newsfirstkannada.com

ಧೋನಿ ನೆನಪಿಸಿದ ಕೆ.ಎಲ್.ರಾಹುಲ್ ನಡೆ.. ಆದರೆ ಒಂದು ವಿಚಾರದಲ್ಲಿ ಪಳಗಬೇಕಷ್ಟೇ..! ಏನದು..?

Share :

14-09-2023

    ಮಹೇಂದ್ರ ಸಿಂಗ್ ಧೋನಿಯನ್ನ ನೆನಪಿಸಿದ್ದೇಕೆ ಕೆ.ಎಲ್.ರಾಹುಲ್?

    ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ ಟೆನ್ಶನ್ ಫ್ರೀ!

    ಏಷ್ಯಾಕಪ್​ ಆರಂಭಕ್ಕೂ ಮುನ್ನ, ನಂತರವೂ ರಾಹುಲ್ ಟ್ರೆಂಡ್

ಏಷ್ಯಾಕಪ್​ ಆರಂಭಕ್ಕೂ ಮುನ್ನ.. ಆರಂಭದ ನಂತ್ರ ಟ್ರೆಡಿಂಗ್​ನಲ್ಲಿರೋ ಹೆಸರೇ ಕೆ.ಎಲ್.ರಾಹುಲ್.. ಆದ್ರೀಗ ಈ ಕೆ.ಎಲ್.ರಾಹುಲ್, ದಿಗ್ಗಜ ಮಾಹಿಯನ್ನೇ ನೆನಪಿಸಿದ್ದಾರೆ.

ವಿಕೆಟ್ ಕೀಪಿಂಗ್​.. ಕ್ರಿಕೆಟ್​ನಲ್ಲಿ ಈ ಸ್ಥಾನಕ್ಕಿರುವ ಮಹತ್ವನೇ ಬೇರೆ.. ಪಂದ್ಯದಲ್ಲಿ ಕ್ಷಣಕ್ಷಣಕ್ಕೂ ಟ್ವಿಸ್ಟ್ ನೀಡುವ ಇವರು, ನಿಜಕ್ಕೂ ಮ್ಯಾಚ್​ ವಿನ್ನರ್​ಗಳು. ಬ್ಯಾಟಿಂಗ್ ಮಾಡದಿರಲಿ, ಬೌಲಿಂಗ್​​​​​​ ಮಾಡದಿಲಿ, ವಿಕೆಟ್ ಕೀಪಿಂಗ್ ಸ್ಕಿಲ್ಸ್​ನಿಂದಲೇ ಮ್ಯಾಚ್ ಗೆಲ್ಲಿಸಿಕೊಡುವ ಚಾಕಚಕ್ಯತೆ ಇರೋದು ವಿಕೆಟ್ಸ್​ ಕೀಪರ್​​​​ಗಳಿಗೆ ಮಾತ್ರ. ಹೀಗಾಗೇ ವಿಕೆಟ್​ ಕೀಪರ್​ಗಳು ಎಷ್ಟೇ ಮಂದಿ ಟೀಮ್ ಇಂಡಿಯಾವನ್ನು ಪ್ರತಿನಿದಿಸಿದ್ರೂ ನಮ್ಮ ಕಣ್ಮುಂದೆ ಬರೋ ಮೊದಲ ಹೆಸರು ಮಹೇಂದ್ರ ಸಿಂಗ್ ಧೋನಿ.

ಹೌದು! ಮಹೇಂದ್ರ ಸಿಂಗ್ ಧೋನಿ.. ದಿ ಗ್ರೇಟ್​ ವಿಕೆಟ್ ಕೀಪರ್, ವಿಕೆಟ್ ಹಿಂದೆ ಗ್ಯಾಂಬ್ಲಿಮ್ ಮಾಡೋ ಮಾಹಿ, ಬ್ಯಾಟ್ಸ್​ಮನ್​ಗಳನ್ನು ತಾಳಕ್ಕೆ ತಕ್ಕಂತೆ ಕುಣಿಸೋದ್ರಲ್ಲಿ ನಿಜಕ್ಕೂ ಪಂಟರ್. ಆದ್ರೆ ಈ ಧೋನಿ ನಿವೃತ್ತಿಯ ಬಳಿಕ ಉತ್ತರಾಧಿಕಾರಿಯಾಗಿ ಯಾರೇ ಬಿಂಬಿಸಿಕೊಂಡರು. ಧೋನಿಯನ್ನ ನೆನಪಿಸಿದವರು ನಿಜಕ್ಕೂ ಯಾರಿಲ್ಲ. ಆದ್ರೀಗ ಲಂಕಾದಲ್ಲಿ ನಡೆಯುತ್ತಿರೋ ಏಷ್ಯಾಕಪ್​​​​ನಲ್ಲಿ ಸೂಪರ್​-4 ಮ್ಯಾಚ್​ನಲ್ಲಿ ಮಿಸ್ಟರ್​ ಮಾಹಿಯನ್ನ ನೆನಪಿಸಿದ್ದಾರೆ. ಅಷ್ಟಕ್ಕೂ ಮಾಹಿಯನ್ನು ನೆನಪಿಸಿದ್ದು ಬೇಱರೂ ಅಲ್ಲ. ಕನ್ನಡಿಗ ಕೆ.ಎಲ್.ರಾಹುಲ್.

ಬೌಲರ್​ಗಳಿಗೆ ಟಿಪ್ಸ್​.. ವಿಕೆಟ್​​​​​​​ ಬೇಟೆ ಫಿಕ್ಸ್​..!

ವಿಕೆಟ್ ಕೀಪಿಂಗ್ ಮಾಡೋ ಆಟಗಾರನ ಮೈಯೆಲ್ಲ ಕಣ್ಣಾಗಿರಬೇಕು. ವಿಕೆಟ್​ ಹಿಂದೆ ಗೇಮ್ ರೀಡ್ ಮಾಡ್ತಾ, ಫೀಲ್ಡಿಂಗ್ ಸೆಟ್​ ಮಾಡೋದ್ರ ಜೊತೆ ಜೊತೆಗೆ ಬೌಲರ್​ಗೆ ಇನ್​ಫುಟ್ಸ್​ ನೀಡಬೇಕು. ಈ ವಿಚಾರದಲ್ಲಿ ಮಾಹಿಗೆ ಮಾಹಿಯೇ ಸರಿಸಾಟಿ. ಪಾಕ್ ಹಾಗೂ ಲಂಕಾ ವಿರುದ್ಧ ಮ್ಯಾಚ್​ನಲ್ಲಿ ಕೆ.ಎಲ್.ರಾಹುಲ್, ಧೋನಿಯನ್ನೇ ನೆನಪಿಸಿದ್ದು ಸುಳ್ಳಲ್ಲ. ಅದರಲ್ಲೂ ಬೌಲರ್​ಗೆ ಇನ್​ಫುಟ್ಸ್​ ನೀಡುತ್ತ ಮಹತ್ವದ ಜೊತೆಯಾಟಗಳಿಗೆ ಬ್ರೇಕ್ ಥ್ರೂ ನೀಡಿದ್ರು.

ನಂಬರ್ 1: ಪಾಕ್ ಎದುರಿನ ಪಂದ್ಯದಲ್ಲಿ ರಾಹುಲ್ ಟಿಪ್ಸ್

ಪಾಕ್ ವಿರುದ್ಧ ಕೆ.ಎಲ್​, ಕೇವಲ ಬ್ಯಾಟಿಂಗ್​ನಿಂದ ಮಾತ್ರವೇ ಅಲ್ಲ. ತನ್ನ ವಿಕೆಟ್ ಕೀಪಿಂಗ್ ಸ್ಕಿಲ್ಸ್​ನಿಂದಲೂ ಗಮನ ಸೆಳೆದ್ರು. ಅದು 28ನೇ ಓವರ್​.. ಈ ಓವರ್​ನ 2ನೇ ಎಸೆತ ಸಿಂಗಲ್ ತೆಗೆದಿದ್ದ ಶಾದಾಬ್, 4ನೇ ಎಸೆದಲ್ಲಿ ಮತ್ತೆ ಸ್ಟ್ರೈಕ್​​​​ಗೆ ಆಗಮಿಸಿದ್ರು. ಈ ವೇಳೆ ಕುಲ್​ದೀಪ್​ಗೆ ಇನ್​ಪುಟ್ಸ್​ ಕೊಟ್ಟ ರಾಹುಲ್, ಶಾದಾಬ್ ವಿಕೆಟ್ ಬೇಟೆಗೆ ನೆರವಾದ್ರು.

ನಂಬರ್​​ 2: ಲಂಕಾ ಎದುರು ಕುಲ್​​ದೀಪ್​ಗೆ ಟಿಪ್ಸ್

ಇದು ಪಾಕ್ ಪಂದ್ಯದಲ್ಲಿ ಅಷ್ಟೇ ಅಲ್ಲ. ಲಂಕಾ ಎದುರಿನ ಪಂದ್ಯದಲ್ಲೂ ಮುಂದುವರಿಯಿತು. 4ನೇ ವಿಕೆಟ್​ಗೆ ಜೊತೆಯಾಗಿದ್ದ ಸಮರವಿಕ್ರಮ ಹಾಗೂ ಅಸಲಂಕಾ ಅರ್ಧಶತಕದ ಜೊತೆಯಾಟದ್ದ ಮುನ್ನುಗ್ಗುತ್ತಿದ್ದರು. ಈ ವೇಳೆ ಕ್ರೀನ್​ನಲ್ಲಿ ನೆಲೆಯೂರಿದ್ದ ಸಮರವಿಕ್ರಮಗೆ ಖೆಡ್ಡಾ ತೋಡಿದ್ದೆ ಕೆ.ಎಲ್.ರಾಹುಲ್.

ರಾಹುಲ್​​​​​​​​​​​​​​​​​​ ಮಾತು ಕೇಳದೆ DRS ಕೈಚೆಲ್ಲಿದ್ದ ರೋಹಿತ್

ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ, ಎರಡು ರಿವ್ಯೂವ್​ ಕೈಚೆಲ್ಲಿತ್ತು. ಲಂಕಾ ಪಂದ್ಯದಲ್ಲೂ ಇದು ರಿಪೀಟ್ ಆಯ್ತು. ಕೆ.ಎಲ್.ರಾಹುಲ್​​ ಮಾತು ಕೇಳದೆ, ನಾಯಕ ತೆಗೆದುಕೊಂಡ ಆತುರ ನಿರ್ಧಾರದಿಂದ ಡಿಆರ್​ಎಸ್​ ವ್ಯರ್ಥವಾಯ್ತು. ವಿಕೆಟ್ ಹಿಂದಿನಿಂದಲೇ ಗೇಮ್ ರೀಡ್ ಮಾಡ್ತಿದ್ದ ಕೆ.ಎಲ್.ರಾಹುಲ್, ಫೀಲ್ಡಿಂಗ್ ಪ್ಲೇಸ್​ಮೆಂಟ್​ನಲ್ಲಿ ರೋಹಿತ್ ನೆರವಿಗೆ ನಿಂತಿದ್ದರು. ವಿಕೆಟ್ ಹಿಂದೆ ಫುಲ್ ಆ್ಯಕ್ಟೀವ್ ಆಗಿದ್ದ ರಾಹುಲ್, ಹಿಡಿದ ಎರಡು ಅದ್ಭುತ ಕ್ಯಾಚ್​ಗಳ ಜೊತೆಗೆ ಒಂದು ಸ್ಟಂಪಿಂಗ್ ಮೆರೆಯುವಂತೆಯೇ ಇಲ್ಲ. ಈ ಎಲ್ಲ ಅಂಶಗಳೇ ಮಹೇಂದ್ರ ಸಿಂಗ್ ಧೋನಿಯನ್ನ ನೆನಪಿಸಲು ಪ್ರಮುಖ ಕಾರಣ. ಇದನ್ನ ಜಸ್ಟ್​ ನಾವ್​ ಹೇಳ್ತಿರೋ ಮಾತಲ್ಲ. ಕ್ರಿಕೆಟ್ ಅಭಿಮಾನಿಗಳೇ ಹೇಳ್ತಿರುವ ಮಾತು.

ರಾಹುಲ್​​ನಿಂದ ಮ್ಯಾನೇಜ್​ಮೆಂಟ್​ ಟೆನ್ಶನ್ ರಿಲೀಫ್

ಮೆಗಾ ಟೂರ್ನಿಗಳಲ್ಲಿ ವಿಕೆಟ್ ಕೀಪರ್​​ನ ರೋಲ್ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡುತ್ತದೆ. ಹೀಗಾಗಿ ಈ ಬಾರಿಯ ಏಕದಿನ ವಿಶ್ವಕಪ್​ನಲ್ಲಿ ಚಾಣಾಕ್ಷ ವಿಕೆಟ್ ಕೀಪರ್​ನ ಕೊರತೆ ಟೀಮ್ ಇಂಡಿಯಾಗೆ ಕಾಡಲಿದೆ ಅನ್ನೋ ಮಾತಿತ್ತು. ಆದ್ರೀಗ ಕೆ.ಎಲ್.ರಾಹುಲ್​ರ, ಚಾಕಚಕ್ಯತೆ ನೋಡಿದ್ಮೇಲೆ ವಿಶ್ವಕಪ್​ನಲ್ಲಿ ಮೇನ್ ರೋಲ್ ಪ್ಲೇ ಮಾಡೋದ್ರಲ್ಲಿ ಅನುಮಾನ ಇಲ್ಲ. ವಿಶ್ವಕಪ್​​ಗೂ ಮುನ್ನ ಕೆ.ಎಲ್.ರಾಹುಲ್, ವಿಕೆಟ್ ಹಿಂದೆ ಮತ್ತಷ್ಟು ಪಳಗಬೇಕಿದೆ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಒಟ್ನಲ್ಲಿ, ಕೆ.ಎಲ್.ರಾಹುಲ್ ಸ್ಪೆಷಲಿಸ್ಟ್ ವಿಕೆಟ್ ಕೀಪರ್ ಅಲ್ಲದಿದ್ರೂ, ತಮ್ಮ ಅನುಭವ ಟೀಮ್ ಇಂಡಿಯಾ ಗೆಲುವಿಗೆ ಧಾರೆ ಎಳೆಯುತ್ತಾ, ಟೀಮ್ ಮ್ಯಾನ್ ಆಗಿ ಗುರುತಿಸಿಕೊಂಡಿರೋದಂತು ಸತ್ಯ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಧೋನಿ ನೆನಪಿಸಿದ ಕೆ.ಎಲ್.ರಾಹುಲ್ ನಡೆ.. ಆದರೆ ಒಂದು ವಿಚಾರದಲ್ಲಿ ಪಳಗಬೇಕಷ್ಟೇ..! ಏನದು..?

https://newsfirstlive.com/wp-content/uploads/2023/09/MSDHONI-1.jpg

Load More