ಪಂಜಾಬ್ ತಂಡದ ಆಲ್ರೌಂಡರ್ಗೆ ಹ್ಯಾಟ್ರಿಕ್ ಸಿಕ್ಸರ್
ಎಸ್ಆರ್ಹೆಚ್ ಪ್ಲೇಯರ್ನಿಂದ ಭರ್ಜರಿ ಬ್ಯಾಟಿಂಗ್
ಸ್ಯಾಮ್ಗೆ ಹ್ಯಾಟ್ರಿಕ್ ಸಿಕ್ಸರ್ ಚಚ್ಚಿದ ಟ್ರಾವಿಡ್ ಹೆಡ್
ಇಂಗ್ಲೆಂಡ್ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಟೀಮ್, ಓಪನರ್ ಡ್ರಾವಿಸ್ ಹೆಡ್ ಅವರ ಭರ್ಜರಿ ಹೊಡಿ ಬಡಿ ಆಟದಿಂದ ಮೊದಲ ಟಿ20 ಪಂದ್ಯದಲ್ಲಿ ಗೆದ್ದು ಬೀಗಿದೆ. ಈ ಮೂಲಕ ಟೂರ್ನಿಯಲ್ಲಿ ಆಸಿಸ್ ಶುಭಾರಂಭ ಮಾಡಿದೆ.
ಟಾಸ್ ಗೆದ್ದುಕೊಂಡ ಇಂಗ್ಲೆಂಡ್ ಟೀಮ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ಆಸಿಸ್ ಅನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಇದು ಇಂಗ್ಲೆಂಡ್ ನಾಯಕನ ದೊಡ್ಡ ತಪ್ಪು ಎಂದು ಪಂದ್ಯ ಆರಂಭದ ಬಳಿಕ ಗೊತ್ತಾಯಿತು. ಏಕೆಂದರೆ ಓಪನರ್ ಆಗಿ ಬ್ಯಾಟ್ ಬೀಸಲು ಬಂದ ಮ್ಯಾಥ್ಯೂ ಶಾರ್ಟ್ ಹಾಗೂ ಟ್ರಾವಿಸ್ ಹೆಡ್ ಆಂಗ್ಲ ಬೌಲರ್ಗಳನ್ನ ಮನ ಬಂದಂತೆ ಚಚ್ಚಿದರು. ಶಾರ್ಟ್ ಕೇವಲ 26 ಎಸೆತಗಳಲ್ಲಿ 2 ಸಿಕ್ಸರ್, 4 ಫೋರ್ ಸಮೇತ 41 ರನ್ ಗಳಿಸಿದ್ರೆ ಇನ್ನೊಂದಡೆ ಹೊಡಿ ಬಡಿಯಾಟ ಮುಂದುವರೆಸಿದ್ದ ಹೆಡ್ ಕೇವಲ 23 ಎಸೆತಗಳಲ್ಲಿ 8 ಬೌಂಡರಿ, 4 ಆಕಾಶದೆತ್ತರ ಸಿಕ್ಸರ್ ಸಮೇತ 59 ರನ್ಗಳನ್ನು ಗಳಿಸಿ ಔಟ್ ಆದರು.
ಇದನ್ನೂ ಓದಿ: ಕಿಂಗ್ ಕೊಹ್ಲಿ ಸೆಂಚುರಿ ಸಿಡಿಸಿ ಎಷ್ಟು ತಿಂಗಳಾಯಿತು.. ಶತಕ ಸಿಡಿಸುವಲ್ಲಿ ವಿರಾಟ್ ಫೇಲ್; ಯಾಕೆ?
ಆದರೆ ಇಂಗ್ಲೆಂಡ್ನ ಸ್ಯಾಮ್ ಕರನ್ ಅವರ ಇನ್ನಿಂಗ್ನ 5ನೇ ಓವರ್ನಲ್ಲಿ ಟ್ರಾವಿಸ್ ಹೆಡ್ ರೌದ್ರಾವತಾರ ತಾಳಿದರು. ಏಕೆಂದರೆ ಒಂದೇ ಓವರ್ನಲ್ಲಿ 4, 4, 6, 6, 6, 4 ಬಾರಿಸಿದರು. ಇದರಲ್ಲಿ ಹ್ಯಾಟ್ರಿಕ್ ಸಿಕ್ಸರ್ ಕೂಡ ಇತ್ತು. ಇದು ಸ್ಯಾಮ್ ಕರನ್ಗೆ ಭಾರೀ ಮುಖಭಂಗ ಎನಿಸಿತು. ಇನ್ನು ಈ ಪಂದ್ಯದಲ್ಲಿ ಆಸಿಸ್ 179 ರನ್ಗಳ ಟಾರ್ಗೆಟ್ ನೀಡಿತ್ತು. ಆದರೆ ಇಂಗ್ಲೆಂಡ್ ಕೇವಲ 151 ರನ್ಗೆ ಆಲೌಟ್ ಆಗಿ ಸೋಲೋಪ್ಪಿಕೊಂಡಿತು.
Travis Head smashed 30 runs in an over against Sam Curran. 🤯
– Head, the beast man! pic.twitter.com/KpNVOCySJ0
— Mufaddal Vohra (@mufaddal_vohra) September 11, 2024
ಟ್ರಾವಿಸ್ ಹೆಡ್ 2024ರ ಐಪಿಎಲ್ನಲ್ಲಿ ಹೈದರಾಬಾದ್ ತಂಡದಲ್ಲಿದ್ರೆ, ಸ್ಯಾಮ್ ಕರನ್ ಪಂಜಾಬ್ ಟೀಮ್ನಲ್ಲಿದ್ದರು. ಐಪಿಎಲ್ನಿಂದಲೂ ಹೆಡ್ ಬ್ಯಾಟಿಂಗ್ ಭರ್ಜರಿಯಾಗಿಯೇ ಮುಂದುವರೆದಿದ್ದು ಇದು ಎಸ್ಆರ್ಹೆಚ್ ತಂಡಕ್ಕೆ 2025ರಲ್ಲಿ ಮತ್ತೊಮ್ಮೆ ವರದಾನವಾಗಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ