newsfirstkannada.com

ಕಮಂಡಲ ಹಿಡಿದ ಕಾವಿಧಾರಿಗಳಿಂದ ನಡೀತು ದರೋಡೆ; ತುಮಕೂರಲ್ಲಿ ಭಯ ಹುಟ್ಟಿಸಿದ ನಕಲಿ ನಾಗ ಸಾಧುಗಳು..!

Share :

13-08-2023

    ಕೈಯಲ್ಲಿ ರುದ್ರಾಕ್ಷಿ ಕೊಟ್ಟು ಧ್ಯಾನ ಮಾಡುವಂತೆ ಹೇಳಿದರು

    ದರೋಡೆ ಮಾಡಲು ಕಿಲಾಡಿ ಐಡಿಯಾ ಕಂಡುಕೊಂಡ ಕಳ್ಳರು

    ಸ್ಟುಡಿಯೋ ಮಾಲೀಕನನ್ನ ನಕಲಿ ನಾಗ ಸಾಧುಗಳು ದೋಚಿದ್ದೇಗೆ..?

ತುಮಕೂರು: ನಾಗ ಸಾಧುಗಳ ಸೋಗಿನಲ್ಲಿ ಬಂದು ಕಳ್ಳತನ ಮಾಡಿರೋ ಘಟನೆ ತುಮಕೂರು ನಗರದ ಎಂ.ಜಿ ರಸ್ತೆಯಲ್ಲಿ ನಡೆದಿದೆ.

ಮಲ್ನಾಡ್ ಸ್ಟುಡಿಯೋಗೆ ನಾಗ ಸಾಧುಗಳ ವೇಷದಲ್ಲಿ ಎಂಟ್ರಿ ಕೊಟ್ಟಿದ್ದ ಟೀಂ, ಸ್ಟುಡಿಯೋ ಮಾಲೀಕ ಚಂದ್ರು ಅವರ ಕೈಯಲ್ಲಿ ರುದ್ರಾಕ್ಷಿ ಇಟ್ಟಿದ್ದಾರೆ. ಬಳಿಕ ಎರಡೂ ಕೈಯನ್ನು ಬಲವಾಗಿ ಹಿಡಿದು ವೇಷಧಾರಿಗಳು ಮಂತ್ರವನ್ನೂ ಹೇಳಿದ್ದಾರೆ. ಎರಡು ನಿಮಿಷ ಧ್ಯಾನ ಮಾಡಿ ಅಂತ ಹೇಳಿ ನಿಧಾನವಾಗಿ ಮಾಲೀಕನ ಬೆರಳಲ್ಲಿದ್ದ ಉಂಗುರವನ್ನು ಕದ್ದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಧ್ಯಾನದಿಂದ ಹೊರ ಬಂದ ಮೇಲೆ ಮಾಲೀಕನಿಗೆ ಉಂಗುರವನ್ನು ಲಪಟಾಯಿಸಿದ್ದು ಅರಿವಿಗೆ ಬಂದಿದೆ. ಸದ್ಯ ಈ ಸಂಬಂಧ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ನಕಲಿ ಸ್ವಾಮೀಜಿಗಳಿಂದ ಕೃತ್ಯ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಮಂಡಲ ಹಿಡಿದ ಕಾವಿಧಾರಿಗಳಿಂದ ನಡೀತು ದರೋಡೆ; ತುಮಕೂರಲ್ಲಿ ಭಯ ಹುಟ್ಟಿಸಿದ ನಕಲಿ ನಾಗ ಸಾಧುಗಳು..!

https://newsfirstlive.com/wp-content/uploads/2023/08/TMK_NAGASADHU.jpg

Load More