newsfirstkannada.com

ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಪ್ರಕರಣಕ್ಕೆ ಟ್ವಿಸ್ಟ್​; ಇಬ್ಬರು ಕೃಷಿ ಅಧಿಕಾರಿಗಳು ವಶಕ್ಕೆ..!

Share :

20-08-2023

  ಮೈಸೂರು ಸರಸ್ವತಿಪುರಂ ಅಂಚೆ ಕಚೇರಿಯಿಂದ ಗವರ್ನರ್​ಗೆ ಪೋಸ್ಟ್

  7 ಸಹಾಯಕ ಕೃಷಿ ನಿರ್ದೇಶಕರ ಹೆಸರಿನಲ್ಲಿ ರಾಜ್ಯಪಾಲರಿಗೆ ಪತ್ರ

  ‘ಲಂಚದ ಒತ್ತಡ ಇತ್ತಾ? ಕುಮ್ಮಕ್ಕಿನಿಂದ ಪತ್ರ ಬರೆದ್ರಾ?’ ಎಂದು ತನಿಖೆ

ಮಂಡ್ಯ: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎನ್ನಲಾಗುತ್ತಿರುವ ಅಧಿಕಾರಿಗಳನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ. ಮೈಸೂರು ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದರು ಎನ್ನಲಾಗಿತ್ತು.
ಸಹಾಯಕ ಕೃಷಿ ನಿರ್ದೇಶಕ ಹಾಗೂ ಕೃಷಿ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಂಡ್ಯದ 7 ಸಹಾಯಕ ಕೃಷಿ ನಿರ್ದೇಶಕರ ಹೆಸರಿನಲ್ಲಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು ಎನ್ನಲಾಗಿತ್ತು.

ಪತ್ರ ಬರೆದು ಮೈಸೂರಿನ ಸರಸ್ವತಿಪುರಂ ಅಂಚೆ ಕಚೇರಿಯಿಂದ ರಾಜ್ಯಪಾಲರಿಗೆ ಪೋಸ್ಟ್ ಹೋಗಿತ್ತು. ಪತ್ರ ಬರೆಯಲು ಕಾರಣವೇನು ಎಂಬುವುದರ ಬಗ್ಗೆ ವಿಚಾರಣೆ ಮಾಡಲಿದ್ದಾರೆ. ಸಿಐಡಿ ವಶದಲ್ಲಿರುವ ಎಡಿ, ಎಓಗೆ ಲಂಚದ ಒತ್ತಡ ಇತ್ತಾ? ಅಥವಾ ಬೇರೆಯವರ ಕುಮ್ಮಕ್ಕಿನಿಂದ ಪತ್ರ ಬರೆದಿದ್ದಾರಾ ಎಂದು ತನಿಖಾಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಪ್ರಕರಣಕ್ಕೆ ಟ್ವಿಸ್ಟ್​; ಇಬ್ಬರು ಕೃಷಿ ಅಧಿಕಾರಿಗಳು ವಶಕ್ಕೆ..!

https://newsfirstlive.com/wp-content/uploads/2023/08/CHALUVARAYSWAMY.jpg

Load More