newsfirstkannada.com

×

Shrirasthu Shubhamasthu: ಮಾಧವನ ಮುಂದೆ ಗರ್ಭಿಣಿ ವಿಚಾರ ಹೇಳೇ ಬಿಟ್ಟ ತುಳಸಿ; ಮುಂದೇನು ಗತಿ?

Share :

Published September 22, 2024 at 12:54pm

Update September 22, 2024 at 12:57pm

    ಧಾರಾವಾಹಿಯಲ್ಲಿ ಸ್ಟೋರಿ ಆ ಚೇಂಜ್ ಮಾಡಿ ಅನ್ನುತ್ತಿರೋ ವೀಕ್ಷಕರು

    ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ ಶ್ರೀರಸ್ತು ಶುಭಮಸ್ತು

    ತುಳಸಿ-ಮಾಧವನ ಸ್ನೇಹ-ಪ್ರೀತಿ ತುಂಬಿದ ಪ್ರೋಮೋಗೆ ಭರ್ಜರಿ ರೆಸ್ಪಾನ್ಸ್

ದಿನದಿಂದ ದಿನಕ್ಕೆ ಶ್ರೀರಸ್ತು ಶುಭಮಸ್ತು ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಒಂದು ಕಡೆ ಸಮರ್ಥ್​​ಗೆ ಅಭಿ ಹಾಗೂ ಅವಿನಾಶ್ ಮನೆಯಲ್ಲಿ ತನ್ನ ಅಮ್ಮನನ್ನು ಬಿಡಲು ಇಷ್ಟವಿಲ್ಲ. ಮತ್ತೊಂದು ಕಡೆ ತುಳಸಿ ಮಾಧವ ಅವರ ಕುಟುಂಬಸ್ಥರನ್ನು ಬಿಟ್ಟು ಎಲ್ಲಿಗೂ ಬರಲು ಆಗುತ್ತಿಲ್ಲ. ಆದರೆ ಇದರ ಮಧ್ಯೆ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಒಂದು ರೋಚಕ ಟ್ವಿಸ್ಟ್ ಎದುರಾಗಿದೆ.

ಇದನ್ನೂ ಓದಿ: ಅಯ್ಯೋ ಇದೇನಾಯ್ತು.. ಶ್ರೀರಸ್ತು ಶುಭಮಸ್ತು ಸೀರಿಯಲ್​ ನೋಡೋದನ್ನೇ ಬಿಡ್ತೀವಿ ಅನ್ನುತ್ತಿರೋ ವೀಕ್ಷಕರು; ಕಾರಣವೇನು?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಶ್ರೀರಸ್ತು ಶುಭಮಸ್ತು ಸಹ ಒಂದು. ಈ ಸೀರಿಯಲ್ ಹಿರಿಯ ಕಲಾವಿದರ ಬಳಗವೇ ಇದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಸೀರಿಯಲ್​ ಎಂದರೇ ತಪ್ಪಾಗುವುದಿಲ್ಲ. ಸೀರಿಯಲ್​ ಶುರುವಾದ ದಿನದಿಂದ ಇಂದಿನವರೆಗೂ ವೀಕ್ಷಕರು ನೋಡಿಕೊಂಡು ಬಂದಿದ್ದಾರೆ. ಅದರಲ್ಲೂ ವಿಭಿನ್ನವಾದ ಲವ್​ ಸ್ಟೋರಿ ಹೇಳುತ್ತಿರುವ ಕಥೆಗೆ ವೀಕ್ಷಕರು ಫಿದಾ ಆಗಿದ್ದಾರೆ.

View this post on Instagram

A post shared by Zee Kannada (@zeekannada)

ಒಂದು ಕಡೆ ಅಪ್ಪ-ಮಗನ ನಡುವೆ ಮುನಿಸು ಸರಿದು ತಂದೆಯನ್ನು ಒಪ್ಪಿಕೊಂಡಿದ್ದಾನೆ ಅವಿನಾಶ್​. ಆದರೆ ಇದರ ಮಧ್ಯೆ ಕಳೆದ ಸಂಚಿಕೆಯಲ್ಲಿ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ​ ಯಾರು ಊಹಿಸಲಾಗದ ಟ್ವಿಸ್ಟ್​ ಪಡೆದುಕೊಂಡಿತ್ತು. ಆ ಟ್ವಿಸ್ಟ್​ಗೆ ವಿಕ್ಷಕರು ಫುಲ್ ಶಾಕ್​ ಆಗಿದ್ದರು. ಈ ಸೀರಿಯಲ್​ನಲ್ಲಿ ನಾವು ಇದನ್ನೂ ನೋಡಲು ಆಗೋದಿಲ್ಲ. ಕಥೆಯನ್ನು ಚೇಂಜ್​ ಮಾಡಿ, ಈ ಸೀರಿಯಲ್​ ಅನ್ನು ನಾವು ನೋಡೋದಿಲ್ಲ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದರು.

ಆದರೆ ತಾನು ಗರ್ಭಿಣಿಯಾದ ವಿಚಾರವನ್ನು ತುಳಸಿ, ಪತಿ ಮಾಧವನಿಗೆ ಹೇಳುವ ಸಮಯ ಬಂದಿದೆ. ಗರ್ಭಿಣಿಯಾದ ಬಗ್ಗೆ ಹೇಗೆ ಹೇಳಬೇಕು ಅಂತ ಪ್ಲಾನ್​ ಮಾಡಿ ಗೊಂಬೆಗಳನ್ನು ಇಡುವ ಮೂಲಕ ಈ ವಿಚಾರದ ಬಗ್ಗೆ ಮಾಧವರಿಗೆ ತಿಳಿಸಿದ್ದಾರೆ. ಇದೇ ವಿಚಾರ ಕೇಳಿದ ಮಾಧವ ಫುಲ್ ಖುಷ್​ ಆಗಿದ್ದಾರೆ. ಆದರೆ ತುಳಸಿ ಮಾತ್ರ ಆತಂಕಗೊಂಡಿದ್ದಾರೆ. ಈ ವಿಚಾರವನ್ನು ಮನೆಯವರ ಮುಂದೆ ಹೇಗೆ ಹೇಳಬೇಕು ಅಂತ ಗೊಂದಲದಲ್ಲಿದ್ದಾರೆ. ಸದ್ಯ ಮುಂದಿನ ಸಂಚಿಕೆಯಲ್ಲಿ ಮಾಧವನ ಕುಟುಂಬ ಹಾಗೂ ತುಳಸಿ ಕುಟುಂಬ ಈ ವಿಚಾರವನ್ನು ಸ್ವಾಗತಿಸುತ್ತಾರಾ ಕಾದು ನೋಡಬೇಕಿದೆ. ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಚಂದನವನದ ಚೆಲುವೆ ಸುಧಾರಾಣಿ ಅವರ ಪರ್ಫಾಮನ್ಸ್​ ಅದ್ಭುತವಾಗಿ ಮೂಡಿ ಬರುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shrirasthu Shubhamasthu: ಮಾಧವನ ಮುಂದೆ ಗರ್ಭಿಣಿ ವಿಚಾರ ಹೇಳೇ ಬಿಟ್ಟ ತುಳಸಿ; ಮುಂದೇನು ಗತಿ?

https://newsfirstlive.com/wp-content/uploads/2024/09/Shrirasthu-Shubhamasthu1.jpg

Load More