/newsfirstlive-kannada/media/post_attachments/wp-content/uploads/2024/08/Tungabadra-dam-6.jpg)
ವಿಜಯನಗರ: ತುಂಗಭದ್ರಾ ಡ್ಯಾಂನ 19ನೇ ಗೇಟ್ ಡ್ಯಾಮೇಜ್ ಹಿನ್ನಲೆ 32 ಕ್ರೆಸ್ಟ್ ಗೇಟ್‌ಗಳಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ. 105 ಟಿಎಂಸಿ ಸಾಮರ್ಥ್ಯದ ಡ್ಯಾಂನಿಂದ ಸತತ 13 ಗಂಟೆಗಳಿಂದ ನದಿಗೆ ನೀರು ಹರಿಸಲಾಗುತ್ತಿದೆ. ಸದ್ಯ 1.20 ಲಕ್ಷಕ್ಕೂ ಕ್ಯೂಸೆಕ್ ನೀರು ನದಿಗೆ ಹರಿಸಿದ ಹಿನ್ನಲೆ ಜಲಾಶಯದ ಮಟ್ಟದಲ್ಲಿ ಎರಡೂವರೆ ಅಡಿ ನೀರು ಕುಸಿದಿದೆ.
ಇದನ್ನೂ ಓದಿ: ಅಪಾಯದಲ್ಲಿ ತುಂಗಭದ್ರಾ ಡ್ಯಾಂ.. ಅಧಿಕಾರಿಗಳಿಂದ ಹೈ-ವೋಲ್ಟೇಜ್ ಮೀಟಿಂಗ್.. ಮುಂದಿನ ನಡೆಯೇನು?
/newsfirstlive-kannada/media/post_attachments/wp-content/uploads/2024/08/kampli1.jpg)
ತುಂಗಭದ್ರಾ ಬೋರ್ಡ್​​ 31 ಗೇಟ್‌ಗಳನ್ನು ಒಂದೂವರೆ ಅಡಿ ಎತ್ತರಿಸಿ ನೀರು ಹೊರ ಹಾಕುತ್ತಿದ್ದಾರೆ. ಡ್ಯಾಮೇಜ್ ಆದ 19ನೇ ನಂಬರ್ ಗೇಟ್‌ನಿಂದ 35000 ಕ್ಯೂಸೆಕ್ ನೀರು ನದಿಗೆ ಹರಿಯುತ್ತಿದೆ. ಅಚ್ಚರಿಯ ವಿಚಾರವೆಂದರೆ ನಿನ್ನೆಯಿಂದ ಅಂದರೆ, 13 ಗಂಟೆಗಳಲ್ಲಿ ಎರಡೂವರೆ ಅಡಿಯಷ್ಟು ಜಲಾಶಯದ ನೀರು ಕುಸಿದಿದೆ. ಈಗಾಗಲೇ 5 ಟಿಎಂಸಿ ನೀರು ನದಿಗೆ ಹರಿಸಿದೆ.
/newsfirstlive-kannada/media/post_attachments/wp-content/uploads/2024/08/Tungabadra-dam-1.jpg)
60 TMC ನೀರು ತುಂಗಭದ್ರಾ ನದಿಗೆ ಹರಿಸಿದಾಗ ಮಾತ್ರ ಚೈನ್ ಲಿಂಕ್ ರಿಪೇರಿ ಸಾಧ್ಯವಾಗಲಿದೆ. ಜಲಾಶಯದ ಮಟ್ಟದಲ್ಲಿ 20 ಅಡಿ ಕುಸಿದಾಗ ಮಾತ್ರ ಗೇಟ್ ರಿಪೇರಿ ಮಾಡಬಹುದಾಗಿದೆ. ಜಲಾಶಯದ ಮಟ್ಟ ಕುಸಿದ ಬಳಿಕ ತಜ್ಞರ ತಂಡ ಜಲಾಶಯ ಭೇಟಿ ನೀಡುವ ಸಾಧ್ಯತೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us