ರೋಡ್ ಸೈಡ್ ಪಾರ್ಕ್ ಮಾಡೋ ಬೈಕ್ ಇವರ ಟಾರ್ಗೆಟ್
ಕದ್ದ ಬೈಕ್ನಲ್ಲಿ ವ್ಹೀಲಿಂಗ್ ಮಾಡಿ ಫೇಮಸ್ಸಾಗೋ ಖಯಾಲಿ
ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಕಂಬಿ ಎಣಿಸುತ್ತಿರೋ ಕಳ್ಳರು
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆ ಎಷ್ಟೇ ಕಠಿಣ ಕ್ರಮ ತೆಗೆದುಕೊಂಡ್ರೂ ವಾಹನ ಸವಾರರು ಅಡ್ಡಾದಿಡಿ ಡ್ರೈವಿಂಗ್ ಮಾಡುತ್ತಾರೆ. ಅದರಲ್ಲೂ ಯುವಕರಲ್ಲಿ ವ್ಹೀಲಿಂಗ್ ಮಾಡೋ ಕ್ರೇಜ್ ಹೆಚ್ಚಿದೆ. ಖಾಲಿ ರಸ್ತೆಗಳನ್ನು ಬಿಡಿ ಜನಸಂದಣಿ ಇರೋ ಪ್ರದೇಶದಲ್ಲೇ ಬೈಕ್ ವ್ಹೀಲಿಂಗ್ ಮಾಡೋ ಖಯಾಲಿ ಕೆಲವರದ್ದು. ಹೀಗೆ ಕದ್ದಿರೋ ಬೈಕ್ನಲ್ಲಿ ವ್ವೀಲಿಂಗ್ ಮಾಡಿದ್ದ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಯಮಹಾ RX 100 ಕದ್ದು ನಡು ರಸ್ತೆಯಲ್ಲೇ ವ್ಹೀಲಿಂಗ್ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಿಡಿಗೇಡಿಗಳು ರಿತಿಕ್ ಮತ್ತು ಪವನ್ ಎಂಬುವರು. ಇಬ್ಬರು ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಹಾಗೆಯೇ ಪೊಲೀಸ್ ವಿಚಾರಣೆ ವೇಳೆ ಯಮಹಾ RX ಕದ್ದಿದ್ದು ಹೇಗೆ? ಎಂಬ ಬಗ್ಗೆ ಬಾಯಿಬಿಟ್ಟಿದ್ದಾರೆ.
ಬೈಕ್ ಹೇಗೆ ಕದಿಯುತ್ತಾರೆ ಗೊತ್ತಾ..?
ಇವರು ಯಾವಾಗಲೂ ರಸ್ತೆ ಬದಿಯಲ್ಲಿ ನಿಲ್ಲಿಸೋ ಯಮಹಾ RX 100 ಬೈಕ್ ಟಾರ್ಗೆಟ್ ಮಾಡುತ್ತಾರೆ. ಬೈಕ್ ಸಿಕ್ಕ ಕೂಡಲೇ ಹ್ಯಾಂಡ್ ಲಾಕ್ ಮುರಿದು ಕದ್ದು ಎಸ್ಕೇಪ್ ಆಗುತ್ತಾರೆ. ಬಳಿಕ ಸ್ಟಂಟ್ ಮಾಡುವುದು, ವ್ಹೀಲಿಂಗ್ ಮಾಡುವುದು. ಇದನ್ನು ವಿಡಿಯೋ ಮಾಡಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿ ಫೇಮಸ್ ಆಗುವುದು ಇವರ ಖಯಾಲಿ.
ಸದ್ಯ ಆರೋಪಿಗಳನ್ನು ಬಂಧಿಸಿರೋ ಹೈಗ್ರೌಂಡ್ಸ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜತೆಗೆ ಈ ಬಗ್ಗೆ ಆರೋಪಿಗಳಿಂದ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ