ನೀವು ಓದಲೇಬೇಕಾದ ಇಂಟರೆಸ್ಟಿಂಗ್ ಸ್ಟೋರಿ
ತಂಗಿಯ ಜೀವ ಉಳಿಸಲು ತನ್ನ ಪ್ರಾಣವನ್ನೇ ಲೆಕ್ಕಿಸದ ಅಕ್ಕ..!
ತೋಟದಲ್ಲಿ ಆಟವಾಡುವಾಗ ನಡೆದಿದ್ದಾದ್ರೂ ಏನು ಗೊತ್ತಾ?
ತುಮಕೂರು: ಬಾಲ್ ತೆಗೆಯಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ 3 ವರ್ಷದ ಬಾಲಕಿಯನ್ನು ಆಕೆಯ ಸಹೋದರಿಯೇ ಕಾಪಾಡಿರುವ ಘಟನೆ ತಾಲೂಕಿನ ಕುಚ್ಚಂಗಿ ಗ್ರಾಮದಲ್ಲಿ ನಡೆದಿದೆ.
ಕುಚ್ಚಂಗಿ ಗ್ರಾಮದ ಬಳಿ ತೋಟದ ಮನೆಯಲ್ಲಿ ಉತ್ತರ ಪ್ರದೇಶ ಮೂಲದ ಜೀತೇಂದ್ರ- ರಾಜಕುಮಾರಿ ಎಂಬ ದಂಪತಿ ಕೆಲಸಕ್ಕೆ ಇದ್ದಾರೆ. ಇವರಿಗೆ ಶಾಲೂ (8), ಹಿಮಾಂಶು (7), ರಾಶಿ (3), ಕಪಿಲ್ (2) ಎನ್ನುವ ನಾಲ್ವರು ಮಕ್ಕಳಿದ್ದಾರೆ. ಇವರಲ್ಲಿ ಹಿಮಾಂಶು ಹಾಗೂ ರಾಶಿ ತೋಟದಲ್ಲಿ ಆಟವಾಡುತ್ತಿದ್ದರು.
ಈ ವೇಳೆ ಬಾಲ್ ಬಾವಿಗೆ ಬಿದ್ದಿದೆ. ಇದನ್ನು ತೆಗೆಯಲೆಂದು ಹಿಮಾಂಶು, ರಾಶಿ ಬಾವಿಗೆ ಇಳಿದಿದ್ದಾರೆ. ಆಗ ಕಾಲು ಜಾರಿ ರಾಶಿ ನೀರಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಳು. ಇದನ್ನು ಕಂಡ ಶಾಲೂ ಮನೆಯಲ್ಲಿದ್ದ ಲೈಫ್ ಜಾಕೆಟ್ ಧರಿಸಿ ನೀರಿಗೆ ಹಾರಿ ಸಹೋದರಿಯನ್ನು ರಕ್ಷಣೆ ಮಾಡಿದ್ದಾಳೆ.
ಈ ವೇಳೆ ಅಕ್ಕ ಪಕ್ಕದ ಜನರು ಕೂಡ ಶಾಲೂ ಸಹಾಯಕ್ಕೆ ಬಂದಿದ್ದು ಇಬ್ಬರನ್ನು ಬಾವಿಯಿಂದ ಮೇಲಕ್ಕೆ ಎಳೆದುಕೊಂಡಿದ್ದಾರೆ. ಸದ್ಯ ಇಬ್ಬರು ಆರೋಗ್ಯವ್ಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಬಾಲಕಿಯ ಧೈರ್ಯ, ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಲೂ ಈಗೀಗ ಈಜು ಕಲಿಯುತ್ತಿದ್ದಳು. ಇದರಿಂದ ನೀರಿಗೆ ಯಾವುದೇ ಭಯವಿಲ್ಲದೇ ಲೈಫ್ ಜಾಕೆಟ್ ಹಾಕಿಕೊಂಡು ನೀರಿಗೆ ಹಾರಿದ್ದಾಳೆ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ