newsfirstkannada.com

ಫ್ರೀ ಬಸ್​ನಲ್ಲಿ ನಿತ್ಯ ಗಲಾಟೆ.. ಬಸ್​ಗೆ ಕಲ್ಲು ಎಸೆತ -ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ

Share :

26-06-2023

  ರಾಜ್ಯದಲ್ಲಿ ಗೃಹಜ್ಯೋತಿ ಗ್ಯಾರಂಟಿಗೆ ಜನರಿಂದ ಉತ್ತಮ ಸ್ಪಂದನೆ

  ಪ್ಯಾಸೆಂಜರ್ ಸಮೇತ ಠಾಣೆಗೆ ಬಸ್ ತಂದ ಡ್ರೈವರ್.. ಕಾರಣ ಏನು?

  ಲಗೇಜ್​ಗೆ ಟಿಕೆಟ್ ತೆಗೆದುಕೊಳ್ಳಿ ಎಂದರೆ ಮಹಿಳೆಯರು ರಂಪಾಟ

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿ 2ನೇ ವಾರ ಕಳೆದಿದೆ. ಜಸ್ಟ್​ ಎರಡೇ 2 ವಾರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಪರಿಸ್ಥಿತಿ, ಪ್ರಯಾಣ ಸ್ಥಿತಿ, ಪ್ರವಾಸ ಸ್ಥಿತಿ ಎಲ್ಲವೂ ಬದಲಾಗಿದೆ. ಈ ನಡುವೆ ಫ್ರೀ ಬಸ್​ ಹಾವಳಿ, ಜನರ ದಾಳಿ, ವಿಪಕ್ಷಗಳ ವಾಗ್ದಾಳಿ ಎಲ್ಲವೂ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ತಿದೆ.

ಆಧಾರ್​ ಕಾರ್ಡ್​ ಒರಿಜಿನಲ್​ ಇಲ್ಲ ಅಂತ ಒಬ್ಬರು ಗಲಾಟೆ. ರೀ.. ಲಗೇಜ್​ಗಳಿಗೆ ಟಿಕೆಟ್​ ತಗೋಳಿ ಅಂತ ಕೇಳಿದ್ರೆ ಅದಕ್ಕೂ ಮಹಿಳೆಯರಿಂದ ರಂಪಾಟ ಶುರುವಾಗಿದೆ. ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿಗಳು ಬಿಜೆಪಿಗೆ ಅಸ್ತ್ರವಾಗಿದೆ. ಪ್ರತಿಭಟನೆಯ ಪ್ಲಾನ್ ಮಾಡ್ತಾ ಸದನದ ಒಳಗೆ ಸದನದ ಹೊರಗೆ ಧರಣಿ ಮಾಡಲು ಸಜ್ಜಾಗಿದ್ದಾರೆ. ಇದೆಲ್ಲದರ ನಡುವೆ ರಾಜ್ಯ ಸರ್ಕಾರಿ ಸಾರಿಗೆ ವಿರುದ್ಧ ಜನಾಕ್ರೋಶ ಹೆಚ್ಚಾಗ ತೊಡಗಿವೆ. ಇದಕ್ಕೆ ಪುಷ್ಟಿ ನೀಡುವಂಥಹ ಪ್ರಕರಣ ಕೊಪ್ಪಳದಲ್ಲಿ ನಡೆದಿದೆ.

ಬಸ್ ನಿಲ್ಲಿಸದ ಡ್ರೈವರ್, ಬಸ್​ಗೆ ಕಲ್ಲೆಸೆದ ಮಹಿಳೆ

ಕಾಂಗ್ರೆಸ್​ ಸರ್ಕಾರದ ಶಕ್ತಿ ಯೋಜನೆ ಜಾರಿ ಮಾಡಿರುವ ಎಫೆಕ್ಟ್​ ಯಾವ ರೀತಿ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಯಾವೊಂದು ಬಸ್ ನಿಲ್ಲಿಸದ ಕಾರಣ ಕೋಪಗೊಂಡ ಮಹಿಳೆ ಹೊಸಪೇಟೆಗೆ ಹೊರಟಿದ್ದ ಬಸ್​ಗೆ ಕಲ್ಲೆಸೆದಿದ್ದಾರೆ. ಹೀಗೆ ಕಲ್ಲು ಎಸೆದಿರೋದು ಇಲಕಲ್ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎನ್ನುವ ಮಹಿಳೆ.

ಕೊಪ್ಪಳದ ಹೊಸಲಿಂಗಾಪುರ ಬಳಿ ನಡೆದ ಘಟನೆ ನಡೆದಿದ್ದು, ಪ್ಯಾಸೆಂಜರ್ ಸಮೇತ ಡ್ರೈವರ್ ಕಂ ಕಂಡಕ್ಟರ್ ಮುತ್ತಪ್ಪ ಸೀದ ಪೊಲೀಸ್ ಠಾಣೆಗೆ ಬಸ್ ತಂದಿದ್ದಾರೆ. ಲಕ್ಷ್ಮೀ ಹುಲಿಗಿ ದರ್ಶನ ಪಡೆದು ಲಿಂಗಾಪುರ ಬಳಿ ಬಸ್​ಗಾಗಿ ಕಾದು ಕುಳಿತಿದ್ದರು. ಆಕೆ ಜೊತೆ ಇನ್ನೋರ್ವ ಮಹಿಳೆ ಇಬ್ಬರು ಹೆಣ್ಮಕ್ಕಳು ಇದ್ರು. ಸುಮಾರು ನಾಲ್ಕೈದು ತಾಸು ಕಳೆದರು ತನ್ನ ಊರಿಗೆ ತೆರಳಲು ಯಾವೊಂದು ಬಸ್ ನಿಲ್ಲಿಸಿಲ್ಲ. ಈ ಕಾರಣ ಕೋಪಗೊಂಡ ಲಕ್ಷ್ಮಿ KA-35-F-252 ಕೊಪ್ಪಳ ಬಸ್ ಗ್ಲಾಸ್​ಗೆ ಕಲ್ಲಿ ಬೀಸಿದ್ದಾಳೆ. ಪರಿಣಾಮ ಗ್ಲಾಸ್​ಗೆ ಡ್ಯಾಮೇಜ್ ಆಗಿದೆ. ಹೀಗೆ ಡ್ಯಾಮೇಜ್ ಆದ ಹಿನ್ನೆಲೆ 5 ಸಾವಿರ ರೂಪಾಯಿ ದಂಡ ಕಟ್ಟುವಂತೆ ಬಸ್ ಡಿಪೋ ಮ್ಯಾನೇಜರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬಳಿಕ ಕಲ್ಲೆಸೆದ ಮಹಿಳೆಯು ಕ್ಷಮೆ ಕೇಳಿ 5 ಸಾವಿರ ರೂಪಾಯಿ ದಂಡ ಕಟ್ಟಿದ ಮೇಲೆ ಅಲ್ಲಿಂದ ಹೊರಟಿದ್ದಾರೆ.

ಹುಲಿಗಿ ಕ್ರಾಸ್​ನಲ್ಲಿ ನಿಂತು ನಾಲ್ಕೈದು ತಾಸು ಆಗಿತ್ತು. ನಮ್ಮೂರಿಗೆ ಹೋಗಲು ಒಂದು ಬಸ್​ ಕೂಡ ನಿಲ್ಲಿಸುತ್ತಿಲ್ಲ. ಇದರಿಂದ ತಲೆಕೆಟ್ಟು ಬಸ್​ಗೆ ಕಲ್ಲು ಎಸೆದೆ. ಈಗ ಡ್ರೈವರ್​ ಅಣ್ಣನ ಬಳಿ 5 ಸಾವಿರ ದಂಡ ಕಟ್ಟಿದ್ದೀನಿ.

ಲಕ್ಷ್ಮಿ, ದಂಡ ಕಟ್ಟಿದ ಮಹಿಳೆ

ಇನ್ನು ಕಂಡಕ್ಟರ್​ ಪ್ರಯಾಣಿಕರ ಮೇಲೆ, ಪ್ರಯಾಣಿಕರು ಕಂಡಕ್ಟರ್​ ಮೇಲೆ ಹಲ್ಲೆ ನಡೆಸಿದ ಘಟನೆಗಳೂ ವರದಿಯಾಗ್ತಿವೆ. ಈ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಪ್ರಯಾಣಿಕರು ತಪ್ಪು ಕಲ್ಪನೆಯಿಂದ ಹಲ್ಲೆ ನಡೆಸಿರಬಹುದು ಎಂದಿದ್ದಾರೆ. ನಮ್ಮ ಸಿಬ್ಬಂದಿ ಸಹ ಸಾರ್ವಜನಿಕರ ಜೊತೆ ಸೌಜನ್ಯಯುತವಾಗಿ ವರ್ತಿಸಬೇಕು. ಸಾರ್ವಜನಿಕರು ಸಹ ಸಹಕಾರ ಕೊಡಬೇಕು ಅಂತಾ ಸೂಚನೆ ನೀಡಿದ್ರು.

1 ಲಕ್ಷದ 56 ಸಾವಿರ ಟ್ರಿಪ್​ಗಳು ಇರುತ್ತವೆ. ಇದರಲ್ಲಿ ಯಾವುದಾದ್ರೂ ಒಂದು ಕಡೆ ಹಲ್ಲೆ ಆಗಿರಬಹುದು. ನಮ್ಮ ಸಿಬ್ಬಂದಿ ಕೂಡ ಜನರ ಜೊತೆ ಯಾವುದೋ ವೇಳೆ ಅನುಚಿತವಾಗಿ ವರ್ತಿಸಿರುತ್ತ್ತಾರೆ. ಜನರು ಕೂಡ ನಮ್ಮ ಸಿಬ್ಬಂದಿ ಮೇಲೆ ಮಾಡಿರಬಹುದು. ಈ ರೀತಿ ಸಣ್ಣಪುಟ್ಟ ಆಗುತ್ತಿರುತ್ತವೆ. ಇದನ್ನು ಅರ್ಥ ಮಾಡಿಕೊಂಡು ಜನರು, ಸಿಬ್ಬಂದಿ ವರ್ತನೆ ಮಾಡಬೇಕು.

ರಾಮಲಿಂಗಾರೆಡ್ಡಿ, ಸಚಿವ

ಎಂಟೇ ದಿನದಲ್ಲಿ 51 ಲಕ್ಷ ಜನರಿಂದ ಅರ್ಜಿ ಸಲ್ಲಿಕೆ

ಅತ್ತ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹ ಜ್ಯೋತಿ ಎಲ್ಲೆಡೆ ಉತ್ತಮ ಸ್ಪಂದನೆ ಸಿಗುತ್ತಿದೆ. ಆರಂಭದ ದಿನ ಸರ್ವರ್​ ಸಮಸ್ಯೆಯಾಗಿದ್ದರೂ ಅದಕ್ಕೆ ನಾಜೂಕಾಗಿ ಇಂಧನ ಇಲಾಖೆ ಮುಕ್ತಿ ಹಾಡಿತ್ತು. ಇನ್ನು ಅರ್ಜಿ ಸಲ್ಲಿಕೆ ಶುರುವಾಗಿ ಎಂಟೇ ದಿನಕ್ಕೆ ಒಟ್ಟು ‍51 ಲಕ್ಷದ 17 ಸಾವಿರದ 693 ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಬೆಂಗಳೂರು ಒನ್, ಗ್ರಾಮ ಒನ್, ಮೊಬೈಲ್ ಹಾಗೂ ಲ್ಯಾಪ್ ಟಾಪ್​​ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನೋಂದಣಿಗೆ ಯಾವುದೇ ಗಡುವು ನೀಡದ ಸರ್ಕಾರ ಸೇವಾ ಸಿಂಧು ಪೋರ್ಟಲ್​ನಲ್ಲಿ ಅರ್ಜಿ ಸಲ್ಲಕೆಗೆ ಅವಕಾಶ ಕಲ್ಪಸಿದೆ.

ಜಾರಿಯಾಗಿರೋ ಗ್ಯಾರಂಟಿ ಯೋಜನೆ ಸಾಕಷ್ಟು ಸಮಸ್ಯೆ ತಂದಿಟ್ಟಿದೆ. ಜಾರಿಯಾಗಬೇಕಿರೋ ಸವಾಲನ್ನ ಸೃಷ್ಟಿಸಿವೆ. ಇದು ಬಿಜೆಪಿಗೆ ಅಸ್ತ್ರವಾಗಿದೆ. ಇದು ಸರ್ಕಾರಕ್ಕೆ ಎದುರಾಗಿರೋ ಅಸಲಿ ಸವಾಲು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರೀ ಬಸ್​ನಲ್ಲಿ ನಿತ್ಯ ಗಲಾಟೆ.. ಬಸ್​ಗೆ ಕಲ್ಲು ಎಸೆತ -ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ

https://newsfirstlive.com/wp-content/uploads/2023/06/RAMALINGAREDDY.jpg

Load More