newsfirstkannada.com

×

ಬಾಲಕಿಯನ್ನು ಹೊತ್ತೊಯ್ದ ಚಿರತೆ​.. ತಿರುಪತಿ ತಿಮ್ಮಪ್ಪನ ಈ ಮಾರ್ಗದಲ್ಲಿ ಮಕ್ಕಳ ಪ್ರವೇಶ ನಿರ್ಬಂಧ

Share :

Published August 13, 2023 at 9:06pm

Update August 13, 2023 at 10:07pm

    ಪಾದಚಾರಿ ಮಾರ್ಗದಲ್ಲಿ ನಾಪತ್ತೆಯಾಗಿದ್ದ ಲಕ್ಷಿತಾ

    ಸಿಸಿಟಿವಿಯಲ್ಲಿ ಸೆರೆಯಾಗಿದೆ ಚಿರತೆ ಹೊತ್ತೊಯ್ದ ದೃಶ್ಯ

    ಮಕ್ಕಳ ಪ್ರವೇಶ ನಿಷೇಧ ಮಾಡಿದ ಟಿಟಿಡಿ ಮಂಡಳಿ

ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಆಲಿಪ್ಪಿರಿಯಿಂದ ಮೆಟ್ಟಿಲುಗಳನ್ನ ಹತ್ತುತ್ತಿದ್ದ ಲಕ್ಷಿತಾ (6) ಎನ್ನುವ ಮಗುವನ್ನು ಚಿರತೆಯೊಂದು ಹೊತ್ತೊಯ್ದ ಹಿನ್ನೆಲೆಯಲ್ಲಿ ಪಾದಾಚಾರಿ ಮಾರ್ಗದಲ್ಲಿ ಮಕ್ಕಳ ಪ್ರವೇಶವನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಿಷೇಧ ಮಾಡಿದೆ.

ತಿರುಮಲದ ಆಲಿಪ್ಪಿರಿಯಿಂದ ಪಾದಚಾರಿ ಮಾರ್ಗದಲ್ಲಿ ಬಾಲಕಿ ತನ್ನ ಪೋಷಕರೊಂದಿಗೆ ಬೆಟ್ಟ ಹತ್ತುತ್ತಿದ್ದಳು. ಈ ವೇಳೆ ಮಾರ್ಗ ಮಧ್ಯೆ ಕಾಣೆಯಾಗಿದ್ದ ಮಗಳನ್ನು ಸುತ್ತಮುತ್ತ ಹುಡುಕಾಡಿದ ಪೋಷಕರು ಕಣ್ಣೀರಿಡುತ್ತಲೇ ದೂರು ನೀಡಿದ್ದರು. ಈ ಸಂಬಂಧ ಸಿಸಿಟಿವಿಯನ್ನು ಪರಿಶೀಲಿಸಿದ ಪೊಲೀಸರು ಚಿರತೆಯೊಂದು ಮಗುವನ್ನು ಹೊತ್ತೊಯ್ದಿದೆ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ಆಲಿಪ್ಪಿರಿಯಿಂದ ಪಾದಚಾರಿ ಮಾರ್ಗದಲ್ಲಿ ಮಕ್ಕಳು ತೆರಳುವುದಕ್ಕೆ ಟಿಟಿಡಿ ಮಂಡಳಿಯು ನಿರ್ಬಂಧ ಹಾಕಿದೆ.

ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟು ಪಾದಚಾರಿ ಮಾರ್ಗದಲ್ಲಿ ಮಧ್ಯಾಹ್ನ 2 ಗಂಟೆಯ ನಂತರ 15 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ ಎಂದು ಟಿಟಿಡಿ ಹೇಳಿದೆ. 15 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಲಿಪಿರಿ ಮಾರ್ಗದಲ್ಲಿ ಬೆಳಗ್ಗೆ  5ರಿಂದ ರಾತ್ರಿ 10ರವರೆಗೆ ಹಾಗೂ ಶ್ರೀವಾರಿ ಮೆಟ್ಟು ಪ್ರದೇಶದಲ್ಲಿ ಬೆಳಗ್ಗೆ 6 ರಿಂದ ಸಂಜೆ 6ರವೆರೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಟಿಟಿಡಿ ತಿಳಿಸಿದೆ.

ತಿರುಮಲ ಬೆಟ್ಟವನ್ನು ನಡಿಗೆಯ ಮೂಲಕ ತೆರಳುವ ಭಕ್ತರ ಮತ್ತು ಮಕ್ಕಳ ಕೈಗೆ ಅಲ್ಲಿನ ಪೊಲೀಸ್​ ಸಿಬ್ಬಂದಿ  ಬ್ಯಾಂಡ್​ ಕಟ್ಟುತ್ತಾರೆ. ಮಕ್ಕಳು ಹೆತ್ತವರಿಂದ ನಾಪತ್ತೆಯಾದರೆ ಅವರನ್ನು ಸುಲಭವಾಗಿ ಹುಡುಕಲು ಇದು ಉಪಯುಕ್ತವಾಗಿದೆ. ಇದರೊಂದಿಗೆ ಮಕ್ಕಳ ಕೈಯಲ್ಲಿರುವ ಬ್ಯಾಂಡ್​​ನಲ್ಲಿ ಪೋಷಕರ ವಿವರಗಳನ್ನು ನಮೂದಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಕಿಯನ್ನು ಹೊತ್ತೊಯ್ದ ಚಿರತೆ​.. ತಿರುಪತಿ ತಿಮ್ಮಪ್ಪನ ಈ ಮಾರ್ಗದಲ್ಲಿ ಮಕ್ಕಳ ಪ್ರವೇಶ ನಿರ್ಬಂಧ

https://newsfirstlive.com/wp-content/uploads/2023/08/Tirupati-1-1.jpg

Load More