newsfirstkannada.com

ಸಭೆ ಸಮಾರಂಭಗಳಲ್ಲಿ ಈ ಕೆಲಸ ಮಾಡಿದ್ರೆ ಬೀಳುತ್ತೆ ದಂಡ; ಬಿಬಿಎಂಪಿ ಕಮಿಷನರ್​​ ಮಹತ್ವದ ಆದೇಶ

Share :

13-08-2023

    ಸಭೆಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಪೂರೈಕೆ ಮಾಡುವಂತಿಲ್ಲ

    ಇದ್ರ ಬದಲು ಸ್ಟೀಲ್​ ಹಾಗೂ ಗಾಜಿನ ಲೋಟ ಬಳಕೆ!

    ಪ್ಲಾಸ್ಟಿಕ್​ ಬ್ಯಾಗ್​, ಪ್ಲಾಸ್ಟಿಕ್​ ಪ್ಯಾಕ್​ನಲ್ಲಿ ಊಟ ತರುವಂತಿಲ್ಲ

ಬೆಂಗಳೂರು: ಏಕಬಳಕೆ ಪ್ಲಾಸ್ಟಿಕ್​ ಬಳಕೆಗೆ ನಿಷೇಧ ಹೇರಲಾಗಿದೆ.. ಈ ಆದೇಶ ಅನೇಕ ವರ್ಷಗಳಿಂದ ನಾವು ನೀವು ಕೇಳುತ್ತಲೇ ಬಂದಿದ್ದೇವೆ. ಆದ್ರೆ ಏಕಬಳಕೆ ಪ್ಲಾಸ್ಟಿಕ್​ ಬಳಕೆಗೆ ಬಿಬಿಎಂಪಿ ನಿಷೇಧ ಹೇರಿದ್ರು ಬಳಕೆ ಮಾತ್ರ ನಿಂತಿಲ್ಲ. ಆದ್ರೆ, ಇದೀಗ ಪ್ಲಾಸ್ಟಿಕ್ ಬಳಕೆಯನ್ನ ಸಂಪೂರ್ಣವಾಗಿ ನಿಷೇಧ ಮಾಡಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಖಡಕ್​ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ಸೂಚನೆ

ಇನ್ಮುಂದೆ ಪಾಲಿಕೆ ಹಾಗೂ ಬಿಎಸ್​​ಡಬ್ಲುಎಂಎಲ್ ಸಭೆಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಪೂರೈಕೆ ಮಾಡುವಂತಿಲ್ಲ. ಇದ್ರ ಬದಲು ಸ್ಟೀಲ್​ ಹಾಗೂ ಗಾಜಿನ ಲೋಟ ನೀಡಬೇಕು ಅಂತ ಸೂಚನೆ ನೀಡಲಾಗಿದೆ. ಇನ್ನು ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ಪ್ಯಾಕ್ ಮಾಡಿದ ಊಟ, ಉಪಹಾರ ಬಳಸುವಂತಿಲ್ಲ. ಇದರ ಬದಲು ಊಟದ ಡಬ್ಬ, ಕ್ಯಾರಿಯರ್​​ನಲ್ಲಿ ತರಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಅಂತಲೂ ಸೂಚನೆ ನೀಡಲಾಗಿದೆ. ಇನ್ನು, ಸಭೆ, ಸಮಾರಂಭದಲ್ಲಿ ಪ್ಲಾಸ್ಟಿಕ್ ಬ್ಯಾಗ್, ತಟ್ಟೆ, ಲೋಟ, ಚಮಚ, ಇತರೆ ವಸ್ತುಗಳ ಬಳಕೆಯನ್ನ ನಿಷೇಧಿಸಲಾಗಿದೆ. ಇನ್ನು, ಪ್ಲಾಸ್ಟಿಕ್ ಸ್ಟಿಕ್​ನ ಇಯರ್ ಬಡ್, ಬಲೂನ್, ಪ್ಲಾಸ್ಟಿಕ್ ಸ್ಟಕ್, ಕ್ಯಾಂಡಿ ಸ್ಟಿಕ್,‌ಅಲಂಕಾರ ವಸ್ತುಗಳನ್ನ ಇನ್ನು ಮುಂದೆ ಬಳಸುವಂತಿಲ್ಲ ಅಂತ ಸೂಚನೆ ನೀಡಲಾಗಿದೆ.

ಕೇಂದ್ರ ಸರ್ಕಾರವು ಈಗಾಗಲೇ ಪ್ಲಾಸ್ಟಿಕ್ ಬಳಕೆ ನಿಷೇಧ ಕಾಯ್ದೆ ಜಾರಿಗೊಳಿಸಿದೆ. ಈ ಕಾಯ್ದೆಯಲ್ಲಿ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದ್ರಂತೆ ಬಿಬಿಎಂಪಿಯೂ ಆದೇಶ ಹೊರಡಿಸಿತ್ತು. ಆದ್ರೆ, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಗರದಲ್ಲಿ ಕಂಡು ಬಂದಿತ್ತು. ಇದೀಗ ಕಡ್ಡಾಯವಾಗಿ ಬಳಸದಂತೆ ಆದೇಶ ನೀಡಲಾಗಿದ್ದು, ಎಷ್ಟರ ಮಟ್ಟಿಗೆ ಜನ ಈ ನಿಯಮ ಪಾಲಿಸ್ತಾರೆ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಭೆ ಸಮಾರಂಭಗಳಲ್ಲಿ ಈ ಕೆಲಸ ಮಾಡಿದ್ರೆ ಬೀಳುತ್ತೆ ದಂಡ; ಬಿಬಿಎಂಪಿ ಕಮಿಷನರ್​​ ಮಹತ್ವದ ಆದೇಶ

https://newsfirstlive.com/wp-content/uploads/2023/08/Tushar-Giri-Nath.jpg

Load More