newsfirstkannada.com

ವಂಚನೆ ಕೇಸ್​; ಕಂಬಾಳು ಮಠಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದ ಸಿದ್ದಗಂಗಾ ಮಠ

Share :

09-06-2023

  ಕಂಬಾಳು ಮಠದ ಸ್ವಾಮೀಜಿಗೆ 35 ಲಕ್ಷ ವಂಚಿಸಿದ ಪ್ರಕರಣ

  ಸುಂದರಿಗೆ ಮರುಳಾದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ

  ಸಿದ್ದಗಂಗಾ ಮಠದ ಆಡಳಿತ ಮಂಡಳಿಯಿಂದ ಸ್ಪಷ್ಟನೆ

ತುಮಕೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆಗೆ 35 ಲಕ್ಷ ರೂಪಾಯಿ ಕೊಟ್ಟು ವಂಚನೆ ಒಳಗಾದ ಕಂಬಾಳು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.  ಕಂಬಾಳು ಮಠದ ಸ್ವಾಮೀಜಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಬಾಳು ಸಂಸ್ಥಾನ ಮಠಕ್ಕೂ ತುಮಕೂರಿನ ಸಿದ್ದಗಂಗಾ ಮಠಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸಿದ್ದಗಂಗಾ ಮಠದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಕಂಬಾಳು ಸಂಸ್ಥಾನ ಮಠ ತುಮಕೂರಿನ ಸಿದ್ದಗಂಗಾ ಮಠದ ಶಾಖಾ ಮಠವಲ್ಲ. ಕಂಬಾಳು ಮಠವು ಶ್ರೀ ಶೈಲ ಸೂರ್ಯಸಿಂಹಾಸ‌ನ ಗುರುಪರಂಪರೆಗೆ ಸೇರಿದ ಮಠವಾಗಿದ್ದು. ಇತ್ತೀಚೆಗೆ ಕಂಬಾಳು ಸಂಸ್ಥಾನ ಮಠವು ಸಿದ್ದಗಂಗಾ ಮಠದ ಶಾಖಾ ಮಠವೆಂದು ಹಲವು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಲಾಗುತ್ತಿದೆ, ಸಿದ್ದಗಂಗಾ ಮಠಕ್ಕೂ ಕಂಬಾಳು ಮಠಕ್ಕೂ ಯಾವುದೇ ಸಂಬಂಧವಿಲ್ಲವೆಂದು ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಲಾಗಿದೆ.

ಇದನ್ನೂ ಓದಿ: ಸ್ವಾಮೀಜಿಗೆ 35 ಲಕ್ಷ ದೋಖಾ ಮಾಡಿದ್ದ ಮಹಿಳೆ ಕೇಸ್​ಗೆ ಟ್ವಿಸ್ಟ್​​.. ಅಸಲಿ ಆಟ ಆಡಿದ್ಯಾರು..?

ಸಿದ್ದಗಂಗಾ ಮಠವು ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಒಂದಾಗಿದ್ದು. ತ್ರಿವಿಧ ದಾಸೋಹದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಸಂಸ್ಥೆಯಾಗಿರುತ್ತದೆ. ಹೀಗಾಗಿ ಮಠಕ್ಕೆ ಯಾವುದೇ ಧಕ್ಕೆಯಾಗದಂತೆ ಪ್ರತಿಕಾ ಪ್ರಕಟಣೆ ಮೂಲಕ ತುಮಕೂರಿನ ಸಿದ್ದಗಂಗಾ ಮಠದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಂಚನೆ ಕೇಸ್​; ಕಂಬಾಳು ಮಠಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದ ಸಿದ್ದಗಂಗಾ ಮಠ

https://newsfirstlive.com/wp-content/uploads/2023/06/Swamiji-1-300x169-1.jpg

Load More