newsfirstkannada.com

Tumkur: ಕ್ರಿಕೆಟ್​ ಪ್ರೇಮಿಗಳ ಮನತಣಿಸಿದ ವಧು-ವರರು.. ಮಂಟಪದಲ್ಲೇ ಸೆಮಿ ಫೈನಲ್​ ಪಂದ್ಯ ವೀಕ್ಷಣೆಗೆ ಸಖತ್​ ವ್ಯವಸ್ಥೆ!  

Share :

16-11-2023

    ನ್ಯೂಜಿಲೆಂಡ್​ ವಿರುದ್ಧ ಗೆದ್ದು ಬೀಗಿದ ಭಾರತ

    ಮದುವೆ ಬಂದವರಿಗೆ ಸೆಮಿ ಫೈನಲ್​ ವೀಕ್ಷಿಸುವ ಭಾಗ್ಯ

    ಆರತಕ್ಷತೆಗೆ ಬಂದವರಿಗೆ INDvsNZ ಪಂದ್ಯ ವೀಕ್ಷಸಲು ಅವಕಾಶ

ತುಮಕೂರು: ಟೀಂ ಇಂಡಿಯಾ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ರೋಹಿತ್​ ಪಡೆ ಸೆಮಿಫೈನಲ್​ ಎದುರಿಸಿ ಫೈನಲ್​ಗೆ ಪ್ರವೇಶ ಪಡೆಯುವುದನ್ನು ಯಾರು ಮಿಸ್​ ಮಾಡ್ಕೊಳ್ತಾರೆ ಹೇಳಿ. ಅದರಂತೆಯೇ ವಧು-ವರರು ಇಂಡೋ – ಕಿವೀಸ್ ಸೆಮಿ ಫೈನಲ್ ವೀಕ್ಷಣೆಯನ್ನು ಮದುವೆ ಮಂಟಪದಲ್ಲಿ ಕಾಣುವ ಮೂಲಕ ಕಣ್ತುಂಬಿಕೊಂಡಿದ್ದಾರೆ.

ನಿನ್ನೆ ಪಾವಗಡದ ಎಸ್ ಎಸ್ ಕೆ ಕಲ್ಯಾಣ ಮಂಟಪದಲ್ಲಿ ಕ್ರಿಕೇಟ್ ಪ್ರೇಮಿಗಳ ಮದುವೆ ನಡೆದಿದ್ದು, ಆರತಕ್ಷತೆಗೆ ಬರುವ ಸಂಬಂಧಿಕರು, ಸ್ನೇಹಿತರಿಗಾಗಿ ಎಲ್‌ಈ‌ಡಿ ಮೂಲಕ ಪಂದ್ಯವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರು.

ಸೌಂದರ್ಯ ಮತ್ತು ಕಾರ್ತಿಕ್ ಕ್ರಿಕೆಟ್​ ಪ್ರೇಮಿಗಳಾಗಿದ್ದು, ತಮ್ಮ ಮದುವೆಗೆ ಆಗಮಿಸಿದವರಿಗೆ ಸೆಮಿ ಫೈನಲ್ ಪಂದ್ಯ ವೀಕ್ಷಿಸಲು ವ್ಯವಸ್ಥೆ ಮಾಡಿದ್ದರು. ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯಕ್ಕಾಗಿ ಎಲ್‌ಈ‌ಡಿಗಳ ಅಳವಡಿಸಿದ್ದಲ್ಲದೆ, ಕ್ರಿಕೆಟ್​ ಪ್ರೇಮಿಗಳ ಮನ ತಣಿಸಿದ್ದರು.

ಇದನ್ನು ಓದಿ: Rohit Sharma: ಹಿಟ್​ಮ್ಯಾನ್ ಅಬ್ಬರಕ್ಕೆ ಗೇಲ್​ ರೆಕಾಡ್ಸ್​​​ ಉಡೀಸ್.. ಸಿಕ್ಸರ್​​ ಸರದಾರ ರೋಹಿತ್​ ಶರ್ಮಾ ಆಟಕ್ಕೆ ಎಲ್ಲರೂ ಫಿದಾ

ಆರ್ಕೇಸ್ಟ್ರಾ ಜೊತೆ ಮ್ಯಾಚ್ ನೋಡಲು ಎಲ್‌ಈ‌ಡಿ ವ್ಯವಸ್ಥೆ ಮಾಡಲಾಗಿದ್ದು, ಮದುವೆ ಆರತಕ್ಷತೆಯಲ್ಲಿ ಭರ್ಜರಿ ಊಟದ ಜೊತೆ ಪಂದ್ಯ ವೀಕ್ಷಣೆಯ ಭಾಗ್ಯ ಕಲ್ಪಿಸಿದ್ದರು. ಟೀಂ ಇಂಡಿಯಾ ಗೆಲ್ಲುತ್ತಿದ್ದಂತೆ ಮದುವೆ ಮಂಟಪದಲ್ಲಿ ಸಂಭ್ರಮಾಚರಣೆ ಜೋರಾಗಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Tumkur: ಕ್ರಿಕೆಟ್​ ಪ್ರೇಮಿಗಳ ಮನತಣಿಸಿದ ವಧು-ವರರು.. ಮಂಟಪದಲ್ಲೇ ಸೆಮಿ ಫೈನಲ್​ ಪಂದ್ಯ ವೀಕ್ಷಣೆಗೆ ಸಖತ್​ ವ್ಯವಸ್ಥೆ!  

https://newsfirstlive.com/wp-content/uploads/2023/11/Tumkur-2.jpg

Load More