newsfirstkannada.com

ನೋವು ಹೇಳಿಕೊಂಡ ಬಡ ಮಹಿಳೆಗೆ ಇಲ್ಲ ಎನ್ನಲಿಲ್ಲ; ತಾವೇ ಆಪರೇಷನ್ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದ ಕುಣಿಗಲ್ ಶಾಸಕ..!  

Share :

Published June 28, 2023 at 8:17am

Update June 28, 2023 at 8:45am

    ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ 4 ಗಂಟೆ ಸರ್ಜರಿ ಮಾಡಿದ ಶಾಸಕ

    ಶಸ್ತ್ರಚಿಕಿತ್ಸೆ ಮಾಡಿಸಲು ಖರ್ಚಾಗುತ್ತಿತ್ತು ಬರೋಬ್ಬರಿ 5 ಲಕ್ಷ ರೂ.ಗಳು

    MLA ರಂಗನಾಥ್​ರ ವೈದ್ಯಕೀಯ ಸೇವೆಗೆ ಕ್ಷೇತ್ರದಲ್ಲಿ ಭಾರೀ ಮೆಚ್ಚುಗೆ

ತುಮಕೂರು: ಬೋರಿಂಗ್​ ಆಸ್ಪತ್ರೆಗೆ ಬಡ ಮಹಿಳೆಯನ್ನು ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿ ಕಾಂಗ್ರೆಸ್ ಶಾಸಕ ಡಾ.ಹೆಚ್.ಡಿ ರಂಗನಾಥ್ ಕರ್ತವ್ಯ ಮೆರೆದಿದ್ದಾರೆ.

ಕುಣಿಗಲ್ ತಾಲೂಕಿನ ಕುಂದೂರು ಗ್ರಾಮದ ನಿವಾಸಿಯಾದ ಆಶಾ ಎಂಬ ಮಹಿಳೆಯ ಕೀಲು ಡಿಸ್ ಲೋಕೆಟ್ ಆಗಿತ್ತು. ಇದನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲು 5 ಲಕ್ಷ ರೂಪಾಯಿಗಳು ವೆಚ್ಚವಾಗುತ್ತಿತ್ತು.

ಮಹಿಳೆಯು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಹೀಗಾಗಿ ಆ ಮಹಿಳೆಯನ್ನು ಬೋರಿಂಗ್ ಆಸ್ಪತ್ರೆಗೆ ದಾಖಲಿಸಿ ಶಾಸಕ ಡಾ.ರಂಗನಾಥ್ ಅವರು ಉಚಿತವಾಗಿ ಬರೋಬ್ಬರಿ 4 ತಾಸು ತಾವೇ ಆಪರೇಷನ್ ಮಾಡಿದ್ದಾರೆ. ಡಾ.ರಂಗನಾಥ್ ಅವರು ಮೂಲತಹ ಆರ್ಥೋಪೆಡಿಕ್ (Orthopedic) ಡಾಕ್ಟರ್​ ಆಗಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಶಾಸಕರ ಈ ಸೇವೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆಶಾ ಅವರು ಕಳೆದ 10 ವರ್ಷದ ಹಿಂದೆ ಯಶಸ್ವಿನಿ ಯೋಜನೆಯಡಿ ಕೀಲು ಆಪರೇಷನ್ ಮಾಡಿಸಿಕೊಂಡಿದ್ದರು. ಈಗ ಅದು ಮತ್ತೆ ಡಿಸ್ ಲೋಕೆಟ್ ಆಗಿತ್ತು. ಇದರಿಂದ ಸರ್ಕಾರದ ಯೋಜನೆಯಾದ ಯಶಸ್ವಿನಿಯಡಿ 2 ಬಾರಿ ಸರ್ಜರಿಗೆ ಅವಕಾಶ ಇರಲಿಲ್ಲ. ಮತ್ತೆ ಸರ್ಜರಿ ಮಾಡಿಸಬೇಕು ಎಂದರೆ ಹಣ ಪಾವತಿಸಬೇಕಾಗಿತ್ತು. ಈ ಬಗ್ಗೆ ಶಾಸಕರ ಬಳಿ ಮಹಿಳೆಯು ನೋವು ಹೇಳಿಕೊಂಡಿದ್ದರು. ಶಾಸಕರಾದ ಡಾ.ರಂಗನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೋವು ಹೇಳಿಕೊಂಡ ಬಡ ಮಹಿಳೆಗೆ ಇಲ್ಲ ಎನ್ನಲಿಲ್ಲ; ತಾವೇ ಆಪರೇಷನ್ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದ ಕುಣಿಗಲ್ ಶಾಸಕ..!  

https://newsfirstlive.com/wp-content/uploads/2023/06/MLA_DR_RANGANATH.jpg

Load More