newsfirstkannada.com

ಹೆಂಡತಿ ನಂಬರ್​​ ಕೇಳಿದ್ದಕ್ಕೆ ಸ್ನೇಹಿತನ ಮೇಲೆ ರೌಡಿಯಿಂದ ಹಲ್ಲೆ ಕೇಸ್​ಗೆ ಟ್ವಿಸ್ಟ್​​.. ಅಸಲಿಗೆ ಆಗಿದ್ದೇನು..?

Share :

15-09-2023

    ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ‌ ಶುರುವಾಯ್ತು ಕಿರಿಕ್

    ನಿನ್ನ ಪತ್ನಿ ನಂಬರ್ ಕೊಡು ಎಂದು ಕೇಳಿದ್ದ ಸ್ನೇಹಿತ..!

    ಸ್ನೇಹಿತರ ಗಲಾಟೆಯಲ್ಲಿ ಮನೆ ಮೇಲೆ ಕಲ್ಲು ತೂರಾಟ

ಬೆಂಗಳೂರು: ಅವರಿಬ್ಬರು ಸ್ನೇಹಿತರು. ಬಾರಲ್ಲಿ ಒಟ್ಟಿಗೆ ಕುಳಿತು ಎಣ್ಣೇನೂ ಹಾಕಿದ್ರು. ಆದ್ರೆ ಎಲ್ಲವೂ ಚೆನ್ನಾಗಿರಬೇಕಾದ್ರೆ, ಸ್ನೇಹಿತ ಕೇಳಿದ ಆ ಮಾತಿನಿಂದಲೇ ಬಲುದೊಡ್ಡ ರಂಪಾಟ ನಡೆದು ಹೋಗಿದೆ. ಹಲ್ಲೆ ನಡೆದು ಮನೆಯನ್ನೇ ಧ್ವಂಸ ಮಾಡಿಸಿದೆ.

ಮುರಿದ ಬಾಗಿಲು, ಪುಡಿ ಪುಡಿಯಾದ ಕಿಟಕಿ ಗಾಜುಗಳು! ಈ ಘಟನೆಯೇ ಹೇಳುತ್ತಿದೆ ಇಲ್ಲೇನೋ ಆಗಬಾರದು ಆಗಿದೆ ಎಂದು. ಹೌದು, ಕುಡಿದ ಮತ್ತಿನಲ್ಲಿ‌ ಶುರುವಾದ ಕಿರಿಕ್ ಮನೆಯನ್ನೇ ಧ್ವಂಸ ಮಾಡುವ ಹಂತಕ್ಕೆ ಬಂದು ತಲುಪಿದೆ.

ಇವನು ರೌಡಿಶೀಟರ್ ಕೆಂಪೇಗೌಡ ಅಲಿಯಾಸ್​ ಕೆಂಪ . ಇವರಿಬ್ಬರು ವೈರಿಗಳಲ್ಲ ಇಬ್ಬರು ಸ್ನೇಹಿತರೇ. ಆದ್ರೆ, ಬಾರ್​ನಲ್ಲಿ ಕುಳಿತು ಎಣ್ಣೆ ಹೊಡೆದ ಮೇಲೆ ವೈರಿಗಳಾಗಿದ್ದಾರೆ. ಅದು ಯಾವ ವಿಚಾರಕ್ಕೆ ಅಂತೀರಾ​. ಹೆಂಡತಿ‌‌ ನಂಬರ್ ಕೇಳಿದ್ದಕ್ಕೆ. ಹೌದು, ಈ ರಮೇಶ್​​ ಕೆಂಪನ ಬಳಿ ಹೆಂಡ್ತಿ ನಂಬರ್​ ಕೇಳಿದ್ದಾನೆ. ಇದಕ್ಕೆ ರೊಚ್ಚಿಗೆದ್ದ ಕೆಂಪ ರಮೇಶ್​ ಮೇಲೆ ಹಲ್ಲೆ ಮಾಡಿದ್ದಾನೆ.

ಹಲ್ಲೆ ಮಾಡಿದ್ದೇಕೆ ಎಂದು ರಮೇಶ್​​​ನಿಂದ ಹಲ್ಲೆ

ನಂತರ ಹೊಯ್ಸಳ ನಗರದಲ್ಲಿರುವ ತನ್ನ ಮನೆಗೆ ಕೆಂಪ ತೆರಳಿದ್ದ. ಆದ್ರೆ, ಇಷ್ಟಕ್ಕೆ ಸುಮ್ಮನಾಗದ ರಮೇಶ್​, ಹಲ್ಲೆ ವಿಚಾರವಾಗಿ ಪ್ರಶ್ನೆ ಮಾಡಲು ರಮೇಶ್ ತನ್ನ ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತೆರಳಿದ್ದಾನೆ.

ಸಂಬಂಧಿಕರ ಮೇಲೆ ಹಲ್ಲೆ ನಡೆದ ನಂತರ ರೊಚ್ಚಿಗೆದ್ದ ರಮೇಶ್​​ ಸಂಬಂಧಿಕರು ಕೆಂಪೇಗೌಡ ಮನೆ ಮೇಲೆ ಕಲ್ಲು ಎಸೆದು ಗಲಾಟೆ ಮಾಡಿದ್ದಾರೆ. ಬಾಗಿಲು ಮುರಿದು, ಕಿಟಕಿ ಗಾಜುಗಳನ್ನ ಪುಡಿ‌ ಪುಡಿ ಮಾಡಿದ್ದಾರೆ. ಸದ್ಯ ಚಂದ್ರಲೇಔಟ್ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಕೆಂಪೇಗೌಡನನ್ನ ಬಂಧಿಸಿದ್ದಾರೆ. ಜತೆಗೆ ಇಬ್ಬರ ಮಧ್ಯೆ ನಡೆದ ಜಗಳದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿ ನಂಬರ್​​ ಕೇಳಿದ್ದಕ್ಕೆ ಸ್ನೇಹಿತನ ಮೇಲೆ ರೌಡಿಯಿಂದ ಹಲ್ಲೆ ಕೇಸ್​ಗೆ ಟ್ವಿಸ್ಟ್​​.. ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/09/Wife-number-case.jpg

Load More