newsfirstkannada.com

×

ಖಲಿಸ್ತಾನಿ ಭಯೋತ್ಪಾದಕನ ಹತ್ಯೆ ಹಿಂದೆ ಭಾರತದ ಕೈವಾಡ ಇದೆ -ಭಾರತದ ಮೇಲೆ ಕೆನಡಾ ಗೂಬೆ

Share :

Published September 19, 2023 at 8:00am

Update September 19, 2023 at 8:03am

    ಮತ್ತಷ್ಟು ಹದಗೆಟ್ಟ ಭಾರತ ಕೆನಡಾ ಸಂಬಂಧ

    ಜೂನ್ 18 ರಂದು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ

    ಕೆನಡಾ ಬಗ್ಗೆ ಭಾರತದ ಅತೃಪ್ತಿ ಯಾಕೆ ಗೊತ್ತಾ..?

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿದೆ. ಇದರ ಪ್ರತಿಕಾರವಾಗಿ ಕೆನಡಾದ ಭಾರತೀಯ ರಾಜತಾಂತ್ರಿಕನನ್ನು ವಾಪಸ್ ಕಳುಹಿಸಿದೆ. ಈ ಮೂಲಕ ಭಾರತ ಮತ್ತು ಕೆನಡಾ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ.

ನಿನ್ನೆ ಕೆನಡಾ ಸಂಸತ್​ನಲ್ಲಿ ಮಾತನಾಡಿರುವ ಪ್ರಧಾನಿ ಜಸ್ಟಿನ್ ಟ್ರುಡೊ, ಜೂನ್‌ನಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ (British Columbia) ಕೆನಡಾ ನಾಗರಿಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಆಗಿದೆ. ನಮ್ಮ ನಾಗರಿಕರ ರಕ್ಷಣೆಗೆ ಕೆನಡಾ ಸರ್ಕಾರ ಬದ್ಧವಾಗಿದೆ. ನಿಜ್ಜರ್ ಕೊಲೆ ಪ್ರಕರಣದಲ್ಲಿ ಭಾರತದ ಕೈವಾಡ ಇದೆ. ಕೆನಡಾ ಸರ್ಕಾರ ಹರ್ದೀಪ್ ಸಿಂಗ್ ಹತ್ಯೆ ಕುರಿತು ಸಮಗ್ರ ತನಿಖೆ ನಡೆಸಲಿದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆನ್ಸಿಗಳ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಮ್ಮ ತನಿಖಾ ಸಂಸ್ಥೆಗಳು ಈಗಾಗಲೇ ತನಿಖೆಯನ್ನು ಆರಂಭಿಸಿವೆ ಎಂದು ಕೆನಡಾ ಪ್ರಧಾನಿ ಹೇಳಿದ್ದರು.

ಯಾರು ಹರ್ದೀಪ್ ಸಿಂಗ್ ನಿಜ್ಜರ್..?

ಹರ್ದೀಪ್ ಸಿಂಗ್ ನಿಜ್ಜರ್​​ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಭಾರತ ಘೋಷಣೆ ಮಾಡಿತ್ತು. ನಿಜ್ಜರ್ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಿದ ಆರೋಪವನ್ನು ಹೊತ್ತಿದ್ದ. ಬ್ರಿಟಿಷ್ ಕೊಲಂಬಿಯಾದ ಸರ್ರೆ ( Surrey)ಯ ಗುರು ನಾನಕ್ ಸಿಖ್ ಗುರುದ್ವಾರದ ಬಳಿ ಜೂನ್ 18 ರಂದು ಹತ್ಯೆಯಾಗಿದ್ದ. ಮುಸುಕು ಧರಿಸಿ ಬಂದಿದ್ದ ಇಬ್ಬರು ಪರಿಚಿತರು ಗುಂಡಿಟ್ಟು ಹತ್ಯೆಗೈದು ಪರಾರಿಯಾಗಿದ್ದರು. ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ನಿರಂತರವಾಗಿ ಹೆಚ್ಚುತ್ತಿದೆ. ಖಲಿಸ್ತಾನಿಗಳಿಗೆ ಆಶ್ರಯ ನೀಡಿದ ಕೆನಡಾದ ಬಗ್ಗೆ ಭಾರತ ಅತೃಪ್ತಿ ಹೊಂದಿದೆ.

ಕೆನಡಾ ವಿರುದ್ಧ ಭಾರತ ಆರೋಪ

ಉತ್ತರ ಭಾರತದಲ್ಲಿ ಪ್ರತ್ಯೇಕ ಸಿಖ್ ರಾಷ್ಟ್ರಕ್ಕಾಗಿ ಖಲಿಸ್ತಾನಿಗಳ ಚಟುವಟಿಕೆಗಳು, ಅಕ್ರಮಗಳು ಕೆನಡಾಗೆ ಕಾಣಿಸುತ್ತಿಲ್ಲ. ಈ ವಿಚಾರದಲ್ಲಿ ಕೆನಡಾ ಕಣ್ಮುಚ್ಚಿ ಕೂತಿದೆ. ಇದೀಗ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಕೆನಡಾ ಆರೋಪಿಸಿದೆ. ಭಾರತದ ವಿರುದ್ಧದ ಕೆನಡಾದ ಆರೋಪಗಳು ಪ್ರಪಂಚದಾದ್ಯಂತ ಪರಿಣಾಮ ಬೀರುತ್ತಿದೆ ಎಂದಿದೆ. ಮೊನ್ನೆಯಷ್ಟೇ ಭಾರತ-ಕೆನಡಾ ವ್ಯಾಪಾರ ಮಾತುಕತೆ ಸ್ಥಗಿತವಾಗಿತ್ತು. ಈಗ ಭಾರತದ ಏಜೆನ್ಸಿಗಳ ವಿರುದ್ಧ ಹತ್ಯೆಯ ಆರೋಪ ಮಾಡಿದೆ. ಈ ಸಮಸ್ಯೆ ಪರಿಹರಿಸುವಲ್ಲಿ ಭಾರತ ಸರ್ಕಾರದಿಂದ ಸಹಕಾರವನ್ನು ಕೆನಡಾ ಪ್ರಧಾನಿ ಕೋರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖಲಿಸ್ತಾನಿ ಭಯೋತ್ಪಾದಕನ ಹತ್ಯೆ ಹಿಂದೆ ಭಾರತದ ಕೈವಾಡ ಇದೆ -ಭಾರತದ ಮೇಲೆ ಕೆನಡಾ ಗೂಬೆ

https://newsfirstlive.com/wp-content/uploads/2023/09/CANEDA.jpg

Load More