ಟೊಮ್ಯಾಟೋ ತುಂಬಿದ್ದ ಗೂಡ್ಸ್ ವಾಹನ ಕದ್ದೊಯ್ದಿದ್ದ ದಂಪತಿ
ಬೆಂಗಳೂರಿನಲ್ಲಿ ಟೊಮ್ಯಾಟೋ ತುಂಬಿದ್ದ ವಾಹನ ಕಳ್ಳತನ ಕೇಸ್
ಶತಕ ಬಾರಿಸಿ ಮುಂದೆ ಹೋಗುತ್ತಿರೋ ಕೆಂಪು ಸುಂದರಿಯ ಕಳ್ಳತನ
ಬೆಂಗಳೂರು: ಟೊಮ್ಯಾಟೋ ಬೆಲೆ ಜಾಸ್ತಿಯಾದ್ರೂ ಅದನ್ನು ಖದೀಯುವವರ ಸಂಖ್ಯೆಯಲ್ಲಿ ಯಾವುದೇ ಏರಿಳಿತವಾಗಿಲ್ಲ. ಆದರೆ ಕೆಲವರು ಕಳ್ಳ ಮಾರ್ಗಗಳಲ್ಲಿ ಕೆಂಪು ಸುಂದರಿ ಹಿಂದೆ ಬಿದ್ದಿದ್ದಾರೆ. ಇದೇ ರೀತಿಯಾಗಿ ಇಡೀ ಟೊಮ್ಯಾಟೋ ಗಾಡಿಯನ್ನೆ ಹೈಜಾಕ್ ಮಾಡಿಕೊಂಡು ಹೋಗಿದ್ದ ಆ ಖತರ್ನಾಕ್ ಗ್ಯಾಂಗ್ ಅನ್ನು ಇದೀಗ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ.
ಕೇವಲ 12 ದಿನದ ಹಿಂದಷ್ಟೇ ಸಿಲಿಕಾನ್ ಸಿಟಿ ಒಂದು ಘಟನೆಗೆ ಸಾಕ್ಷಿಯಾಗಿತ್ತು. ಶತಕ ಬಾರಿಸಿ ಮುಂದೆ ಹೋಗುತ್ತಿರೋ ಕೆಂಪು ಸುಂದರಿ ಟೊಮ್ಯಾಟೋ ಇದ್ದ ವಾಹನವೊಂದನ್ನ ಕಿಡಿಗೇಡಿಗಳು ಕದ್ದು ಎಸ್ಕೇಪ್ ಆಗಿದ್ದರು. ಈ ಬಗ್ಗೆ ಟೊಮ್ಯಾಟೋ ಬೆಳೆದ ರೈತ ಮತ್ತು ವಾಹನದ ಚಾಲಕ ಆರ್ಎಮ್ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಅದ್ರಂತೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಧುಜಾ, ಭಾಸ್ಕರ್ ಎನ್ನುವರು ಬಂಧಿತ ಆರೋಪಿಗಳು.
ಈ ಇಬ್ಬರು ಮೇಡ್ ಫಾರ್ ಈಚ್ ಅದರ್. ಜೊತೆಯಲ್ಲಿ 7 ಹೆಜ್ಜೆ ಇಟ್ಟ ಇವರು ಕಳ್ಳತನವನ್ನೂ ಒಟ್ಟಿಗೆ ಮಾಡಿದ್ದಾರೆ. ಸೀಸನ್ಗೆ ತಕ್ಕಂತೆ ಇವರು ತಮ್ಮ ಕಳ್ಳತನವನ್ನು ಪ್ಲ್ಯಾನ್ ಮಾಡ್ತಾರೆ. ಅದ್ರಂತೆ ಈ ಟೊಮ್ಯಾಟೋ ತುಂಬಿದ್ದ ವಾಹನವನ್ನ ಪ್ಲಾನ್ ಅಂತೆ ಆ್ಯಕ್ಸಿಡೆಂಟ್ ಮಾಡಿ ಜಗಳ ತೆಗೆದು ಎತ್ಕೊಂಡು ಎಸ್ಕೇಪ್ ಆಗಿದ್ದ ಕಿಲಾಡಿ ಜೋಡಿ ಇವರು. ತಲೆ ಮರೆಸಿಕೊಂಡಿರೋ ರಾಕಿ, ಕುಮಾರ್, ಮಹೇಶ್ ಜೊತೆಗೆ ಈ ದಂಪತಿ ವಾಹನವನ್ನ ಹೈಜಾಕ್ ಮಾಡಿ ಚೆನ್ನೈ ಕಡೆ ಪ್ರಯಾಣ ಬೆಳೆಸ್ತಾರೆ. ಬಳಿಕ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೋವನ್ನ ಅಲ್ಲಿನ ಮಾರ್ಕೆಟ್ನಲ್ಲಿ ಮಾರಾಟ ಮಾಡಿ ವಾಹನವನ್ನ ವಾಪಸ್ ಬೆಂಗಳೂರಿಗೆ ತಂದು ಬಿಟ್ಟಿದ್ದಾರೆ.
ಸುಳಿವೇ ಇಲ್ಲದಂತೆ 2 ರಾಜ್ಯಗಳಲ್ಲಿ ಓಡಾಡಿದ್ದ ಈ ಕಿಲಾಡಿಗಳ ಸುಳಿವನ್ನ ಸಿಸಿಟಿವಿ ಕೊಟ್ಟಿತ್ತು. ಒಂದಲ್ಲ ಎರಡಲ್ಲ ನೂರಾರು ಸಿಸಿಟಿವಿಗಳನ್ನ ಜಾಲಾಡಿದ್ದ ಆರ್ಎಮ್ಸಿ ಯಾರ್ಡ್ ಪೊಲೀಸರು ಕೊನೆಗೂ ಆರೋಪಿಗಳಲ್ಲಿ ಇಬ್ಬರನ್ನ ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು ಶೀಘ್ರದಲ್ಲೇ ಅವರ ಹೆಡೆಮುರಿ ಕಟ್ಟೋದಾಗಿ ಪೊಲೀಸರು ತಿಳಿಸಿದ್ದಾರೆ. ಟೊಮ್ಯಾಟೋ ಬೆಲೆ ಹೆಚ್ಚಳವಾಗಿರೋದು ಟೊಮ್ಯಾಟೋ ಬೆಳೆದ ರೈತನಿಗೆ ಸಂತಸ ತಂದಿದ್ದರು. ಕಷ್ಟ ಪಟ್ಟು ಬೆಳೆದ ಬೆಳೆ ಕಳ್ಳರ ಕೈಗೆ ಸಿಗದಂತೆ ಕಾಯೋದು ದೊಡ್ಡ ಸಾಹಸವಾಗಿರೋದಂತೂ ಸತ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ