newsfirstkannada.com

ಬಾಲಕಿ ಮೇಲೆ ಚಿರತೆ ದಾಳಿ.. ಜಸ್ಟ್​ ಮಿಸ್​! ಕಾದಾಡಿ ಮಗಳ ಜೀವ ಉಳಿಸಿದ ಗ್ರೇಟ್ ಅಪ್ಪ!

Share :

09-11-2023

  ರಾಜ್ಯದ ಎರಡು ಜಿಲ್ಲೆಗಳಲ್ಲಿ ಬೆಚ್ಚಿಬೀಳಿಸುವ ಘಟನೆಗಳೆರಡು ನಡೆದಿವೆ

  ಧೈರ್ಯದಿಂದ ಮುನ್ನುಗ್ಗಿ ಮಗಳಿಗೆ ಪುನರ್​ ಜನ್ಮ ನೀಡಿದ ಮಹಾನ್ ಅಪ್ಪ

  ಉಡುಪಿಯಲ್ಲಿ ಚಿರತೆ ಉಪಟಳ ಜಾಸ್ತಿ, ಸಂಜೆ ಆಗುತ್ತಲೇ ಜನರಲ್ಲಿ ಭಯ

ಅದ್ಯಾಕೋ ಇತ್ತೀಚೆಗೆ ಚಿರತೆ ಕಾಟ ಜಾಸ್ತಿ ಆಗಿದೆ ಅನಿಸ್ತಿದೆ. ಬೆಂಗಳೂರಿನಲ್ಲಂತೂ ಕಳೆದ 15 ದಿನದಿಂದ ಚಿರತೆಯದ್ದೇ ಚಿಂತೆ ಆಗೋಗಿದೆ. ಇಷ್ಟು ದಿನ ಅಲ್ಲಲ್ಲಿ ಚಿರತೆ ಕಾಣಿಸ್ತು ಎನ್ನಲಾಗ್ತಿತ್ತು. ಆದ್ರೀಗ ಚಿರತೆಯೊಂದು ಮನೆ ಕಾಂಪೌಂಡ್​ಗೆ ನುಗ್ಗಿ ಮಗು ಮೇಲೆ ದಾಳಿ ಮಾಡಿದೆ. ಆ ಮಗುವನ್ನ ಹೊತ್ತೊಯ್ಯುವ ಪ್ರಯತ್ನ ಮಾಡಿದೆ. ಆದ್ರೆ ಸಾಹಸ ಅನ್ನೋಥರ ಆ ಚಿರತೆಯಿಂದ ಆ ಮಗುವಿನ ತಂದೆ ಕಾಪಾಡಿದ್ದಾರೆ.

ಚಿರತೆ ಭಯದಲ್ಲೇ ಸಿಲಿಕಾನ್ ಸಿಟಿ ಮಂದಿ

ಬೆಂಗಳೂರಿನಲ್ಲಿ ಚಿರತೆ ಚಿಂತೆ ಇನ್ನೂ ಕಮ್ಮಿಯಾಗಿಲ್ಲ. ಯಾವ ಟೈಮಲ್ಲಿ, ಯಾವ ಕಡೆಯಿಂದ ಚಿರತೆ ಬಂದ್​ಬಿಡುತ್ತೋ ಅಂತ ಅಂದ್ಕೊಂಡೇ ಜನ ಓಡಾಡ್ತಿದ್ದಾರೆ. ಅದರಲ್ಲೂ ಸ್ವಲ್ಪ ಹಳ್ಳಿಗಾಡು ಅಥವಾ ಅರಣ್ಯದ ಸುತ್ತಮುತ್ತ ಇರೋ ಜನರಂತೂ ಭಯದಿಂದಲೇ ದಿನ ಕಳೆಯೋಥರಾ ಆಗಿದೆ ಅಂದ್ರೆ ನಂಬಲೇಬೇಕು. 2 ವಾರಗಳ ಹಿಂದೆ ಬೆಂಗಳೂರಿನ ಕೂಡ್ಲುಗೇಟ್​ನಲ್ಲಿ ಚಿರತೆಯೊಂದನ್ನ ಸೆರೆಹಿಡಿದಿದ್ರು. ಆದ್ರೆ ಈ ಚಿರತೆ ಹಿಡಿದ್ಮೇಲೂ ಮತ್ತೆರಡು ಕಡೆ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿತ್ತು.. ಹಾಗಾಗಿ ಚಿರತೆ ಭಯದಲ್ಲೇ ಸಿಲಿಕಾನ್ ಸಿಟಿ ಮಂದಿ ದಿನ ಕಳೆಯುವಂತಾಗಿದೆ.

ಈ ಕಡೆ ಬೆಂಗಳೂರಿನಲ್ಲಿ ಒಂದು ಕಥೆಯಾದ್ರೆ ಆ ಕಡೆ ತುಮಕೂರಿನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದು ಹೋಗಿದೆ. ಮನೆ ಮುಂದೆ ಆಟ ಆಡ್ತಿದ್ದ ಮಗುವಿನ ಮೇಲೆ ಚಿರತೆಯೊಂದು ದಾಳಿ ಮಾಡಿದ್ದು, ಅದೃಷ್ಟವಶಾತ್ ಆ ಮಗುವಿನ ತಂದೆ ಮಾಡಿದ ಸಾಹಸದಿಂದ ಭಾರೀ ಅಪಾಯವೊಂದು ತಪ್ಪಿ ಹೋಗಿ ಪ್ರಾಣ ಉಳಿದುಕೊಂಡಿದೆ.

ಸಂಜೆ ಮನೆ ಮುಂದೆ ಆಟ ಆಡ್ಕೊಂಡಿದ್ದ ಮಗು ಮೇಲೆ ದಿಢೀರ್ ಅಂತ ಚಿರತೆ ದಾಳಿ ಮಾಡಿದೆ. ಮನೆಯ ಕಾಂಪೌಂಡ್​ ಹಾರಿ ಬಂದು ಮಗುವಿನ ಕಾಲಿಗೆ ಬಾಯಿ ಹಾಕೋ ಪ್ರಯತ್ನ ಮಾಡಿದೆ. ಆ ಸಮಯದಲ್ಲಿ ಮನೆ ಅಂಗಳದಲ್ಲೇ ಇದ್ದ ತಂದೆ ಇದನ್ನ ಗಮನಿಸಿ ಕ್ಷಣಮಾತ್ರದಲ್ಲಿ ಆ ಮಗುವನ್ನ ಚಿರತೆ ಬಾಯಿಯಿಂದ ಎಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಚಿರತೆ ಬಾಯಿಯಿಂದ ತಪ್ಪಿಸಿಕೊಂಡ 7 ವರ್ಷದ ಲೇಖನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೋಷಕರು ಇನ್ನೂ ಶಾಕ್​ನಲ್ಲೇ ಇದ್ದಾರೆ.

ತುಮಕೂರು ತಾಲೂಕಿನ ಬೆಳ್ಳಾವಿ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಟೆಕ್ನಿಶಿಯನ್ ಕೆಲಸ ಮಾಡೋ ರಾಕೇಶ್, ಹರ್ಷಿತಾ ಮತ್ತು ಇಬ್ಬರು ಮಕ್ಕಳು ತೋಟದ ಮನೆಯಲ್ಲಿ ವಾಸ ಮಾಡ್ತಿದ್ದರು. ಸಂಜೆ ಆರೂವರೆ ಗಂಟೆ ಸಮಯ ಆಗಿರಬಹುದು. ಹರ್ಷಿತಾ ಅಡುಗೆ ಮಾಡ್ತಿದ್ರೆ, ರಾಕೇಶ್​ ಮನೆ ಅಂಗಳದಲ್ಲಿ ಕೂತ್ಕೊಂಡಿದ್ರು. ಇಬ್ಬರು ಮಕ್ಕಳು ಆಟ ಆಡ್ತಿದ್ರು. ಇದೇ ವೇಳೆ ಕಾಪೌಂಡ್​ ಹಾರಿ ಬಂದ ಚಿರತೆ ಮಗುವಿನ ಮೇಲೆ ದಾಳಿ ಮಾಡಿದೆ. ಅದೃಷ್ಟವಶಾತ್​ ಮಗುವನ್ನ ತಂದೆ ಎಳೆದುಕೊಂಡಿದ್ದು, ಅಷ್ಟರಲ್ಲೇ ಉಗುರುಗಳಿಂದ ಚಿರತೆ ಪರಚಿದೆ. ಸದ್ಯ ಮಗುವಿನ ಬಲಗಾಲಿನ ತೊಡೆಯ ಭಾಗದಲ್ಲಿ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಟ್ಯೂಷನ್​ ಮಾಡ್ತಿದ್ದ ವೇಳೆ ಬಂದ ಚಿರತೆ 

ಬೆಳ್ಳಾವಿ ಗ್ರಾಮದಲ್ಲಿ ಚಿರತೆ ಕಾಟ ಹೊಸದೇನಲ್ಲ. ಈ ಘಟನೆ ನಡೆಯೋದಕ್ಕೂ 4 ದಿನದ ಮುಂಚೆ ಅದೇ ಗ್ರಾಮದ ಮತ್ತೊಂದು ಮನೆ ಹತ್ರಾ ಚಿರತೆ ಕಾಣಿಸಿಕೊಂಡಿತ್ತು. ಕಾಂಪೌಂಡ್​ ಒಳಗೆ ಟ್ಯೂಷನ್​ ಮಾಡ್ತಿದ್ದ ವೇಳೆ ಚಿರತೆ ಬಂದಿದೆ. ಇದನ್ನ ನೋಡಿದ ಮಕ್ಕಳೆಲ್ಲ ಕೂಡಲೇ ಒಳಗೆ ಓಡೋಗಿರ್ತಾರೆ. ಆಮೇಲೆ ಚಿರತೆನೂ ವಾಪಸ್ ಹೋಗಿತ್ತು. ಅದಕ್ಕೂ ಮುಂಚೆ ತುಂಬಾ ಸಲ ಚಿರತೆ ಕಾಣಿಸಿಕೊಂಡಿದೆ. ಆದ್ರೆ ಇದೇ ಮೊದಲ ಒಬ್ಬರ ಮೇಲೆ ಚಿರತೆ ದಾಳಿ ಮಾಡಿರುವ ಬಗ್ಗೆ ವರದಿಯಾಗಿದೆ.

ಪದೇ ಪದೇ ಊರಿನಲ್ಲಿ ಚಿರತೆ ಕಾಣಿಸಿಕೊಳ್ತಿರುವ ಬಗ್ಗೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಇನ್ನು ಬೆಳ್ಳಾವಿ ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯವರು ರಾಕೇಶ್ ಮನೆ ಬಳಿ ಭೇಟಿ ನೀಡಿ ಸುತ್ತಮುತ್ತ ಪರಿಶೀಲನೆ ಮಾಡ್ತಿದ್ದಾರೆ. ಸ್ವಲ್ಪ ಯಾಮಾರಿದರೂ ಚಿರತೆಯ ದಾಳಿಗೆ ಆ ಪುಟ್ಟ ಮಗು ಬಲಿಯಾಗಬೇಕಿತ್ತು. ಕಣ್ಣ ಮುಂದೆಯೇ ಮಗುವನ್ನ ಹೊತ್ತೊಯ್ಯುವುದನ್ನ ನೋಡಿದ ಅಪ್ಪ ಸುಮ್ಮನೆ ಇರಲು ಸಾಧ್ಯವೇ. ಧೈರ್ಯದಿಂದ ಮುನ್ನುಗ್ಗಿ ತನ್ನ ಮಗಳನ್ನ ಉಳಿಸಿಕೊಂಡು ಮಗಳಿಗೆ ಪುನರ್​ಜನ್ಮ ನೀಡಿದ್ದಾನೆ.

ಕಾಂಪೌಂಡ್ ಮೇಲೆ ಕೂತು ಘರ್ಜಿಸಿದ ಚಿರತೆ!

ಕಾಂಪೌಂಡ್​ ಮೇಲೆ ಕುಳಿತ ಚಿರತೆ ಘರ್ಜಿಸ್ತಿತ್ತು. ಉಡುಪಿ ಜಿಲ್ಲೆಯ ಮುಂಡ್ಕೂರು ಗ್ರಾಮದಲ್ಲಿ ಪ್ರತ್ಯಕ್ಷವಾಗಿರುವ ಚಿರತೆ. ಜಾಫರ್ ಎಂಬವರ ಮನೆಯ ಎದುರುಗಡೆ ಕಾಂಪೌಂಡ್ ಮೇಲೆ ಚಿರತೆ ಕಾಣಿಸಿಕೊಂಡಿದೆ. ಚಿರತೆ ನೋಡಿ ಮನೆಯವರು ಗಾಬರಿಯಾಗಿ ಓಡಿ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಉಡುಪಿಯಲ್ಲಿ ಚಿರತೆಗಳ ಉಪಟಳ ಜಾಸ್ತಿ ಆಗಿದೆಯಂತೆ. ಸಂಜೆಯಾಗುತ್ತಿದ್ದಂತೆ ಚಿರತೆ ಕಾಣಿಸಿಕೊಳ್ಳುವ ಘಟನೆಗಳು ವರದಿಯಾಗ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈಗಾಗ್ಲೇ ಚಿರತೆ ದಾಳಿಗೆ ಗ್ರಾಮದಲ್ಲಿ ಹಲವು ಪ್ರಾಣಿಗಳು ಬಲಿಯಾಗಿದ್ದು, ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಸಾಕಷ್ಟು ಭಾರೀ ಮನವಿ ಮಾಡಿದ್ದಾರಂತೆ. ಆದರೆ ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದ್ದು, ಈ ನಡುವೆ ನವೆಂಬರ್ 7ನೇ ತಾರೀಖು ಸಂಜೆ ಚಿರತೆಯೊಂದು ರಾಜಾರೋಷವಾಗಿ ಮನೆ ಕಾಂಪೌಂಡ್​ ಮೇಲೆ ಕುಳಿತುಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಚಿರತೆಗಳು ನಗರಗಳಿಗೆ, ಗ್ರಾಮಗಳಿಗೆ ನುಗ್ಗಿ ಬರ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಅಗತ್ಯ ಕ್ರಮಗಳನ್ನ ಜರುಗಿಸಬೇಕಾದ ಅನಿವಾರ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಕಿ ಮೇಲೆ ಚಿರತೆ ದಾಳಿ.. ಜಸ್ಟ್​ ಮಿಸ್​! ಕಾದಾಡಿ ಮಗಳ ಜೀವ ಉಳಿಸಿದ ಗ್ರೇಟ್ ಅಪ್ಪ!

https://newsfirstlive.com/wp-content/uploads/2023/11/TMK_CHIRATE_ATTACK_2.jpg

Load More