newsfirstkannada.com

ಫ್ರೀಡಂ ಪಾರ್ಕ್​ನಲ್ಲಿ ಖಾಸಗಿ ವಾಹನ ಚಾಲಕರ ಸಮಸ್ಯೆ ಆಲಿಸಿದ ಸಾರಿಗೆ ಸಚಿವ; ಬೇಡಿಕೆಗಳನ್ನು ಈಡೇರಿಸುತ್ತಾರಾ ರಾಮಲಿಂಗಾರೆಡ್ಡಿ?

Share :

11-09-2023

    ಫ್ರೀಡಂ ಪಾರ್ಕ್​ಗೆ ಬಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

    ಖಾಸಗಿ ವಾಹನ ಚಾಲಕರ ಸಮಸ್ಯೆ ಆಲಿಸಿದ ಸಾರಿಗೆ ಸಚಿವ

    ಫ್ರೀಡಂ ಪಾರ್ಕ್​ನಲ್ಲಿ ಬೀಡುಬಿಟ್ಟ ಖಾಸಗಿ ವಾಹನ ಸವಾರರು

ಖಾಸಗಿ ಸಾರಿಕೆ ಒಕ್ಕೂಟ ಇಂದು ಬೆಂಗಳೂರು ಬಂದ್​ ಮಾಡುವ ಮೂಲಕ ಪ್ರತಿಭಟನೆಯಲ್ಲಿ ನಿರತವಾಗಿದೆ. ಫ್ರೀಡಂ ಪಾರ್ಕ್​ನಲ್ಲಿ ಬೀಡುಬಿಡುವ ಮೂಲಕ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಪಟ್ಟುಹಿಡಿದಿದ್ದಾರೆ.

ಈ ವೇಳೆ ಫ್ರೀಡಂ ಪಾರ್ಕ್​ಗೆ ಬಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಭಟನಾನಿರತರ ಅಹವಾಲು ಕೇಳಿದರು. ಬಳಿಕ ಖಾಸಗಿ ವಾಹನ ಚಾಲಕರ ಸಮಸ್ಯೆ ಹಾಗೂ ಪ್ರತಿಭಟನಾಕಾರರ ಬೇಡಿಕೆಗಳನ್ನ ರಾಮಲಿಂಗಾರೆಡ್ಡಿ ಆಲಿಸಿದ್ದಾರೆ.

ಸಿಎಂ ಏನಂದ್ರು ಗೊತ್ತಾ?

ಸಿಎಂ ಸಿದ್ದರಾಮಯ್ಯ ಕೂಡ ಬೆಂಗಳೂರು ಬಂದ್​ ಕುರಿತು ಮಾತನಾಡಿದ್ದಾರೆ. ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಖಾಸಗಿ ವಾಹನ ಮಾಲೀಕರು, ಚಾಲಕರು ಈಡೇರಿಸುವಂತಹ ಬೇಡಿಕೆ ಕೇಳಿದ್ರೆ ಮಾಡಬಹುದು. ಈಡೇರಿಸಲಾಗದ ಬೇಡಿಕೆ ಇಟ್ಟರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ಅನುಕೂಲ ಆಗಲಿ ಎಂದು ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಇದರಿಂದ ಖಾಸಗಿ ಬಸ್‌ಗಳಿಗೆ ಆದಾಯ ಬರುತ್ತಿಲ್ಲ. ನಷ್ಟ ಆಗುತ್ತಿದೆ ಎನ್ನುವುದು ಅವರ ವಾದ ಎಂದು ಸಿಎಂ ಹೇಳಿದರು.

ಖಾಸಗಿ ವಾಹನ ಚಾಲಕರ ಡಿಮ್ಯಾಂಡ್‌ಗಳು ಸರಿಯಿಲ್ಲ ಎಂದ ಸಿಎಂ ಸಿದ್ದರಾಮಯ್ಯ, ನಷ್ಟ ಆಗುವುದು ಬಿಡುವುದು ಬೇರೆ ವಿಚಾರ. ನಷ್ಟ ತುಂಬಿಕೊಡಿ ಅಂದ್ರೆ ಆಗುತ್ತಾ? ಅದು ಸಾಧ್ಯವಾಗದ ಮಾತು ಎಂದು ಸ್ಪಷ್ಟಪಡಿಸಿದರು. ಇನ್ನು ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶ ಇದೆ. ಅದನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಫ್ರೀಡಂ ಪಾರ್ಕ್​ನಲ್ಲಿ ಖಾಸಗಿ ವಾಹನ ಚಾಲಕರ ಸಮಸ್ಯೆ ಆಲಿಸಿದ ಸಾರಿಗೆ ಸಚಿವ; ಬೇಡಿಕೆಗಳನ್ನು ಈಡೇರಿಸುತ್ತಾರಾ ರಾಮಲಿಂಗಾರೆಡ್ಡಿ?

https://newsfirstlive.com/wp-content/uploads/2023/09/ramalinga-Reddy.webp

Load More