newsfirstkannada.com

ತಾಯಿ ಫೋಟೋ ಸೆಂಟಿಮೆಂಟ್​​ಗಾಗಿ ನಡೀತು ಕೊಲೆ.. ಸಾಲ ಕೊಟ್ಟವನ ಉಸಿರನ್ನೇ ನಿಲ್ಲಿಸಿದ!

Share :

19-09-2023

    ಸಾಲ ಕೊಟ್ಟವನ ಕ್ವಾಟ್ಲೆಗೆ ಉಸಿರನ್ನೇ ನಿಲ್ಲಿಸಿದವ ಅರೆಸ್ಟ್​

    ವಾಪಸ್​​ ಕೊಡೋದು ತಡವಾಗಿದ್ದಕ್ಕೆ ಹೀಗಾ ಮಾಡೋದು?

    ತಾಯಿಯ ಪೊಟೋ ಸೆಂಟಿಮೆಂಟ್​​ಗಾಗಿ ನಡೀತು ಕೊಲೆ..!

ಬೆಂಗಳೂರು: ಕೊಟ್ಟಿದ್ದ ಸಾಲ, ತಾಯಿ ಪೊಟೋ ಇವೆರಡು ವಿಚಾರ. ಇದೇ ಎರಡು ವಿಚಾರಕ್ಕೆ ಒಂದು ಜೀವವೇ ಹೋಗಿದೆ. ಅವನ ಆ ಸೆಂಟಿಮೆಂಟ್ ಒಂದು ಪ್ರಾಣವನ್ನೇ ಬಲಿ ಪಡೆದಿದೆ. ಅಷ್ಟಕ್ಕೂ ನಡೆದಿದ್ದೇನೂ ಆರೋಪಿಗಳೇ ಬಂದು ಪೊಲೀಸರಿಗೆ ಶರಣಾಗಿದ್ದೇಕೆ ಅನ್ನೋದರ ಕಂಫ್ಲೀಟ್ ಡಿಟೈಲ್ಸ್ ಇಲ್ಲಿದೆ!

ತಾಯಿಯ ಪೊಟೋ ಸೆಂಟಿಮೆಂಟಿಗಾಗಿ ನಡೆಯಿತು ಕೊಲೆ..!

ಸುಹೈಲ್ ಖಾನ್, ಮುಬಾರಕ್ ಹಾಗೂ ಅಲಿ ಅಕ್ರಂ, ಫಾರೂಕ್​. ಅವರೆಲ್ಲ ಸ್ನೇಹಿತರು. ಯಾವಾಗ ಸ್ನೇಹದ ಮಧ್ಯೆ ಹಣಕಾಸಿನ ವ್ಯವಹಾರ ಬಂತೋ ಅಲ್ಲಿಗೆ ನೋಡಿ ಜಗಳ ಪ್ರಾರಂಭವಾಗಿದ್ದು. ಜಗಳ ಕೊಲೆಯ ಹಂತ ತಲುಪಿದ್ದು.

ಇನ್ನು, ಸುಹೈಲ್​​​.. ಫಾರೂಕ್​ ಬಳಿ ಇಪ್ಪತ್ತು ಸಾವಿರ ರೂಪಾಯಿ ಸಾಲ ಪಡೆದಿದ್ದ. ಸಾಲ ವಾಪಸ್‌ ಕೊಡುವುದು ವಿಳಂಬವಾದಾಗ ಸುಹೈಲ್​ನ ಮೊಬೈಲ್ ಫೋನ್‌ನ್ನ ಫಾರೂಕ್ ಹಾಗೂ ಆತನ ಸ್ನೇಹಿತ ಸದ್ದಾಂ ಕಿತ್ತಿಟ್ಟುಕೊಂಡಿದ್ದರು. ಅಲ್ಲದೇ ‘ನೀನು ಹಣ ಕೊಡದಿದ್ದರೆ ಪೊಲೀಸರಿಗೆ ದೂರು ಕೊಡುತ್ತೇನೆ’ ಎಂದು ಸುಹೈಲ್​ಗೆ ಫಾರೂಕ್ ಎಚ್ಚರಿಕೆ ಕೂಡ ನೀಡಿದ್ದ. ತಾಯಿ ಫೋಟೋ ಇರೋ ಮೊಬೈಲ್​ ಕೊಡುವಂತೆ ಸುಹೈಲ್​ ಮನವಿ ಮಾಡ್ಕೊಂಡ್ರೂ ಕರಗದ ಫಾರೂಕ್​ ಫೋನ್​ನ್ನ ಒಡೆದುಹಾಕಿದ್ದ. ಇದ್ರಿಂದ ನಿನ್ನೆ ಸ್ನೇಹಿತರ ಜೊತೆ ಸೇರಿ ಫಾರೂಕ್​ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ಭಾನುವಾರ ವಾರ್ನಿಂಗ್ ಕೊಡುವ ಸಲುವಾಗಿ ಫಾರೂಕ್​ಗೆ ವಾರ್ನಿ ಕೊಡೋ ಸಲುವಾಗಿ ಸುಹೈಲ್ ಖಾನ್ ಹಾಗೂ ಇತರೆ ಆರೋಪಿಗಳು ಆಟೋದಲ್ಲಿ ಅರ್ಕಾವತಿ ಲೇಔಟಿಗೆ ಕರೆದೊಯ್ದಿದ್ರು. ಆಗ ಕೊಲೆ ಮಾಡಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಹೇಳಿದ್ದಾರೆ.

ಕೇಸ್​ ಹೊರಗೆ ಬಂದಿದ್ದು ಹೇಗೆ..?

ಇನ್ನು ಈ ಕೇಸ್​ ಹೊರಗೆ ಬಂದಿದ್ದು ಹೇಗೆ ಅಂದ್ರೆ ಸುಹೈಲ್ ಮತ್ತಿತರ ಆರೋಪಿಗಳೊಂದಿಗೆ ಫಾರೂಕ್​ ತೆರಳಿದ್ದ ಆಮೇಲೆ ಪತ್ತೆಯಾಗಿಲ್ಲ ಅಂತ ಆತನ ಸಹೋದರ ಶಬ್ಬೀರ್ ಅಹಮದ್ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಕೊಟ್ಟ ಸ್ವಲ್ಪ ಹೊತ್ತಿಗೇ ಆರೋಪಿಗಳೇ ಬಂದು ಪೊಲೀಸರಿಗೆ ಶರಣಾಗಿದ್ದಾರೆ

ಸದ್ಯ ಆರೋಪಿಗಳನ್ನ ಬಂಧಿಸಿರುವ ಸಂಪಿಗೆ ಹಳ್ಳಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಅದೇನೇ ಇರ್ಲಿ ಸಾಲ ಒಂದ್ಕಡೆಯಾದ್ರೆ ತಾಯಿಯ ಫೋಟೋ ಮೇಲಿನ ಸೆಂಟಿಮೆಂಟ್​ ಒಂದು ಕೊಲೆಗೆ ಕಾರಣವಾಗಿದ್ದು ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಯಿ ಫೋಟೋ ಸೆಂಟಿಮೆಂಟ್​​ಗಾಗಿ ನಡೀತು ಕೊಲೆ.. ಸಾಲ ಕೊಟ್ಟವನ ಉಸಿರನ್ನೇ ನಿಲ್ಲಿಸಿದ!

https://newsfirstlive.com/wp-content/uploads/2023/09/Sampigehalli-murder.jpg

Load More