವಕಪ್​ ಗೆದ್ದ ತಂಡಕ್ಕೆ ಸೈಕ್ಲೋನ್ ಕಂಟಕ.. ಕೊನೆಗೂ ಸ್ವದೇಶಕ್ಕೆ ಮರಳಲು ಸ್ಪೆಷಲ್ ಫ್ಲೈಟ್ ಸಿದ್ಧ; ವಾಪಸ್‌ ಯಾವಾಗ?

ಇದನ್ನು ನೋಡಿದ ಕೆಲವರು ರೈಲ್ವೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟಕೇಸರ್ ನಿಲ್ದಾಣದ ಬಳಿ ರೈಲನ್ನು ನಿಲ್ಲಿಸಿ ವೃದ್ಧನ ದೇಹವನ್ನು ಸಿಆರ್​ಪಿಎಫ್​ ಸಿಬ್ಬಂದಿ ಹೊರತೆಗೆದಿದ್ದಾರೆ. ಇನ್ನು ವೃದ್ಧನ ಮುಖ ಸರಿಯಾಗಿ ಗುರುತು ಸಿಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದು ಈ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ವೃದ್ಧನನ್ನ ರೈಲು ಎಳೆದುಕೊಂಡು ಹೋಗುತ್ತಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೋಡುಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈಲು ಭೀಕರ ಡಿಕ್ಕಿಯಾಗಿ ವೃದ್ಧ ಸಾವು.. 5 ಕಿಲೋ ಮೀಟರ್​ವರೆಗೆ ಎಳೆದೊಯ್ದ ಟ್ರೈನ್

https://newsfirstlive.com/wp-content/uploads/2024/07/TN_OLD_MAN.jpg

Load More