newsfirstkannada.com

ಜಿಲ್ಲಾ ಉಸ್ತುವಾರಿಯಾದ್ರೂ ರಾಮನಗರದತ್ತ ಸುಳಿಯದ ರಾಮಲಿಂಗಾ ರೆಡ್ಡಿ.. ಸಾರಿಗೆ ಸಚಿವರ ನಡೆಗೆ ಬೇಸರ

Share :

20-06-2023

    ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿದ್ದಂತೆ ಜಿಲ್ಲೆಯ ಅಭಿವೃದ್ಧಿ ನಿರೀಕ್ಷೆಯಲ್ಲಿದ್ದ ಜನ

    ಜಿಲ್ಲಾ ಉಸ್ತುವಾರಿಯಾಗಿ 10 ದಿನ ಕಳೆದರೂ ಜಿಲ್ಲೆಗೆ ಭೇಟಿ ಕೊಟ್ಟಿಲ್ಲ..!

    ಡಿಸಿಎಂ ಡಿ.ಕೆ ಶಿವಕುಮಾರ್​, ರಾಮಲಿಂಗಾರೆಡ್ಡಿ ನಡೆಗೆ ಸ್ಥಳೀಯರು ಬೇಸರ

ರಾಮನಗರ: ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡು 10 ದಿನಗಳು ಕಳೆದರೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ರಾಮನಗರದತ್ತ ಸುಳಿದಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಕೇವಲ ನಾಮಕಾವಸ್ತೆಗೆ ಮಾತ್ರ ರಾಮಲಿಂಗಾರೆಡ್ಡಿಯವರು ಜಿಲ್ಲಾ ಉಸ್ತುವಾರಿ ಸ್ಥಾನ ವಹಿಸಿಕೊಂಡರೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

DCM ಡಿ.ಕೆ ಶಿವಕುಮಾರ್​ ತವರು ಜಿಲ್ಲೆಯಾದ ರಾಮನಗರಕ್ಕೆ ರಾಮಲಿಂಗಾರೆಡ್ಡಿ ಬರುವುದನ್ನು ಜನರು ಕಾಯುತ್ತಿದ್ದಾರೆ. ಸರ್ಕಾರ ರಚನೆಯಾಗಿ ಶಾಸಕರಿಗೆ ಮಂತ್ರಿಗಿರಿ ಕೊಟ್ಟು, ಜಿಲ್ಲಾ ಉಸ್ತುವಾರಿ ಸ್ಥಾನ ಕೊಟ್ಟಿದ್ದರು ಇಲ್ಲಿವರೆಗೆ ಡಿ.ಕೆ ಶಿವಕುಮಾರ್​ ಆಗಲಿ, ರಾಮಲಿಂಗಾರೆಡ್ಡಿ ಅವರಾಗಲಿ ಜಿಲ್ಲೆಯ ಕಡೆ ತಲೆ ಹಾಕಿಲ್ಲ. ಹೀಗಾಗಿ ಒಮ್ಮೆಯಾದರೂ ನಿಮ್ಮ ದರ್ಶನ ಕೊಡಿ ಎಂದು ಜನರು ಪರಿ ಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಜಿಲ್ಲೆಯ ಅಭಿವೃದ್ಧಿ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ ಪ್ರಮುಖ ಸಚಿವರೇ ಜಿಲ್ಲೆಯ ಕಡೆ ಸುಳಿಯದಿರುವುದು ಕಂಡು ಸಮಸ್ಯೆ ಯಾರ ಬಳಿ ಹೇಳಿಕೊಳ್ಳುವುದು ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ಸ್ಥಳೀಯ ನಿವಾಸಿಗಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಿಲ್ಲಾ ಉಸ್ತುವಾರಿಯಾದ್ರೂ ರಾಮನಗರದತ್ತ ಸುಳಿಯದ ರಾಮಲಿಂಗಾ ರೆಡ್ಡಿ.. ಸಾರಿಗೆ ಸಚಿವರ ನಡೆಗೆ ಬೇಸರ

https://newsfirstlive.com/wp-content/uploads/2023/06/RAMALINGA_REDDY.jpg

Load More