newsfirstkannada.com

ಮನೆಗೆ ಆಸರೆಯಾಗಿದ್ದ ಜೋಡೆತ್ತು ಕಳ್ಳತನ.. ಕಣ್ಣೀರಿಡುತ್ತಿದೆ ಅನ್ನದಾತನ ಕುಟುಂಬ

Share :

23-08-2023

    ಕೊಟ್ಟಿಗೆಯಲ್ಲಿ ಕಟ್ಟಿದ್ದ ಜೋಡೆತ್ತುಗಳು ರಾತ್ರೋ ರಾತ್ರಿ ಕಳ್ಳತನ

    ನಾಯಿಗೆ ಅಮಲು ಬರೋ ಔಷಧ ನೀಡಿದ್ರಾ ಆರೋಪಿಗಳು?

    ಪ್ರೀತಿಯ ಎತ್ತುಗಳನ್ನು ಕಳೆದುಕೊಂಡು ರೈತ ಕುಟುಂಬ ಕಣ್ಣೀರು

ಚಿಕ್ಕಮಗಳೂರು: ರೈತನೊರ್ವ ತಮ್ಮ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಒಂದೂವರೆ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಜೋಡೆತ್ತುಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ಕಡೂರು ತಾಲೂಕಿನ‌ ದೇವನೂರು ಗ್ರಾಮದಲ್ಲಿ ನಡೆದಿದೆ.

ದೇವನೂರು ಗ್ರಾಮದ ರೈತ ಲೋಕೇಶ್ ಗೌಡ ಎಂಬುವರಿಗೆ ಸೇರಿದ ಎರಡು ಎತ್ತುಗಳು. ಎಂದಿನಂತೆ ಎತ್ತುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮನೆಯಲ್ಲಿ ಮಲಗಿದ್ದಾರೆ. ಈ ವೇಳೆ ರಾತ್ರಿ ದುಷ್ಕರ್ಮಿಗಳು ಬಂದು ಎತ್ತುಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ. ಅಲ್ಲದೇ ಮನೆಯಲ್ಲಿ ನಾಯಿ ಇದ್ದರೂ ಅದಕ್ಕೆ ಅಮಲು ಬರೋ ಔಷಧ ನೀಡಿ ಕಳ್ಳತನ ಮಾಡಿದ್ದಾರೆ ಎನ್ನಲಾಗ್ತಿದೆ. ಎತ್ತು ಕಳೆದುಕೊಂಡು ರೈತ ಲೋಕೇಶ್ ಕುಟುಂಬಸ್ಥರು ಹೇಗೆ ಜೀವನ ಮಾಡಬೇಕು ಎಂದು ದಿಕ್ಕು ದೋಚದಂತಾಗಿದೆ. ಅಲ್ಲದೇ ಲೋಕೇಶ್ ಅವರ ಪತ್ನಿ ಕಣ್ಣೀರು ಹಾಕಿದ್ದು ಅವುಗಳಿಂದಲೇ ಜೀವನ ನಡೆಯುತ್ತಿತ್ತು ಎಂದಿದ್ದಾರೆ.

ರೈತ ಲೋಕೇಶ್ ಗೌಡ ಪತ್ನಿ ಕಣ್ಣೀರು

ಇನ್ನು ಕಳ್ಳತನವಾಗಿರುವ ಎತ್ತುಗಳು ಮನೆಯಲ್ಲಿಯೇ ಹುಟ್ಟಿ ಬೆಳೆದಿದ್ದರಿಂದ ಒಳ್ಳೆಯ ಆಹಾರವನ್ನಿಟ್ಟು ದಷ್ಟಪುಷ್ಟವಾಗಿ ಬೆಳೆಸಿದ್ದರು. ಮನೆ ಸಂಸಾರಕ್ಕೆ ಎತ್ತುಗಳು ಆಸರೆಯಾಗಿದ್ದು ಮಕ್ಕಳಂತ್ತಿದ್ದ ಜೋಡೆತ್ತುಗಳನ್ನು ಅಪರಿಚಿತರು ಕಳ್ಳತನ ಮಾಡಿದ್ದರಿಂದ ಕುಟುಂಬ ಕಣ್ಣೀರಿಡುತ್ತಿದೆ. ಈ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೆಲ‌ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆಗೆ ಆಸರೆಯಾಗಿದ್ದ ಜೋಡೆತ್ತು ಕಳ್ಳತನ.. ಕಣ್ಣೀರಿಡುತ್ತಿದೆ ಅನ್ನದಾತನ ಕುಟುಂಬ

https://newsfirstlive.com/wp-content/uploads/2023/08/CKM_Bulls_stolen.jpg

Load More