newsfirstkannada.com

Video: ಬಸ್​- ಲಾರಿ ಮಧ್ಯೆ ಭೀಕರ ಅಪಘಾತ; 4 ಸಾವು, 10ಕ್ಕೂ ಹೆಚ್ಚು ಮಂದಿ ಗಂಭೀರ, ಚಾಲಕ ಪರಾರಿ

Share :

12-08-2023

  ಭೀಕರ ಟ್ರಕ್​ ಹಾಗೂ ಬಸ್ ನಡುವೆ​ ಆಕ್ಸಿಡೆಂಟ್​​​

  ಅಪಘಾತದ ಬಳಿಕ ಲಾರಿ ಬಿಟ್ಟು ಕಾಲ್ಕಿತ್ತ ಚಾಲಕ

  ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉತ್ತರಪ್ರದೇಶ: ಇಲ್ಲಿನ ಬಲಂದ್​ಶಹರ್​ನ​​ ಅಡೋಲಿ ಮೋಡ್​ ಗ್ರಾಮದಲ್ಲಿ ಭೀಕರ ಟ್ರಕ್​ ಹಾಗೂ ಬಸ್​ ಅಪಘಾತ ಸಂಭವಿಸಿದೆ. ರಸ್ತೆಯಲಿ ಬರುತ್ತಿದ್ದ ಬಸ್​ಗೆ ರಾಂಗ್​ರೂಟ್​ನಲ್ಲಿ ಬಂದ ಟ್ರಕ್​ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್​​ನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.

ಬಸ್​ನಲ್ಲಿ 38ಕ್ಕೂ ಹೆಚ್ಚು ಪ್ರಯಾಣಿಕರಿದ್ದು, 10 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಬಸ್​ ಪಕ್ಕ ಬಂದ ಬೈಕ್​ನಲ್ಲಿದ್ದ ಇಬ್ಬರು ಜಸ್ಟ್​ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ.

ಅಪಘಾತ ಬಳಿಕ ಟ್ರಕ್​ ಚಾಲಕ ಪರಾರಿಯಾಗಿದ್ದು, ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಅಪಘಾತದ ದೃಶ್ಯವನ್ನು ಪ್ರಶಾಂತ್​ ತ್ರಿಪಾಠಿ ಎಂಬ ಟ್ವಿಟ್ಟರ್​ ಬಳಕೆದಾರ ಹಂಚಿಕೊಂಡಿದ್ದು, ವೈರಲ್​ ಆಗುತ್ತಿದೆ. ಭಯಾನಕ ದೃಶ್ಯ ಕಂಡ ಟ್ವಿಟ್ಟಿಗರ ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಬಸ್​- ಲಾರಿ ಮಧ್ಯೆ ಭೀಕರ ಅಪಘಾತ; 4 ಸಾವು, 10ಕ್ಕೂ ಹೆಚ್ಚು ಮಂದಿ ಗಂಭೀರ, ಚಾಲಕ ಪರಾರಿ

https://newsfirstlive.com/wp-content/uploads/2023/08/Accident-5.jpg

Load More