ಎಲ್ಲಿಗೆ ಹೋದರೂ ಸಿರಿ, ಭಾಗ್ಯಶ್ರೀ ತುಕಾಲಿ ಜೊತೆಗೆ ಹೋಗಬೇಕು
ತುಕಾಲಿ ಸಂತೋಷ್ ಅವರಿಗೆ ಬಿಗ್ ಟಾಸ್ಕ್ ಕೊಟ್ಟಿದ್ದ ಕಿಚ್ಚ ಸುದೀಪ್
ಈ ಮೂವರು ನೋಡಿ ಬಿದ್ದು ಬಿದ್ದು ನಗುತ್ತಿದ್ದಾರೆ ಉಳಿದ ಸ್ಪರ್ಧಿಗಳು!
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಮನೆಯಲ್ಲಿ ಒಟ್ಟು 14 ಸ್ಪರ್ಧಿಗಳು ಇದ್ದಾರೆ. ನಿನ್ನೆ ಬಿಗ್‌ಬಾಸ್ ಮನೆಯ ಎಲ್ಲ ಸದಸ್ಯರು ಸೂಪರ್ ಸಂಡೇ ವಿಥ್ ಕಿಚ್ಚ ಸುದೀಪನ ಜೊತೆ ಎಪಿಸೋಡ್ಗೆ ಸಖತ್ ಆಗಿ ರೆಡಿಯಾಗಿದ್ದರು. ಅದೇ ರೀತಿ ಕಿಚ್ಚ ಸುದೀಪ್ ಕೂಡ ಖಡಕ್ ಆಗಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದರು. ಸೂಪರ್ ಸಂಡೇ ವಿಥ್ ಕಿಚ್ಚ ಸುದೀಪ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ತುಕಾಲಿ ಸಂತೋಷ್ ಅವರಿಗೆ ಟಾಸ್ಕ್ ಒಂದನ್ನು ಕೊಟ್ಟಿದ್ದರು.
ತುಕಾಲಿ ಸಂತೋಷ್ ಅವರು ಮನೆಯ ಎಲ್ಲ ಸದಸ್ಯರ ಜೊತೆ ಕುಳಿತುಕೊಂಡಾಗ ಅತೀ ಹೆಚ್ಚು ಸಿರಿ ಹಾಗೂ ಭಾಗ್ಯಶ್ರೀ ಅವರ ಬಗ್ಗೆ ಮಾತಾಡಿದ್ದರು. ಹೀಗಾಗಿ ಕಿಚ್ಚ ಸುದೀಪ್ ಅವರು ಸಂತೋಷ್ ಅವರಿಗೆ ಈ ರೀತಿ ಟಾಸ್ಕ್ ಅನ್ನು ನೀಡಿದ್ದಾರೆ. ಈ ಸಂಚಿಕೆ ಮುಗಿದ ಮೇಲೆ ಬಿಗ್‌ಬಾಸ್ ಮನೆ ಒಳಗಡೆ ಒಂದು ಚೈನ್ ಅನ್ನು ಕಳುಹಿಸಿ. ಆ ಚೈನ್ನಲ್ಲಿ ಸಿರಿ ಹಾಗೂ ಭಾಗ್ಯಶ್ರೀ ಜೊತೆಗೆ ತುಕಾಲಿ ಸಂತೋಷ್ ಅವರಿಗೆ ಕಟ್ಟಬೇಕು. ಆಗ ಇಡೀ ದಿನ ಸಿರಿ ಹಾಗೂ ಭಾಗ್ಯಶ್ರೀ ಜೊತೆಗೆ ತುಕಾಲಿ ಸಂತೋಷ್ ಅವರು ಒಟ್ಟಿಗೆ ಹೋಗಬೇಕು. ಒಟ್ಟಿಗೆ ಕುಳಿತುಕೊಳ್ಳಬೇಕು ಎಲ್ಲಿಗೆ ಹೋದರೂ ಒಟ್ಟಿಗೆ ಹೋಗಬೇಕು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಇದನ್ನು ಓದಿ: ವಿನಯ್ ವಿರುದ್ಧ ತಿರುಗಿ ಬಿದ್ದ ಡ್ರೋನ್.. ಸುದೀಪ್ ಮುಂದೆ ಸ್ಪರ್ಧಿಗಳ ಅಸಲಿ ಮುಖವಾಡ ಬಯಲು
ಅದೇ ರೀತಿ ಇಂದು ಬೆಳಗ್ಗೆ ಬಿಗ್‌ಬಾಸ್ ಮನೆಗೆ ಒಂದು ಹಗ್ಗವನ್ನು ಕಳುಹಿಸಲಾಗಿದೆ. ಸಿರಿ ಹಾಗೂ ಭಾಗ್ಯಶ್ರೀ ಜೊತೆಗೆ ತುಕಾಲಿ ಸಂತೋಷ್ಗೆ ಹಗ್ಗವನ್ನು ಸೊಂಟಕ್ಕೆ ಕಟ್ಟಿದ್ದಾರೆ. ಇನ್ನೂ ಎಲ್ಲಿಗೆ ಹೋದರು ಸಿರಿ, ಭಾಗ್ಯಶ್ರೀ, ಮತ್ತು ತುಕಾಲಿ ಸಂತೋಷ್ ಜೊತೆ ಜೊತೆಯಾಗಿ ಹೋಗಬೇಕು. ಸ್ನಾನಕ್ಕೆ ಹೋದರೂ ಕೂಡ ಒಬ್ಬರಾದ ಮೇಲೆ ಒಬ್ಬರು ಹೋಗಬೇಕು. ಸ್ನಾನ ಮುಗಿಸಿ ಬಂದ ಮೇಲೆ ಮತ್ತೆ ಆ ಮೂವರು ಓಡಾಡಬೇಕು. ಹೀಗೆ ಇಂದು ಬಿಗ್‌ಬಾಸ್ ಮನೆಯ ತುಂಬೆಲ್ಲ ಈ ಮೂವರು ಒಟ್ಟಿಗೆ ಓಡಾಡಿದ್ದಾರೆ. ಹೀಗೆ ಭಾಗ್ಯಶ್ರೀ ಅವರು ಸ್ನಾನಕ್ಕೆ ಹೋಗಿದ್ದಾಗ ತುಕಾಲಿ ಸಂತೋಷ್ ಅವರು ನಾನು ಎಷ್ಟು ಅದೃಷ್ಟವಂತ ಅದಕ್ಕೆ ನಿಮ್ಮ ಜೊತೆ ನನ್ನ ಕಟ್ಟಾಕಿದ್ದಾರೆ. ಹೀಗೆ ಇದ್ದರೆ ಎಷ್ಟು ಕಷ್ಟ ಆಗುತ್ತೆ ಅಲ್ವಾ. ನಿಜವಾಗಲೂ ಹೀಗೆ ಇರೋಕೆ ಆಗೋದಿಲ್ಲ ಎಂದು ಹೇಳಿಕೊಂಡಿದ್ದಾರೆ. ಇತ್ತ ಸಿರಿ, ಭಾಗ್ಯಶ್ರೀ, ಮತ್ತು ತುಕಾಲಿ ಸಂತೋಷ್ ಅವರನ್ನು ನೋಡಿದ ಉಳಿದ ಸ್ಪರ್ಧಿಗಳು ಬಿದ್ದು ಬಿದ್ದು ಟಾಂಗ್ ಕೊಡುತ್ತಾ ಕಾಲ ಕಳೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ