ಕಿಚ್ಚ ಸುದೀಪ್ ಮುಂದೇನೇ ಧೈರ್ಯವಾಗಿ ಮಾತಾಡಿದ ತುಕಾಲಿ ಸಂತೋಷ್
ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ ಬಿಗ್ಬಾಸ್ ಸ್ಪರ್ಧಿಗಳು
ಒಬ್ಬ ವ್ಯಕ್ತಿ ಕೆಟ್ಟವನು ಅಂತಾ ಪ್ಲಾನ್ ಮಾಡಿ ಬೇರೆಯವರ ಮುಂದೆ ಹೇಳ್ತಾರೆ!
ಬಿಗ್ಬಾಸ್ ಸೀಸನ್ 10ಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳಲ್ಲಿ ಈಗ 13 ಮಂದಿ ಉಳಿದುಕೊಂಡಿದ್ದಾರೆ. ಬಿಗ್ಬಾಸ್ ಅಸಲಿ ಆಟ ಶುರುವಾಗಿ ಈಗಾಗಲೇ ಎರಡು ತಿಂಗಳು ಹತ್ತತ್ರ ಬಂದಿದೆ. ಈ ರಿಯಾಲಿಟಿ ಶೋ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಒಂದಲ್ಲಾ ಒಂದು ವಿಚಾರಕ್ಕೆ ಬಿಗ್ಬಾಸ್ ಸ್ಪರ್ಧಿಗಳು ಸಖತ್ ಸುದ್ದಿಯಲ್ಲಿದ್ದಾರೆ. ಇದೀಗ ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರೋಮೋವೊಂದು ರಿಲೀಸ್ ಆಗಿದೆ. ರಿಲೀಸ್ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರು ಬಿಗ್ಬಾಸ್ ಮನೆಯಲ್ಲಿ ಯಾರು ರಿಯಲ್ ಹಾಗೂ ಫೇಕ್ ಎಂದು ಹೇಳಿ ಎನ್ನುತ್ತಾರೆ.
View this post on Instagram
ಹೀಗೆ ಬಿಗ್ಬಾಸ್ ಮನೆಯ ಎಲ್ಲ ಸದಸ್ಯರು ಒಬ್ಬರಾದ ಮೇಲೆ ಒಬ್ಬರು ಬಂದು ಯಾರು ರಿಯಲ್ ಹಾಗೂ ಯಾರು ಫೇಕ್ ಎಂದು ಹೇಳುತ್ತಾರೆ. ಆಗ ವಿನಯ್ ಗೌಡ, ಸ್ನೇಹಿತ್, ನಮ್ರತಾ ಫೇಕ್ ಪಟ್ಟವನ್ನು ತುಕಾಲಿ ಸಂತೋಷ್ ಅವರಿಗೆ ನೀಡುತ್ತಾರೆ. ಇದಕ್ಕೆ ಕೊಪಗೊಂಡ ತುಕಾಲಿ ಸಂತೋಷ್ ಅವರು, ಒಬ್ಬ ವ್ಯಕ್ತಿ ಕೆಟ್ಟವನು ಅಂತಾ ಪ್ಲಾನ್ ಮಾಡಿ ಬೇರೆ ಅವರ ಮುಂದೆ ಹೇಳುತ್ತಾರೆ. ನಾನು ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅದು ಎಲ್ಲರಿಗೂ ಗೊತ್ತಾಗುವಂತಹ ಸಮಯ ಬಂದೆ ಬರುತ್ತದೆ. ಆಗ ಅವರ ಎರಡು ಮುಖಗಳು ಹೇಗೆ ಇರುತ್ತೆ ಎಂದು ಜನರಿಗೆ ಗೊತ್ತಾಗುತ್ತೆ ಎಂದು ನೇರವಾಗಿ ಹೇಳಿದ್ದಾರೆ.
ಇನ್ನೂ ತುಕಾಲಿ ಸಂತೋಷ್ ಅವರು ಈ ಹೇಳಿಕೆ ನೀಡುತ್ತಿದ್ದಾಗ ವಿನಯ್ ಗೌಡ ನಕ್ಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್‌ನಲ್ಲಿ ಈ ಪ್ರಸಂಗ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ