newsfirstkannada.com

ರಾತ್ರಿಯಾಗ್ತಿದ್ದಂತೆ ಫೀಲ್ಡ್‌ಗೆ ಇಳಿಯುತ್ತಿದ್ದ ಖದೀಮರು.. ಲಾಂಗು, ಮಚ್ಚು ತೋರಿಸಿ ದರೋಡೆ; ಸತ್ಯ ಬಯಲಾಗಿದ್ದೇಗೆ?

Share :

12-11-2023

    ರಸ್ತೆಯಲ್ಲಿ ರಾಜಾರೋಷವಾಗಿ ವ್ಯಕ್ತಿಯೊಬ್ಬನನ್ನ ದೋಚಿದ ಕಳ್ಳರು

    ಮೊಬೈಲ್​ ಕದ್ದ ಕೇಸ್‌ನಲ್ಲಿ ಪೊಲೀಸರ ಬಲೆಗೆ ಬಿದ್ದ ಕಿರಾತಕರು ಇವ್ರು

    ರಸ್ತೆಯಲ್ಲಿ ಒಂಟಿಯಾಗಿ ಓಡಾಡೋರನ್ನೇ ಟಾರ್ಗೆಟ್ ಮಾಡಿ ದರೋಡೆ

ಮೊಬೈಲ್​ ಕದ್ದು ಎಸ್ಕೇಪ್​ ಆಗ್ತಿದ್ದ ಆರೋಪಿಗಳನ್ನ ಹಿಡಿದ ಪೊಲೀಸರಿಗೆ ಶಾಕ್​ ಕಾದಿತ್ತು. ಬಗೆದಷ್ಟು ಆರೋಪಿಗಳ ಭಯಾನಕ ಕ್ರೈಂ ಸ್ಟೋರಿ ರಿವೀಲ್​ ಆಗಿದೆ. ದ್ವಿಚಕ್ರ ವಾಹನದಲ್ಲಿ ಎಂಟ್ರಿಯಾಗಿದ್ದ ಖದೀಮರು ನೋಡ ನೋಡ್ತಿದ್ದಂತೆ ಎದುರಿಗೆ ಬಂದ ವ್ಯಕ್ತಿ ಮೇಲೆ ಅಟ್ಯಾಕ್ ಮಾಡಿ ಲಾಂಗು, ಮಚ್ಚು ತೋರಿಸಿ ದರೋಡೆ ಮಾಡಿದ್ದರು.

ಬಳಿಕ ಎಸ್ಕೇಪ್​​ ಆಗಿದ್ದರು. ಈ ಘಟನೆಯು ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಕಳೆದ ಅಕ್ಟೋಬರ್‌ 17ರಂದು ನಡೆದಿರೋ ದರೋಡೆಯಾಗಿದೆ. ನಡುರಸ್ತೆಯಲ್ಲಿ ರಾಜಾರೋಶವಾಗಿ ವ್ಯಕ್ತಿಯೊಬ್ಬನನ್ನ ದೋಚಿದ ಆ ಖತರ್ನಾಕ್‌ಗಳು ಯಾರು?

ಕೈಗೆ ಕೋಳ ಹಾಕಿ ಖದೀಮರಲ್ಲಿ ಒಬ್ಬಾತ ಮೊಹಮದ್ ಜಬಿ ಅಲಿಯಾಸ್​​ ಕಾಲು. ಮತ್ತೊಬ್ಬ ಶೇಖ್ ಜುನೈದ್. ಮೊಬೈಲ್​ ಕದ್ದ ಕೇಸ್‌ನಲ್ಲಿ ಹಲಸೂರು ಪೊಲೀಸರ ಬಲೆಗೆ ಬಿದ್ದ ಈ ಕಿರಾತಕರನ್ನ ತೀವ್ರ ವಿಚಾರಣೆಗೆ ಒಳಪಡಿಸಿದಾಗ್ಲೇ ಇವರು ಬೇರೆ ಬೇರೆ ಕಡೆ ತೋರಿಸಿರೋ ಕರಾಮತ್ತು ಸದ್ಯ ಬಯಲಾಗಿದೆ.

ವಿಚಾರಣೆ ವೇಳೆ ಮೊಹಮದ್‌ ಜಬಿ ಮತ್ತು ಶೇಖ್ ಜುನೈಜ್‌ ವಿರುದ್ಧ ಕೋರಮಂಗಲ, ರಾಮಮೂರ್ತಿ ನಗರ, ಹಲಸೂರು ಸೇರಿ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿರೋದು ಪತ್ತೆಯಾಗಿದೆ. ರಾತ್ರಿಯಾಗ್ತಿದ್ದಂತೆ ಫೀಲ್ಡ್‌ಗಿಳೀತಿದ್ದ ಖದೀಮರು ಒಂಟಿಯಾಗಿ ಓಡಾಡೋರನ್ನ ಟಾರ್ಗೆಟ್ ಮಾಡಿ ಲಾಂಗು, ಮಚ್ಚು ತೋರಿಸಿ ದರೋಡೆ ಮಾಡ್ತಿದ್ರು. ಸದ್ಯ ಹಲಸೂರು ಪೊಲೀಸರು ವಿಚಾರಣೆ ಮುಗಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು ಬಾಡಿ ವಾರೆಂಟ್​​ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿರೋ ರಾಮಮೂರ್ತಿ ನಗರ ಪೊಲೀಸರು ಆರೋಪಿಗಳ ಮೇಲೆ ಪೂರ್ವ ವಿಭಾಗದ 2 ಠಾಣೆಗಳಲ್ಲಿ ರೌಡಿಶೀಟ್ ತೆರೆಯಲು ಸಿದ್ಧತೆ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾತ್ರಿಯಾಗ್ತಿದ್ದಂತೆ ಫೀಲ್ಡ್‌ಗೆ ಇಳಿಯುತ್ತಿದ್ದ ಖದೀಮರು.. ಲಾಂಗು, ಮಚ್ಚು ತೋರಿಸಿ ದರೋಡೆ; ಸತ್ಯ ಬಯಲಾಗಿದ್ದೇಗೆ?

https://newsfirstlive.com/wp-content/uploads/2023/11/BNG_ACCUSED.jpg

Load More