newsfirstkannada.com

ರಾಜ್ಯದಲ್ಲಿ ಘೋರ ದುರಂತ.. ಆಟ ಆಡಲು ಹೋಗಿದ್ದ 5 ವರ್ಷದ ಇಬ್ಬರು ಮಕ್ಕಳು ಶವವಾಗಿ ಪತ್ತೆ!

Share :

Published June 27, 2024 at 10:53pm

  ಬೆಳಗ್ಗೆ ಆಟ ಆಡಲು ತೆರಳಿದ್ದ ಇಬ್ಬರು ಬಾಲಕರು ದಿಢೀರ್ ನಾಪತ್ತೆ!

  ಶಾಲೆಯಿಂದ ವಾಪಸ್ ಬಾರದೆ ಇದ್ದಾಗ ಕುಟುಂಬಸ್ಥರಿಂದ ಹುಡುಕಾಟ

  ಬಾಲಕ ಆಟ ಆಡಲು ಬಳಸುತ್ತಿದ್ದ ಟೈಯರ್ ಗಾಲಿ ಸಿಕ್ಕ ಮೇಲೆ ಅನುಮಾನ

ಕಲಬುರಗಿ: ಆಟ ಆಡಲು ತೆರಳಿದ್ದ ಇಬ್ಬರು ಬಾಲಕರು ಕಲ್ಲು ಗಣಿಯ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ನಡೆದಿದೆ. ರಾವೂರ್ ಗ್ರಾಮದ ಭುವನ್ (5), ದೇವು (6) ಮೃತ ಬಾಲಕರು.

ಭುವನ್ ಹಾಗೂ ದೇವು ರಾವೂರ್ ಗ್ರಾಮದ ವಿವೇಕಾನಂದ ಶಿಶುವಿಹಾರ ಶಾಲೆಯಲ್ಲಿ ಓದುತ್ತಿದ್ದರು. ಇಂದು ಬೆಳಗ್ಗೆ ಆಟ ಆಡಲು ಇಬ್ಬರು ಬಾಲಕರು ಶಾಲೆಯಿಂದ ತೆರಳಿದ್ದರು. ಬಹಳ ಹೊತ್ತು ಆದರೂ ವಾಪಸ್ ಬಾರದೆ ಇದ್ದಾಗ ಕುಟುಂಬಸ್ಥರು ಹುಡುಕಲು ಆರಂಭಿಸಿದ್ದಾರೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್‌ಗೆ ₹40 ಲಕ್ಷ ಕೊಟ್ಟ ರಹಸ್ಯ.. ಪೊಲೀಸರಿಗೆ ಮಹತ್ವದ ಸುಳಿವು; ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್! 

ರಾವೂರ್ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಹತ್ತಿರದಲ್ಲೇ ಕಲ್ಲು ಗಣಿಯ ಹೊಂಡವಿತ್ತು. ಹೊಂಡದ ಪಕ್ಕವೇ ಬಾಲಕನ ಬಟ್ಟೆ ಹಾಗೂ ಆಟ ಆಡಲು ಬಳಸುತ್ತಿದ್ದ ಟೈಯರ್ ಗಾಲಿ ಪತ್ತೆಯಾಗಿದೆ. ಅನುಮಾನಗೊಂಡು ಹುಡುಕಲು ಆರಂಭಿಸಿದ್ದಾಗ ಇಬ್ಬರು ಬಾಲಕರು ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ.

ರಾವೂರ್ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಹತ್ತಿರದಲ್ಲೇ ಕಲ್ಲು ಗಣಿಯ ಹೊಂಡದಲ್ಲಿ ಇಬ್ಬರು ಬಾಲಕ ಶವಗಳು ಪತ್ತೆಯಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಘೋರ ದುರಂತ.. ಆಟ ಆಡಲು ಹೋಗಿದ್ದ 5 ವರ್ಷದ ಇಬ್ಬರು ಮಕ್ಕಳು ಶವವಾಗಿ ಪತ್ತೆ!

https://newsfirstlive.com/wp-content/uploads/2024/06/Kalburgi-Boy-Death.jpg

Load More