ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಕೆ ಒಪ್ಪಿಕೊಂಡ ಟಿಟಿಡಿ
ಶ್ರೀವಾರಿ ಪ್ರಸಾದದಲ್ಲಿ ಪ್ರಾಣಿಗಳಲ್ಲಿರುವ ಕೊಬ್ಬು ಕಲಬೆರಕೆ ಆಗಿದ್ದು ನಿಜ!
ಟೆಸ್ಟ್ ಮಾಡಿಸಿದಾಗ ತುಪ್ಪ ಸರಬರಾಜು ವೇಳೆ ಪ್ರಾಣಿ ಅಂಶ ಪತ್ತೆಯಾಗಿದೆ
ತಿರುಪತಿ ಲಡ್ಡು ಪ್ರಸಾದದ ವಿವಾದ ಸದ್ಯ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲರ ಬಾಯಲ್ಲೂ ಓಡಾಡ್ತಿದೆ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಲಡ್ಡು ಬಗ್ಗೆ ಕರ್ಣ ಕಠೋರವಾಗಿ ಮಾತನಾಡಿದ್ರೋ ಅದು ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಈ ಸುದ್ದಿ ಕೇಳಿ ಭಕ್ತರೆಲ್ಲ ಇದೇನಿದು ಶ್ರೀನಿವಾಸ ಅಂತ ಆತಂಕಗೊಂಡಿದ್ದಾರೆ. ಈ ಆತಂಕ, ಆಕ್ರೋಶದ ಬೆನ್ನಲ್ಲೇ ಭಕ್ತರಿಗೆ ಟಿಟಿಡಿಯೇ ಸ್ಪಷ್ಟನೆ ಕೊಟ್ಟಿದೆ.
ಇದನ್ನೂ ಓದಿ: ದನದ ಕೊಬ್ಬು, ಲಡ್ಡು ಒಂದೇ ಅಲ್ಲ.. ತಿಮ್ಮಪ್ಪನಿಗೆ ಆಗಿದ್ಯಂತೆ ಇನ್ನೂ 5 ಅಪಚಾರ? ಅಯ್ಯೋ ಗೋವಿಂದ!

20 ಶೇಕಡಾದಷ್ಟು ಕಲಬೆರಕೆ ತುಪ್ಪ ಇರುವುದು ವರದಿಯಲ್ಲಿ ದೃಢ
ಲಡ್ಡು ತಯಾರಿಕೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಟಿಟಿಡಿ ತಮ್ಮ ತಪ್ಪನ್ನು ಒಪ್ಪಿಕೊಂಡಿದೆ. ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಸಿದ್ದು ನಿಜ. ಸರ್ಕಾರಿ ಲ್ಯಾಬ್ಗಳಲ್ಲಿ ನಾವು ತುಪ್ಪದ ಪರೀಕ್ಷೆ ಮಾಡಿದ್ದೆವು. ಲ್ಯಾಬ್ ಟೆಸ್ಟ್ ಬಳಿಕ ಕಲಬೆರಕೆ ಆಗಿದ್ದು ತಿಳಿದು ಬಂದಿದೆ.
2019ರವರೆಗೆ ನಂದಿನಿ 400 ರೂಪಾಯಿಗೆ ತುಪ್ಪ ಸರಬರಾಜು ಮಾಡಿದೆ. ಅದಕ್ಕಿಂತ ಕಡಿಮೆ ಬೆಲೆಗೆ ಕೇಳಿದ್ದಕ್ಕೆ ಆಗಲ್ಲವೆಂದಿತ್ತು. ಬಳಿಕ ಬೇರೆ ಕಂಪನಿಗಳು ಕಡಿಮೆ ಬೆಲೆಗೆ ತುಪ್ಪ ಸರಬರಾಜು ಮಾಡಿದ್ದವು. ಆದ್ರೆ ಗುಣಮಟ್ಟ ಬಗ್ಗೆ ವಿವಾದವೆದ್ದು ಟೆಸ್ಟ್ ಮಾಡಿಸಿದಾಗ ತುಪ್ಪ ಸರಬರಾಜು ವೇಳೆ ಪ್ರಾಣಿ ಅಂಶ ಪತ್ತೆಯಾಗಿದೆ. 20 ಶೇಕಡಾದಷ್ಟು ಕಲಬೆರಕೆ ತುಪ್ಪ ಇರುವುದು ವರದಿಯಲ್ಲಿ ದೃಢವಾಗಿದೆ. ತುಪ್ಪ ಪೂರೈಸಿದ AR ಡೇರಿ ವಿರುದ್ಧ ಕಾನೂನು ಹೋರಾಟ ಮಾಡ್ತೀವಿ ಅಂತ ಟಿಟಿಡಿ ಇ.ಒ ಶ್ಯಾಮಲಾ ರಾವ್ ಹೇಳಿದ್ದಾರೆ.
ಬಂದ ಲಡ್ಡು ವರದಿಗಳು ಶಾಕಿಂಗ್ ಆಗಿದ್ದವು. 2 ಅಂಶಗಳೇನಂದ್ರೆ.. ಒಂದು.. ತರಕಾರಿಗಳಲ್ಲಿರುವ ಕೊಬ್ಬಿನಾಂಶದ ಕಲಬೆರಕೆ ಹಾಗೂ ಪ್ರಾಣಿಗಳಲ್ಲಿರುವ ಕೊಬ್ಬು ಕಲಬೆರಕೆಯಾಗಿತ್ತು.
– ಶ್ಯಾಮಲಾ ರಾವ್, ಟಿಟಿಡಿ ಇ.ಒ
ತಿರುಪತಿ ಲಡ್ಡುನಲ್ಲಿ ಪ್ರಾಣಿ ಕೊಬ್ಬು ಬಳಕೆ ಅನ್ನೋದು ಕಟ್ಟುಕಥೆ
ಎಂದಿಗೂ ಪ್ರಾಣಿಯ ಕೊಬ್ಬು ಬಳಸಿಲ್ಲವೆಂದು ಜಗನ್ ಸ್ಪಷ್ಟನೆ
ಆಂಧ್ರ ಮಾಜಿ ಸಿಎಂ ಜಗನ್, ಹಾಲಿ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಕಾನೂನು ಸಮರವನ್ನೇ ಸಾರಿದ್ದಾರೆ. ತಿರುಪತಿ ಲಡ್ಡು ವಿವಾದ ತೀವ್ರಗೊಂಡ ಬೆನ್ನಲ್ಲೇ ಜಗನ್ ಕಾನೂನು ಹೋರಾಟಕ್ಕಿಳಿದಿದ್ದಾರೆ. ಚಂದ್ರಬಾಬು ನಾಯ್ಡು ಕೇವಲ ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ. ತನಿಖೆ ಮೇಲ್ವಿಚಾರಣೆ ಮಾಡುವಂತೆ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಮಾತ್ರವಲ್ಲದೆ ಇಂದು ಸುದ್ದಿಗೋಷ್ಠಿ ನಡೆಸಿ, ನಾಯ್ಡು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವೆಂಕಟೇಶ್ವರ ಸ್ವಾಮಿ ಭಕ್ತರು ಜಗತ್ತಿನಾದ್ಯಂಥ ಇದ್ದಾರೆ. ದೇವರ ಹೆಸರು, ಜನರ ನಂಬಿಕೆಯಲ್ಲೂ ಸಿಎಂ ನಾಯ್ಡು ರಾಜಕೀಯ ಮಾಡುತ್ತಿದ್ದಾರೆ. ಸಿಎಂ ನಾಯ್ಡು ಜನರ ಗಮನವನ್ನು ಬೇರೆೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅನಗತ್ಯ ಲಡ್ಡು ವಿವಾದ ಸೃಷ್ಟಿಸಿದ್ದಾರೆ. ಲಡ್ಡು ಬಗೆಗಿನ ಎಲ್ಲ ಆರೋಪ ಸುಳ್ಳು. ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಉಲ್ಲಂಘನೆ ಆಗಿಲ್ಲ ಎಂದಿದ್ದಾರೆ.
ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ನಂದಿನಿ ತುಪ್ಪ ಬಳಸಲು ಆದೇಶ
ಟಿಟಿಡಿ ಲಡ್ಡು ವಿವಾದದ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ದೇವಾಲಯಗಳಲ್ಲಿ ತಯಾರಿಸುವ ಪ್ರಸಾದ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಆದೇಶಿಸಿದೆ. ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಸ್ಥಾನಗಳಿಗೂ ಸಚಿವ ರಾಮಲಿಂಗಾ ರೆಡ್ಡಿ ಈ ಸೂಚನೆ ಹೊರಡಿಸಿದ್ದಾರೆ.
ಭಾರೀ ವಿವಾದದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಆಂಧ್ರದಿಂದ ವರದಿ ಕೇಳಿದ್ದಾರೆ. ಒಟ್ಟಾರೆ ವೈಕುಂಠಾಧೀಶನ ಪ್ರಸಾದ ಲಡ್ಡುನಲ್ಲಿ ಪ್ರಾಣಿಯ ಕೊಬ್ಬು ಬಳಸಿದ್ದು ಭಾರೀ ವಿವಾದ ಮಾತ್ರವಲ್ಲದೇ ಆಕ್ರೋಶಕ್ಕೂ ಕಾರಣವಾಗಿದೆ. ಲಡ್ಡು ಸೇವಿಸಿದವರಿಗೆ ಸದ್ಯ ಕಸಿವಿಸಿ ಶುರುವಾಗಿದ್ದು ಪ್ರಾಯಶ್ಚಿತ, ಪರಿಹಾರದ ಚಿಂತೆಯಲ್ಲಿ ಭಕ್ತರು ಮುಳುಗಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಒಂದು ಮಂಡಳಿ ರಚಿಸಬೇಕಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಬಹುಸಂಖ್ಯಾತರ ಭಾವನೆಗಳಿಗೂ ಬೆಲೆ ಕೊಡಬೇಕಾದ ಕೆಲಸವನ್ನು ಆಯಾ ಸರ್ಕಾರಗಳು ಮಾಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ