ಕೊಪ್ಪಳದ ಮುನಿರಾಬಾದ್ ಜಲಾಶಕ್ಕೆ ಹರಿದು ಬರುತ್ತಿರುವ ನೀರು
ಜಲಾಶಯದಿಂದ ನದಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಜಲಾಶಯ ಸಂಪೂರ್ಣ ಭರ್ತಿಗೆ ಎಷ್ಟು ಟಿಎಂಸಿ ನೀರು ಬಾಕಿ ಇದೆ?
ಕೊಪ್ಪಳ: ಮಲೆನಾಡಿನಲ್ಲಿ ವರುಣಾರ್ಭಟ ಜೋರಾದ ಹಿನ್ನೆಲೆಯಲ್ಲಿ ಜೀವನಾಡಿಯಾಗಿರುವ ತುಂಗಾಭದ್ರ ಜಲಾಶಯ ಮೈದುಂಬಿದ್ದು ಡ್ಯಾಂ ಭರ್ತಿಗೆ ಇನ್ನೇನು ಕೆಲವು ಅಡಿಗಳು ಮಾತ್ರ ಬಾಕಿ ಉಳಿದಿದೆ. ಹೀಗಾಗಿ ತುಂಗಾಭದ್ರ ಜಲಾಶಯಕ್ಕೆ ಈಗ ಜೀವ ಕಳೆ ಬಂದಂತೆ ಆಗಿದೆ.
ಇದನ್ನೂ ಓದಿ: ತುಂಗಭದ್ರಾ ಜಲಾಶಯ ಕಾಪಾಡಿದ ಕನ್ನಯ್ಯ ನಾಯ್ಡು ಯಾರು? ಡ್ಯಾಂ ತಜ್ಞನ ಹಿನ್ನೆಲೆ ಏನು? ಸಾಧನೆಗಳೇನು?
ಈ ಹಿಂದೆ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಆಗ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಅವರ ಸಹಾಯದಿಂದ ಅಧಿಕಾರಿಗಳು ತಾತ್ಕಾಲಿಕ ಗೇಟ್ ಕೂರಿಸುವ ಮೂಲಕ ಪೋಲಾಗುತ್ತಿರುವ ನೀರನ್ನು ತಡೆದಿದ್ದಾರೆ. ತಾತ್ಕಾಲಿಕ ಗೇಟ್ ಅಳವಡಿಕೆ ಸಕ್ಸಸ್ ಆದ ಬಳಿಕ ತುಂಗಭದ್ರಾ ಜಲಾಶಯ ಭರ್ತಿಯಾಗುತ್ತಿದೆ.
ಕೊಪ್ಪಳದ ಮುನಿರಾಬಾದ್ ಜಲಾಶಕ್ಕೆ ನೀರು ಹರಿದು ಬರುತ್ತಿದೆ. 105 ಟಿಎಂಸಿ ಸಾಮಾರ್ಥ್ಯ ಜಲಾಶಯದಲ್ಲಿ 96 ಟಿಎಂಸಿ ನೀರು ಸಂಗ್ರಹವಾಗಿದೆ. ಪ್ರತಿದಿನವು ತುಂಗಭದ್ರಾ ಜಲಾಶಯ ಒಳಹರಿವು ಹೆಚ್ಚಾಗುತ್ತಿದೆ. ಸದ್ಯ ಒಟ್ಟು 40 ಸಾವಿರ ಕ್ಯೂಸೆಕ್ ಒಳಹರಿವು ದಾಟಿದೆ. ಇಂದು ಜಲಾಶಯದಿಂದ ನದಿಗೆ 5 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಿದ್ದಾರೆ. ಇನ್ನೂ ಜಲಾಶಯ ಸಂಪೂರ್ಣ ಭರ್ತಿಗೆ ಕೇವಲ 9 ಟಿಎಂಸಿ ಬಾಕಿ ಉಳಿದಿದೆ. ಸ್ಟಾಪ್ ಲಾಗ್ ಅಳವಡಿಸಿದಾಗ 70 ಟಿಎಂಸಿ ಇದ್ದ ನೀರು ಈಗ ಕೇವಲ 15 ದಿನಗಳಲ್ಲಿ 26 ಟಿಎಂಸಿ ಸಂಗ್ರಹವಾಗಿದೆ. ಹೀಗಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ