newsfirstkannada.com

ನಾಳೆ ಬೆಂಗಳೂರು ಬಂದ್​​.. ದಿಢೀರ್​ ಸುದ್ದಿಗೋಷ್ಠಿ ಕರೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು..?

Share :

10-09-2023

    ನಾಳೆ ಖಾಸಗಿ ಚಾಲಕರಿಂದ ಬೆಂಗಳೂರಿಗೆ ಬಂದ್​​ಗೆ ಕರೆ

    ಎಲ್ಲಾ ಬೇಡಿಕೆಗೆ ನಾವು ಉತ್ತರವನ್ನ ಕೊಟ್ಟಿದ್ದೇವೆ- ಸಾರಿಗೆ ಸಚಿವ

    5 ಸಾವಿರಕ್ಕೂ ಹೆಚ್ಚು ಶಾಲಾ ವಾಹನ, ಸಿಟಿ ಟ್ಯಾಕ್ಸಿಗಳು ಸ್ಥಗಿತ

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾಳೆ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್​ಗೆ ಕರೆ ನೀಡಿದೆ. ಇವತ್ತು ಮಧ್ಯರಾತ್ರಿಯಿಂದಲೇ ಆಟೋ, ಕ್ಯಾಬ್, ಟ್ಯಾಕ್ಸಿ ಸಿಗೋದು ಅನುಮಾನವಾಗಿದೆ. ಈ ಮುಷ್ಕರಕ್ಕೆ 30ಕ್ಕೂ ಹೆಚ್ಚು ಸಂಘಟನೆಗಳ 7 ಲಕ್ಷಕ್ಕೂ ಹೆಚ್ಚು ವಾಹನಗಳು ಬೆಂಬಲ ಕೊಟ್ಟಿವೆ. ಇದರ ಮಧ್ಯೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್​ ಸುದ್ದಿಗೋಷ್ಠಿ ನಡೆಸಿದ್ದಾರೆ.

ಇನ್ನೂ, ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ನಾಳೆ ಖಾಸಗಿ ಸಾರಿಗೆ ಒಕ್ಕೂಟ ಬಂದ್​ಗೆ ಕರೆ ಕೊಟ್ಟಿದೆ. ಬಂದ್ ಮಾಡೋದಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ಮಧ್ಯರಾತ್ರಿ 12 ಗಂಟೆಯಿಂದ ಬಂದ್ ಅಂತಾ ಹೇಳಿದ್ದಾರೆ. ಹೀಗಾಗಿ ಈ ಕುರಿತು ನಾಲ್ಕು ಜನ ಎಂ.ಡಿ ಜೊತೆ ಮಾತಾಡಿದ್ದೇನೆ. 4 ಸಾವಿರ ಟ್ರಿಪ್ ಬಸ್​ಗಳು ನಾಳೆ ಓಡಾಡುತ್ತೆ. ಶಾಲಾ ಮಕ್ಕಳು, ಆಫೀಸ್​ಗೆ ಹೋಗುವವರಿಗೆ ಯಾವುದೇ ತೊಂದರೆ ಆಗಬಾರದು ಅಂತ ಬಸ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆಯೂ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಚಾಲಕರ ಬೇಡಿಕೆ ಕೂಡ ಬಗ್ಗೆ ಗೊತ್ತಿದೆ. ಅದರಲ್ಲಿ ಮೂರ್ನಾಲ್ಕು ವಿಚಾರಗಳು ಹಣಕಾಸಿಗೆ ಸಂಬಂಧಪಟ್ಟಿದೆ. ಹಣಕಾಸು ವಿಚಾರಕ್ಕೆ ಸಂಬಂಧ ಪಟ್ಟಿರುವುದರಿಂದ ನಾನು ಈ ತೀರ್ಮಾನ ಮಾಡೋಕೆ ಆಗಲ್ಲ. ಅದು ಸಿಎಂಗೆ ಬಿಟ್ಟಿರುವ ವಿಚಾರ. ಆಟೋ, ಟಾಕ್ಸ್ ಚಾಲಕರ ಮಕ್ಕಳಿಗೆ ಸ್ಕಾಲರ್ ಶಿಫ್ ಕೊಡೋದು, ಇಂದಿಕಾ ಕ್ಯಾಂಟಿನ್ ಫುಡ್ ವ್ಯವಸ್ಥೆ ಬಗ್ಗೆ ಚರ್ಚೆ ಮಾಡಿದ್ದೇನೆ. ನಾಳೆ ಎಲ್ಲಾ ಶಾಲಾ ಕಾಲೇಜು ಇರುತ್ತೆ. ಎಲ್ಲಾ ಕಡೆ ಓಡಾಡುವವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಪ್ರತಿ ದಿನ 40 ಲಕ್ಷ ಜನ ಬಸ್​ನಲ್ಲಿ ಓಡಾಡ್ತಾರೆ. ಅವರ ಎಲ್ಲಾ ಬೇಡಿಕೆಗೆ ನಾವು ಉತ್ತರವನ್ನ ಕೊಟ್ಟಿದ್ದೇವೆ. ಈ ಕುರಿತು ಚಾಲಕರ ಜೊತೆ ಮಾತುಕತೆ ಮಾಡಿದ್ರೆ ನಾನು ಮಾತಾಡೋಕೆ ರೆಡಿ ಇದ್ದೀನಿ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆ ಬೆಂಗಳೂರು ಬಂದ್​​.. ದಿಢೀರ್​ ಸುದ್ದಿಗೋಷ್ಠಿ ಕರೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು..?

https://newsfirstlive.com/wp-content/uploads/2023/08/Ramalinga-Reddy.jpg

Load More