newsfirstkannada.com

BREAKING: ವಿಧಾನಸೌಧದಲ್ಲೇ ಡ್ರೋನ್​ ಹಾರಿಸಿದ ಇಬ್ಬರು ಅರೆಸ್ಟ್​

Share :

29-07-2023

    ವಿಧಾನಸೌಧದಲ್ಲಿ ಮತ್ತೆ ಭದ್ರತಾ ಲೋಪ

    ಡ್ರೋನ್​​​ ಹಾರಿಸಿದ್ದ ಕಿಡಿಗೇಡಿಗಳು ಅರೆಸ್ಟ್​

    ಬಂಧಿತರು ಕೊಟ್ಟ ಕಾರಣವೇನು ಗೊತ್ತಾ..?

ಬೆಂಗಳೂರು: ಇತ್ತೀಚೆಗೆ ಅಪರಿಚಿತ ವ್ಯಕ್ತಿಯೋರ್ವ ಭದ್ರತಾ ಸಿಬ್ಬಂದಿಯನ್ನು ಏಮಾರಿಸಿ ವಿಧಾನಸಭೆ ಸಭಾಂಗಣ ಪ್ರವೇಶಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಭದ್ರತಾ ಲೋಪದಿಂದಲೇ ಈ ಕೃತ್ಯವಾಗಿದೆ ಎಂದು ವಿಧಾನಸೌಧ, ಶಾಸಕರ ಭವನ, ಹೈಕೋರ್ಟ್​ ಸೇರಿ ಎಲ್ಲಾ ಪ್ರದೇಶಗಳಲ್ಲೂ ಅತ್ಯಾಧುನಿಕ ತಂತ್ರಜ್ಞಾನದ ಭದ್ರತಾ ವ್ಯವಸ್ಥೆ ಮಾಡಲಾಗುವುದು ಎಂದು ಸ್ಪೀಕರ್‌ ಯು.ಟಿ ಖಾದರ್‌ ಹೇಳಿದ್ದರು. ಸ್ಪೀಕರ್​ ಹೇಳಿಕೆ ಬೆನ್ನಲ್ಲೇ ಸರ್ಕಾರ ಅಗತ್ಯ ಕ್ರಮವನ್ನು ಕೈಗೊಂಡಿದೆ. ಇನ್ನೂ ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಾಯಕಾರಿ ಘಟನೆ ನಡೆದಿದೆ.

ಹೌದು, ಇಂದು ವಿಧಾನಸೌಧದಲ್ಲಿ ಡ್ರೋನ್​ ಹಾರಿಸಿ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಈ ಕೂಡಲೇ ಇಬ್ಬರನ್ನು ಪೊಲೀಸರು ಬಂಧಿಸಿ ನಂತರ ವಾರ್ನ್​ ಮಾಡಿ ಬಿಡುಗಡೆ ಮಾಡಿದ್ದಾರೆ.

ಈ ಸಂಬಂಧ ಮಾತಾಡಿದ ವಿಧಾನಸೌಧ ಠಾಣೆ ಪೊಲೀಸ್​ ಅಧಿಕಾರಿಗಳು, ಡ್ರೋನ್​ ಹಾರಿಸಲು ನಿರ್ಬಂಧ ಇದೆ ಎಂಬ ವಿಚಾರ ಆರೋಪಿಗಳಿಗೆ ಗೊತ್ತಿರಲಿಲ್ಲ. ಅರುಣ್ ಮತ್ತು ಬಾಬು‌ ಎಂಬಿಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದೇವೆ. ಈ ವೇಳೆ ಖಾಸಗಿ ಕಂಪನಿ 15ನೇ ವರ್ಷದ ವಾರ್ಷಿಕೋತ್ಸವಕ್ಕೆ ಶಾರ್ಟ್ ವಿಡಿಯೋ ಮಾಡಲು ಡ್ರೋನ್​ ಹಾರಿಸಿದ್ದೇವೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ವಾರ್ನಿಂಗ್​ ಕೊಟ್ಟು ಬಿಟ್ಟು ಕಳಿಸಿದ್ದೇವೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ವಿಧಾನಸೌಧದಲ್ಲೇ ಡ್ರೋನ್​ ಹಾರಿಸಿದ ಇಬ್ಬರು ಅರೆಸ್ಟ್​

https://newsfirstlive.com/wp-content/uploads/2023/07/Vidhana-Soudha-1.jpg

Load More