newsfirstkannada.com

VIDEO: ವಿದ್ಯಾರ್ಥಿನಿಯೊಂದಿಗೆ ಉಪನ್ಯಾಸಕನ ಪ್ರೇಮ ಪ್ರಸಂಗ.. ಲವ್ ಗುರುಗೆ ಕಾಲೇಜು ವಿದ್ಯಾರ್ಥಿಗಳು ಹೀಗೆ ಮಾಡಬಾರದಿತ್ತು

Share :

15-06-2023

    ಕಾಲೇಜು ವಿದ್ಯಾರ್ಥಿನಿಯೊಂದಿಗೆ ಉಪನ್ಯಾಸಕನ ಲವ್ವಿಡವ್ವಿ ಆರೋಪ

    ಲವ್ ಗುರು ಪ್ರೇಮ ಪ್ರಸಂಗ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ವಿದ್ಯಾರ್ಥಿಗಳು

    ಕಾರಿನಲ್ಲಿ ಪ್ರೇಮ ಪಾಠ ಮಾಡುತ್ತಿದ್ದ ರಂಗನಾಥ್​ ಕೂಡಿ ಹಾಕಿ ಆಕ್ರೋಶ

ತುಮಕೂರು: ಕಾಲೇಜು ವಿದ್ಯಾರ್ಥಿನಿಯೊಂದಿಗೆ ಉಪನ್ಯಾಸಕ ಲವ್ವಿಡವ್ವಿ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು ಉಪನ್ಯಾಸಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ರಂಗನಾಥ್ ಕೃತ್ಯವೆಸಗಿದವರು. ವಿದ್ಯಾರ್ಥಿನಿಯೊಂದಿಗೆ ರಂಗನಾಥ್ ಸಲುಗೆ ಬೆಳಸಿಕೊಂಡಿದ್ದನು. ಹೀಗಾಗಿ ವಿದ್ಯಾರ್ಥಿನಿಯೊಂದಿಗೆ ಮೊಬೈಲ್ ಚಾಟಿಂಗ್ ಹಾಗೂ ಕಾರಿನಲ್ಲಿ ಸುತ್ತಾಟವನ್ನು ನಡೆಸಿದ್ದನು. ಇದರಿಂದ ರೊಚ್ಚಿಗೆದ್ದ ಕಾಲೇಜು ವಿದ್ಯಾರ್ಥಿಗಳು ರಂಗನಾಥ್​ನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತಿಪಟೂರು ನಗರ ಠಾಣೆಯ ಪೊಲೀಸರು ಕಾಲೇಜಿಗೆ ದೌಡಾಯಿಸಿ ವಿದ್ಯಾರ್ಥಿಗಳ ಮನವೊಲಿಕೆಗೆ ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವಿದ್ಯಾರ್ಥಿನಿಯೊಂದಿಗೆ ಉಪನ್ಯಾಸಕನ ಪ್ರೇಮ ಪ್ರಸಂಗ.. ಲವ್ ಗುರುಗೆ ಕಾಲೇಜು ವಿದ್ಯಾರ್ಥಿಗಳು ಹೀಗೆ ಮಾಡಬಾರದಿತ್ತು

https://newsfirstlive.com/wp-content/uploads/2023/06/TMK_STUDENT_TEACHER_1.jpg

Load More